ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೆಯ ಅಬ್ಬರಕ್ಕೆ ಸಿಕ್ಕರೂ ಬದುಕಿಬಂದ ಕಮಾಂಡರ್ ಅಭಿಲಾಶ್!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಅಪಾಯಕ್ಕೆ ಸಿಲುಕಿದ್ದ ಗೋಲ್ಡನ್ ಗ್ಲೋಬ್ ರೇಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ, ಭಾರತೀಯ ನೌಕಾಸೇನೆ ಕಮಾಂಡರ್ ಅಭಿಲಾಶ್ ಟಾಮಿಯವರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಸೇನೆ ಹೇಳಿದೆ.

ಹಿಂದು ಮಹಾಸಾಗರದಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿ ಕಾಣೆಯಾಗಿದ್ದ ಅಭಿಲಾಶ್ ರಕ್ಷಣೆಗೆ ಭಾರತೀಯ ನೌಕಾಸೇನೆ ಹರಸಾಹಸ ಪಟ್ಟಿತ್ತು. ಭೀಕರ ಅಲೆಗಳ ಹೊಡೆತಕ್ಕೆ ಸಿಕ್ಕು ಅವರು ಆಸ್ಟ್ರೇಲಿಯಾದ ಪರ್ಥ ಬಳಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಅಭಿಲಾಶ್ ರಕ್ಷಣೆಗೆ ಆಸ್ಟ್ರೇಲಿಯಾ ಸರ್ಕಾರವೂ ನೆರವು ನೀಡಿತ್ತು.

ಹಿಂದು ಮಹಾಸಾಗರದ ಅಲೆಗೆ ಸಿಕ್ಕ ಅಭಿಲಾಶ್ ರಕ್ಷಣೆಗೆ ಶತಪ್ರಯತ್ನಹಿಂದು ಮಹಾಸಾಗರದ ಅಲೆಗೆ ಸಿಕ್ಕ ಅಭಿಲಾಶ್ ರಕ್ಷಣೆಗೆ ಶತಪ್ರಯತ್ನ

ಅವರನ್ನು ರಕ್ಷಿಸಲಾಗಿದ್ದು, ಸದ್ಯಕ್ಕೆ ಫ್ರೆಂಚ್ ಫಿಶಿಂಗ್ ಹಾಯಿದೋಣಿಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಜ್ಞಾವಸ್ಥೆಯಲ್ಲೇ ಇರುವ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಭಾರತೀಯ ನೌಕಾಸೇನೆಯ ವಕ್ತಾರ ಕ್ಯಾ.ಡಿ ಕೆ ಶರ್ಮಾ ತಿಳಿಸಿದ್ದಾರೆ.

Golden Globe Race: Indian Navy Commander Abhilash Tomy rescued

39 ವರ್ಷ ವಯಸ್ಸಿನ ಅಭಿಲಾಶ್, 2013 ರಲ್ಲಿ ಹಾಯಿದೋಣಿಯ ಮೂಲಕ ವಿಶ್ವ ಪರ್ಯಟನೆ ಮಾಡಿದ ಏಕೈಕ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದೆ.

English summary
The Golden Globe Race (GGR) skipper and Indian Naval officer, Commander Abhilash Tomy, who got dismasted and suffered a back injury, has been rescued, the Indian Navy announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X