ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಿನ ಚುಟುಕು ನಿದ್ದೆ ಹೃದಯ ಕಾಯಿಲೆ ದೂರ ಮಾಡುತ್ತದೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12 : ಬೆಳಗಿನ ಹೊತ್ತು ನಿದ್ದೆ ಮಾಡುವವರಿಗೆ ಸೋಮಾರಿ ಎಂದು ಟೀಕಿಸುವ ಜನರಿದ್ದಾರೆ. ಆದರೆ, ಸಂಶೋಧನೆಯ ಪ್ರಕಾರ ಬೆಳಗಿನ ನಿದ್ದೆಯ ಸವಿ ಸವಿಯುವವರಿಗೆ ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ.

ಸ್ವಿಡ್ಜರ್‌ಲ್ಯಾಂಡ್ ಮೂಲದ ವಿಶ್ವವಿದ್ಯಾಲಯ 35 ರಿಂದ 75 ವರ್ಷದವರೆಗಿನ 3,642 ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಸುಮಾರು 5 ವರ್ಷಗಳ ಕಾಲ ನಿರಂತರವಾಗಿ ಅಧ್ಯಯನ ನಡೆಸಿ ಬೆಳಗಿನ ನಿದ್ದೆ ಸವಿಯುವವರಿಗೆ ಸಿಹಿ ಸುದ್ದಿ ನೀಡಿದೆ.

ನಿದ್ರಿಸುವ ವಿಚಾರವನ್ನು ನಿದ್ರೆಗೆ ಭಂಗವಾದಂತೆ ಅರಿಯೋಣ ಬನ್ನಿನಿದ್ರಿಸುವ ವಿಚಾರವನ್ನು ನಿದ್ರೆಗೆ ಭಂಗವಾದಂತೆ ಅರಿಯೋಣ ಬನ್ನಿ

ವಾರದಲ್ಲಿ ಮೂರು ಅಥವ ನಾಲ್ಕು ಬಾರಿ 5 ನಿಮಿಷದಿಂದ 1 ಗಂಟೆಯ ತನಕ ಬೆಳಗಿನ ನಿದ್ದೆ ಸವಿಯುವವರಿಗೆ ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಕಡಿಮೆ ಎಂಬುದು ಸಂಶೋಧನಾ ವರದಿಯ ಸಾರಾಂಶವಾಗಿದೆ.

ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ, ಇಲ್ಲಿದೆ ವಾಸ್ತು ಟಿಪ್ಸ್ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ, ಇಲ್ಲಿದೆ ವಾಸ್ತು ಟಿಪ್ಸ್

Good News For Who Loves Daytime Naps

University Hospital of Lausanne ನಡೆಸಿದ ಸಮೀಕ್ಷೆ ಪ್ರಕಾರ ಬೆಳಗಿನ ನಿದ್ದೆ ಸವಿಯುವವರಿಗೆ ಹೃದಯಾಘಾತ, ಹೃದಯ ನಾಳದ ಕಾಯಿಲೆ ಬರುವ ಪ್ರಮಾಣ ಶೇ 48ರಷ್ಟು ಕಡಿಮೆ ಇರುತ್ತದೆ. ಆದರೆ, ಪ್ರತಿದಿನ ಬೆಳಗಿನ ಹೊತ್ತು ನಿದ್ರಿಸುವವರು, 1 ಗಂಟೆಗಿಂತ ಹೆಚ್ಚು ನಿದ್ದೆ ಮಾಡುವವರನ್ನು ಸಮೀಕ್ಷೆ ಪರಿಗಣಿಸಿಲ್ಲ.

ಮಲಗುವ ಕೋಣೆಯಲ್ಲಿ ಸಾಕು ಪ್ರಾಣಿಯಿದ್ದರೆ ಸುಖ ನಿದ್ದೆಮಲಗುವ ಕೋಣೆಯಲ್ಲಿ ಸಾಕು ಪ್ರಾಣಿಯಿದ್ದರೆ ಸುಖ ನಿದ್ದೆ

ಬೆಳಗಿನ ನಿದ್ದೆಯ ಅವಧಿ ಎಷ್ಪಿರಬೇಕು? ಎಂಬ ಬಗ್ಗೆ ಇದುವರೆಗೂ ಯಾವುದೇ ಸಂಶೋಧನೆಗಳು ಸರಿಯಾದ ಮಾಹಿತಿ ನೀಡಿಲ್ಲ. ಆದರೆ, 5 ನಿಮಿಷದಿಂದ 1 ಗಂಟೆಯ ನಿದ್ದೆ ಆರೋಗ್ಯಕರವಾಗಿರಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ನಿದ್ದೆ ಸರಿಯಾಗಿ ಆಗದಿದ್ದರೆ ಅದು ದೇಹದ ದಣಿವಿಗೆ ಕಾರಣವಾಗುತ್ತದೆ. ಆದರೆ, ಬೆಳಗಿನ ಕೆಲವು ಹೊತ್ತಿನ ನಿದ್ದೆ ಮನಸ್ಸಿನ ಉಲ್ಲಾಸ ಮತ್ತು ಆರೋಗ್ಯಕರ ಹೃದಯಕ್ಕೆ ಅನುಕೂಲ ಎಂಬುದು ಈ ಸಮೀಕ್ಷೆಯ ವರದಿಯಾಗಿದೆ.

English summary
Switzerland university hospital of Lausanne servery reveled that daytime nap taken once or twice a week can lower the risk of heart disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X