ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತದ ಜೊತೆ ನಿಂತ ಜಾಗತಿಕ ಸಂಸ್ಥೆಗಳು

|
Google Oneindia Kannada News

ನವದೆಹಲಿ, ಏಪ್ರಿಲ್ 29: ಭಾರತದಲ್ಲಿ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳು ಎಲ್ಲಾ ದಾಖಲೆಗಳನ್ನು ಮೀರುತ್ತಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕದ ಅಭಾವ ಮಿತಿ ಮೀರಿದೆ. ಹಲವು ದೇಶಗಳು ಭಾರತಕ್ಕೆ ಸಹಾಯ ಹಸ್ತ ಚಾಚಿವೆ.

ಇದೀಗ ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ ಹಲವು ಕಂಪನಿಗಳೂ ಬೆಂಬಲ ವ್ಯಕ್ತಪಡಿಸಿವೆ. ಈ ಬಿಕ್ಕಟ್ಟಿನಿಂದ ಹೊರಬರಲು ಜಾಗತಿಕ ಉದ್ಯಮ ಸಂಸ್ಥೆಗಳಾದ ಅಮೆಜಾನ್, ರಿಲಯನ್ಸ್, ಟಾಟಾ ಗ್ರೂಪ್, ಗೈಲೀಡ್ ಸೈನ್ಸ್, ಬ್ಲಾಕ್‌ಸ್ಟೋನ್, ಆಲ್ಫಬೆಟಿಕ್ ಇಂಕ್ ಸಂಸ್ಥೆಗಳು ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿವೆ.

ಕೋವಿಡ್ ಪರಿಸ್ಥಿತಿ ಬಗ್ಗೆ ಮೋದಿ- ಪುಟಿನ್ ಸಮಾಲೋಚನೆ ಕೋವಿಡ್ ಪರಿಸ್ಥಿತಿ ಬಗ್ಗೆ ಮೋದಿ- ಪುಟಿನ್ ಸಮಾಲೋಚನೆ

ಆಮ್ಲಜನಕ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೆ ದೇಣಿಗೆ ನೀಡುತ್ತಿವೆ.

ಈಚೆಗೆ ಭಾರತದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಅಂತ್ಯಸಂಸ್ಕಾರಕ್ಕೂ ಪರದಾಡುವಂಥ ಸ್ಥಿತಿ ಏರ್ಪಟ್ಟಿದೆ.

Google Amazon And Other Global Companies Helping India To Fight Against Coronavirus

ರಿಲಯನ್ಸ್, ಟಾಟಾ ಸ್ಟೀಲ್ ಲಿಮಿಟೆಡ್, ಅರ್ಸೆರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಹಾಗೂ ಜೆಎಸ್‌ಡಬ್ಲು ಸ್ಟೀಲ್ ಲಿಮಿಟೆಡ್ ಸಾವಿರಗಟ್ಟಲೆ ಮೆಟ್ರಿಕ್ ಟನ್‌ಗಳ ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ಒದಗಿಸಿವೆ.

ಭಾರತದಲ್ಲಿ ಗುರುವಾರ 3,79,257 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 3645 ಮಂದಿ ಸಾವನ್ನಪ್ಪಿದ್ದಾರೆ, 2,69,507 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1,83,76,524 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೆ 1,50,86,878 ಮಂದಿ ಗುಣಮುಖರಾಗಿದ್ದಾರೆ. 30,84,814 ಪ್ರಕರಣಗಳು ಸಕ್ರಿಯವಾಗಿವೆ.

English summary
Some Global companies helping india to fight against coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X