ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ ಕಳ್ಳ ಸಾಗಣೆಯ ಹೊಸ ಮಾರ್ಗಗಳು ಯಾವವು!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 27: ಚಿನ್ನ ಅಕ್ರಮ ಸಾಗಾಟ ಇಂದು ನಿನ್ನೆಯ ಕತೆಯಲ್ಲ. ಕಾಲಿಗೆ ಹಾಕುವ ಶೂನಲ್ಲಿ, ಬರೆಯುವ ಪೆನ್ ನಲ್ಲಿ ಅಷ್ಟೇ ಏಕೆ ಬಾಯಿಂದ ನುಂಗಿ ಹೊಟ್ಟೆಯೊಳಗೆ ಇಟ್ಟುಕೊಂಡು ಚಿನ್ನ ಸಾಗಾಟಕ್ಕೆ ಯತ್ನಿಸಿ ಬಂಧಿತರಾದವರ ಮತ್ತು ಆಗುತ್ತಿರುವವರ ಸುದ್ದಿ ಕೇಳಿದ್ದೇವೆ ಹಾಗೂ ನೋಡಿದ್ದೇವೆ.

ಪೊಲೀಸರು ಹಿಡಿಯುತ್ತಾರೆ ಎಂದು ಮನಗಂಡಿರುವ ಕಳ್ಳ ಸಾಗಣೆದಾರರು ಪ್ರತಿ ದಿನ ಹೊಸ ಹೊಸ ತಂತ್ರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ಟಾರ್ಚ್ ನಲ್ಲಿ ಚಿನ್ನ ಸಾಗಾಟ.[ಮೈಸೂರು ಅರಮನೆ ಚಿನ್ನದ ಲೇಪನದಲ್ಲಿ ಅಕ್ರಮ]

gold

ಬ್ಯಾಟರಿಯಲ್ಲಿ ಚಿನ್ನ ಸಾಗಾಟದ ಕತೆಯೇ ವಿಚಿತ್ರ ಮತ್ತು ಅಷ್ಟೇ ಕುತೂಹಲಕಾರಿ. ಭಾರತಕ್ಕೆ ಆಗಮಿಸಿದ ಕೋರಿಯರ್ ಒಂದನ್ನು ತೆರೆದು ನೋಡಿದಾಗ ವಿಚಕ್ಷಣಾ ಅಧಿಕಾರಿಗಳು ದಂಗು ಬಡಿದಿದ್ದರು. ಟಾರ್ಚ್ ಒಳಗೆ ಬಳಸಿದ್ದ ಎಲ್ಲ ಬ್ಯಾಟರಿಗಳು ಚಿನ್ನದಿಂದ ಮಾಡಿದ್ದವಾಗಿದ್ದವು.

ದೆಹಲಿಯ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಮಾಡಿದಾಗ ಇಂಥ ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿತು. ನಂತರ ದೇಶದ ಅನೇಕ ಕಡೆ ಈ ಬಗೆಯ ಸಾಗಣೆ ಪ್ರಯತ್ನಗಳು ಪೊಲೀಸರ ತಲೆಕೆಡಿಸಿದ್ದವು. ಕಳೆದ ಒಂದು ವರ್ಷದ ಅವಧಿಯಲ್ಲಿ 3 ಸಾವಿರ ಕೆಜಿ ಚಿನ್ನವನ್ನು ಈ ಬಗೆಯಲ್ಲೇ ವಶಪಡಿಸಿಕೊಳ್ಳಲಾಗಿದೆ.[ಹಳದಿ ಲೋಹದ ಮೇಲಿನ ಮೋಹ ಶೇ 15ರಷ್ಟು ಏರಿಕೆ!]

ಕೋರಿಯರ್ ನಲ್ಲಿ ಚಿನ್ನ
ಮೊದಲಿನಂತೆ ಈಗ ಹಡಗಿನ ಮೂಲಕ ಅಕ್ರಮ ಚಿನ್ನ ದೇಶದ ಒಳಗೆ ಬರುವುದಿಲ್ಲ. ಕೋರಿಯರ್ ಮೂಲಕವೇ ಚಿನ್ನ ಸಾಗಿಸುವ ಕಾರ್ಯವನ್ನು ಕಳ್ಳ ಸಾಗಣೆದಾರರು ಬಹಳ ನಿಖರವಾಗಿ ಮಾಡುತ್ತಿದ್ದಾರೆ. ಚಿನ್ನದ ಸಿಡಿಗಳು, ಚಿನ್ನದ ರೆಡಿಯೋ, ಚಿನ್ನದ ಬ್ಲೇಡ್ ಸಹ ದುಬೈನಿಂದ ಚೆನ್ನೈಗೆ ಬಂದಿಳಿದಿತ್ತು.

ಒಂದೆ ಬಗೆಯ ಪ್ಯಾಕ್ ಗಳು ನಿರಂತರವಾಗಿ ಕೋರಿಯರ್ ಮೂಲಕ ಬರುತ್ತಿರುವುದನ್ನು ಮನಗಂಡ ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದಾಗ ಕಳ್ಳ ಸಾಗಣೆ ಸಂಗತಿ ಬಯಲಿಗೆ ಬಂದಿದೆ. [ವಿಮಾನದಲ್ಲೇ 9 ಕೆಜಿ ಚಿನ್ನ ಬಿಟ್ಟು ಹೋದ]

ಹೊಸ ಹೊಸ ಮಾರ್ಗ
ನೇಪಾಳದ ಮೂಲಕ ಹೆಚ್ಚಿನ ಪ್ರಮಾಣದ ಅಕ್ರಮ ಚಿನ್ನ ದೇಶದ ಒಳಕ್ಕೆ ಪ್ರವೇಶ ಮಾಡುತ್ತಿತ್ತು. ಆದರೆ ಭೂಕಂಪನದಿಂದ ನೇಪಾಳ ತತ್ತರಿಸಿದ ಮೇಲೆ ಕಳ್ಳ ಸಾಗಣೆದಾರರು ಹೊಸ ಮಾರ್ಗ ಕಂಡುಕೊಂಡರು.

ಯಾವಾಗ ಭಾರತ ಸರ್ಕಾರ ಚಿನ್ನ ಆಮದು ಮೇಲಿನ ಸುಂಕವನ್ನು ಹೆಚ್ಚು ಮಾಡಿತೋ ಇದೇ ನಮಗೆ ಹೆಚ್ಚು ಲಾಭ ಮಾಡಿಕೊಳ್ಳಲು ಅವಕಾಶ ಎಂದುಕೊಂಡ ಕಳ್ಳ ಸಾಗಣೆದಾರರು ಹೊಸ ಹೊಸ ಮಾರ್ಗ ಆವಿಷ್ಕಾರ ಮಾಡತೊಡಗಿದರು. ದುಬೈ, ಚೀನಾ ಮಾರುಕಟ್ಟೆಯ ಮೇಲೂ ಲಗ್ಗೆ ಇಟ್ಟರು.

ಶ್ರೀಲಂಕಾ ಮಾರ್ಗವಾಗಿ ತಮಿಳುನಾಡಿಗೆ, ಬಾಂಗ್ಲಾದೇಶದ ಮಾರ್ಗವಾಗಿ ಪಶ್ಚಿಮ ಬಂಗಾಳಕ್ಕೆ, ಗುಜರಾತಿನ ಕಾಂಡ್ಲಾ ಬಂದರಿಗೆ ಚಿನ್ನ ಅಕ್ರಮವಾಗಿ ತಲುಪಿಸುವ ಕಾರ್ಯ ಆರಂಭವಾಯಿತು.

ತೀವ್ರ ಬೆಳವಣಿಗೆ
ಚಿನ್ನ ಅಕ್ರಮ ಸಾಗಾಟ ತೀವ್ರ ಏರಿಕೆ ಕಂಡಿದೆ. ಒಟ್ಟು 1200 ಕೋಟಿ ರು. ಬೆಲೆಬಾಳುವ ಚಿನ್ನವನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಡಿಆರ್ ಐ ನ ಹಿರಿಯ ಅಧಿಕಾರಿಯೊಬ್ಬರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

2011-12 ರ ಅವಧಿಯಲ್ಲಿ ಕೇವಲ 70-80 ಕೋಟಿ ಮೌಲ್ಯದ ಚಿನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಯಾವಾಗ ಆಮದು ಸುಂಕ ಹೆಚ್ಚು ಮಾಡಲಾಯಿತೋ ಅಲ್ಲಿಂದಲೇ ಅಕ್ರಮ ಸಾಗಾಟ ತೀವ್ರ ಏರಿಕೆ ಕಂಡಿತು. (ಒನ್ಇಂಡಿಯಾ ನ್ಯೂಸ್)

English summary
Smugglers find unique ways to send in their goods into the Indian market. A recent case in which a torch was sent to India by a courier has opened up the Pandora's box. When the officials opened up the torch as they were suspicious about it, they found that it had batteries made out of gold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X