ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಚಿನ್ನದ ಕಥೆ: ವಾಸ್ತವ ಸಂಗತಿಯೇನು?

|
Google Oneindia Kannada News

ಲಕ್ನೋ, ಫೆಬ್ರವರಿ 24: ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ 3,500 ಟನ್‌ನಷ್ಟು ಚಿನ್ನದ ನಿಕ್ಷೇಪ ಎಂಬುದು ಫೆ. 20ರಂದು ದೊಡ್ಡ ಸುದ್ದಿಯಾಗಿತ್ತು. ಎಲ್ಲ ಪತ್ರಿಕೆ, ಮಾಧ್ಯಮಗಳಲ್ಲಿಯೂ ಇದು ವ್ಯಾಪಕ ಪ್ರಚಾರ ಪಡೆದಿತ್ತು. 12 ಲಕ್ಷ ಕೋಟಿ ಮೌಲ್ಯದ ಈ ಚಿನ್ನದ ನಿಕ್ಷೇಪ, ದೇಶದಲ್ಲಿ ಈಗಿರುವ ಚಿನ್ನದ ಗಣಿಗಳಿಗಿಂತ ಐದು ಪಟ್ಟು ಹೆಚ್ಚು ಎಂದು ಹೇಳಲಾಗಿತ್ತು.

ಈ ಸುದ್ದಿಯನ್ನು ಹಂಚಿಕೊಂಡು ಅನೇಕ ಪ್ರಮುಖ ವ್ಯಕ್ತಿಗಳು ಸಂಭ್ರಮಿಸಿದ್ದರು. ಜಿಲ್ಲಾ ಗಣಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ಆಧರಿಸಿ ಈ ವರದಿ ಮಾಡಲಾಗಿತ್ತು. ಭಾರತದ ಪ್ರಸ್ತುತ ಚಿನ್ನದ ನಿಕ್ಷೇಪಗಳು 626 ಟನ್‌ನಷ್ಟು ಇವೆ. ಈ ಚಿನ್ನದ ನಿಕ್ಷೇಪದಂತೆ ಭಾರತವು ಜಗತ್ತಿನಲ್ಲಿ ಎರಡನೆಯ ಸ್ಥಾನಕ್ಕೆ ಜಿಗಿಯುತ್ತಿತ್ತು. ಅತಿ ಹೆಚ್ಚು ಚಿನ್ನದ ನಿಕ್ಷೇಪ ಇರುವುದು ಅಮೆರಿಕದಲ್ಲಿ. ಅಲ್ಲಿ 8,133.5 ಟನ್ ಚಿನ್ನವಿದೆ.

ಈ ಸುದ್ದಿ ವ್ಯಾಪಕ ಪ್ರಚಾರ ಪಡೆದ ಬಳಿಕ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ ಹೇಳಿಕೆ ನೀಡಿ, ಇಷ್ಟು ಪ್ರಮಾಣದಲ್ಲಿ ಚಿನ್ನದ ಗಣಿ ಪತ್ತೆಯಾಗಿದೆ ಎಂಬುದನ್ನು ನಿರಾಕರಿಸಿತು.

ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಪತ್ತೆಯಾಯ್ತು 3,350 ಟನ್ ಚಿನ್ನ!ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಪತ್ತೆಯಾಯ್ತು 3,350 ಟನ್ ಚಿನ್ನ!

ಚಿನ್ನದ ಗುಣಮಟ್ಟದ ಆಧಾರದಲ್ಲಿ ಎಷ್ಟು ಪ್ರಮಾಣದ ಚಿನ್ನ ಹೊರತೆಗೆಯಬಹುದು ಎಂಬುದನ್ನು ನಿರ್ಧರಿಸಬಹುದು ಎಂದು ಬಿಎಚ್‌ಯುದ ಭೂವಿಜ್ಞಾನ ಪ್ರಾಧ್ಯಾಪಕ ಡಾ.ರೋಹತಾಶ್ ಹೇಳಿದ್ದರು. ಆದರೆ ಇಂಗ್ಲಿಷ್ ಮಾಧ್ಯಮಗಳು ಬೇರೆಯದೇ ರೀತಿ ಇದನ್ನು ಅರ್ಥೈಸಿ ವರದಿ ಮಾಡಿದವು. ಉಳಿದ ಪ್ರಾದೇಶಿಕ ಮಾಧ್ಯಮಗಳೂ ಅವುಗಳನ್ನು ಅನುಸರಿಸಿದವು.

ಎರಡು ಕಡೆ ಚಿನ್ನ ಪತ್ತೆ

ಎರಡು ಕಡೆ ಚಿನ್ನ ಪತ್ತೆ

ಫೆ. 21ರಂದು ಸುದ್ದಿ ಪ್ರಕಟಿಸಿದ್ದ ಎಎನ್‌ಐ ಸುದ್ದಿ ಸಂಸ್ಥೆ, ಸೋನ್ ಪಹಾಡಿಯಲ್ಲಿ 2,700 ಮಿಲಿಯನ್ ಟನ್ ಮತ್ತು ಹರ್ಡಿಯಲ್ಲಿ 650 ಮಿಲಿಯನ್ ಟನ್ ಚಿನ್ನದ ಗಣಿ ಇದೆ ಎಂದು ಕೆಕೆ ರಾಯ್ ಅವರ ಹೇಳಿಕೆಯನ್ನು ಉಲ್ಲೇಖಿಸಿತ್ತು. ಈ ಹೇಳಿಕೆಯನ್ನು ದೂರದರ್ಶನ ಕೂಡ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿತ್ತು. ಬಳಿಕ ಅದನ್ನು ಡಿಲೀಟ್ ಮಾಡಲಾಯಿತು.

ಈ ಸುದ್ದಿಯನ್ನು ಆಧರಿಸಿ ವಿವಿಧ ಪತ್ರಿಕೆಗಳು ವಿಭಿನ್ನ ವರದಿಗಳನ್ನು ಪ್ರಕಟಿಸಿದ್ದವು. ಟೈಮ್ಸ್ ಆಫ್ ಇಂಡಿಯಾ, ವಿವಿಧ ದೇಶಗಳಲ್ಲಿ ಲಭ್ಯವಿರುವ ಚಿನ್ನದ ನಿಕ್ಷೇಪಗಳ ಪ್ರಮಾಣಗಳ ಮೌಲ್ಯ ಮತ್ತು ಭಾರತದಲ್ಲಿ ದೊರೆತ ಚಿನ್ನದ ಮೌಲ್ಯಗಳನ್ನು ಹೋಲಿಸಿ ಪಟ್ಟಿ ಪ್ರಕಟಿಸಿತ್ತು.

ಅಷ್ಟು ಚಿನ್ನ ಸಿಕ್ಕಿಲ್ಲ

ಅಷ್ಟು ಚಿನ್ನ ಸಿಕ್ಕಿಲ್ಲ

ಈ ಚಿನ್ನದ ಸಂಪತ್ತು ಭಾರತವನ್ನು ಆರ್ಥಿಕವಾಗಿ ಸದೃಢ ಮಾಡಲು ನೆರವಾಗಲಿದೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೆ.ಪಿ ಮೌರ್ಯ ಹೇಳಿದ್ದರೆ, ಜಾಗತಿಕ ಚಿನ್ನದ ಮಾರುಕಟ್ಟೆಯನ್ನು ಭಾರತ ನಿಯಂತ್ರಿಸುವ ಸಾಧ್ಯತೆ ಇದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಎಸ್. ಗುರುಮೂರ್ತಿ ಟ್ವೀಟ್ ಮಾಡಿದ್ದರು.

ಆದರೆ, ಜಿಎಸ್‌ಐ ಪ್ರಧಾನ ನಿರ್ದೇಶಕ ಎಂ. ಶ್ರೀಧರ್ ಈ ವರದಿಗಳಿಗೆ ಸ್ಪಷ್ಟೀಕರಣ ನೀಡಿ, ಅಷ್ಟು ಬೃಹತ್ ಮಟ್ಟದಲ್ಲಿ ಚಿನ್ನದ ನಿಕ್ಷೇಪಗಳು ಸೋನಭದ್ರದಲ್ಲಿ ಕಾಣಿಸಿಕೊಂಡಿದೆ ಎಂದು ಜಿಎಸ್‌ಐ ಅಂದಾಜಿಸಿಯೇ ಇಲ್ಲ ಎಂದು ಹೇಳಿದರು.

ನಿಕ್ಷೇಪ ಇದ್ದರೂ ಚಿನ್ನ ಸಿಗುವುದಿಲ್ಲ

ನಿಕ್ಷೇಪ ಇದ್ದರೂ ಚಿನ್ನ ಸಿಗುವುದಿಲ್ಲ

ಸಮೀಕ್ಷೆ ಮಾಡಿರುವ ಪ್ರದೇಶದಲ್ಲಿ ಪ್ರತಿ ಟನ್‌ ಚಿನ್ನದಲ್ಲಿ ಸರಾಸರಿ 3.03 ಗ್ರಾಂನಷ್ಟು ಮಾತ್ರ ಗುಣಮಟ್ಟದ ಚಿನ್ನವನ್ನು ಹೊರತೆಗೆಯಬಹುದು. ಅಲ್ಲಿರುವ ಒಟ್ಟು 52,806.25 ಟನ್ ಸಂಪನ್ಮೂಲದಲ್ಲಿ ಅಂದಾಜು 160 ಕೆ.ಜಿ. ಚಿನ್ನ ಸಿಗಬಹುದೇ ವಿನಾ, ಮಾಧ್ಯಮಗಳಲ್ಲಿ ವರದಿಯಾದಂತೆ 3,350 ಟನ್ ಅಲ್ಲ ಎಂದು ಅವರು ವಿವರಿಸಿದ್ದಾರೆ.

1992ರಿಂದಲೂ ಅಲ್ಲಿ ಸಂಶೋಧನೆಗಳು ನಡೆಯುತ್ತಿದ್ದು, 1998-2000ದ ಅವಧಿಯಲ್ಲಿ ನಡೆದ ಸಂಶೋಧನೆ ಬಳಿಕ ಯಾವುದೇ ಹೊಸ ಪತ್ತೆ ನಡೆದಿಲ್ಲ. 2011ರ ಅಕ್ಟೋಬರ್‌ನಲ್ಲಿ ಗಣಿ ಸಚಿವಾಲಯ ಚಿನ್ನದ ಪತ್ತೆ ಕುರಿತು ವರದಿ ಪ್ರಕಟಿಸಿತ್ತು. ಅದರಲ್ಲಿ 53,000 ಟನ್ ಚಿನ್ನದ ನಿಕ್ಷೇಪದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದೂ ಒಟ್ಟಾರೆ ಖನಿಜವೇ ವನಾ, ಅದರಲ್ಲಿ ಹುದುಗಿರುವ ನಿಖರವಾದ ಚಿನ್ನದ ಲಭ್ಯತೆಯನ್ನು ಅಂದಾಜಿಸಿರಲಿಲ್ಲ.

160 ಕೆ.ಜಿ ಚಿನ್ನ ಸಿಗಬಹುದು

160 ಕೆ.ಜಿ ಚಿನ್ನ ಸಿಗಬಹುದು

ನಿಕ್ಷೇಪದಲ್ಲಿ ಸಿಗುವ ಚಿನ್ನದ ಭಾಗವನ್ನು ಪ್ರತಿ ಮೆಟ್ರಿಕ್‌ ಟನ್‌ನಲ್ಲಿ ಗ್ರಾಂ ಆಧಾರದಲ್ಲಿ ಗುರುತಿಸಲಾಗುತ್ತದೆ. ಭೂಮಿ ಒಳಗೆ ಹುದುಗಿರುವ ಗಣಿಗಳಲ್ಲಿ ಉತ್ತಮ ಗುಣಮಟ್ಟದ ಚಿನ್ನ 8-10 ಗ್ರಾಂ. ಮೆಟ್ರಿಕ್ ಟನ್ ಹೊಂದಿರುತ್ತದೆ. ಸ್ವಲ್ಪ ಮೇಲ್ಭಾಗದಲ್ಲಿ ದೊರಕುವ ಚಿನ್ನ 4-6 g/t ಇದ್ದರೆ, ಹೊರಭಾಗದಲ್ಲಿ ಸಿಗುವ ಚಿನ್ನ 1-4 g/t ಇರುತ್ತದೆ.


ಇದರಂತೆ ಸೋನಭದ್ರಾ ದಲ್ಲಿ ಇರುವ ಚಿನ್ನವು 10 g/t ಗುಣಮಟ್ಟ ಹೊಂದಿದ್ದರೂ, 3500 ಟನ್ ಖನಿಜದಲ್ಲಿ ಸಿಗುವುದು 35 ಕೆ.ಜಿ. ಚಿನ್ನ ಮಾತ್ರ. ಜಿಎಸ್‌ಐ ಅಂದಾಜಿಸಿರುವಂತೆ ಇಲ್ಲಿ 52,806.25 ಟನ್ ಖನಿಜವಿದ್ದು, ಸರಾಸರಿ 3.03 g/t ಪ್ರಮಾಣವು 160 ಕೆ.ಜಿ ಚಿನ್ನ ಒದಗಿಸಬಲ್ಲದು.

English summary
The news of finding 3,500 tonnes of gold reserve in Uttar Pradesh's Sonbhadra went viral. But the truth behind the mines is not as media reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X