• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಸಾಲಸೋಲ: ಬಡ್ಡಿ ವಿಷ್ಯಾ ಹೇಗೆ?

By Srinath
|

ಬೆಂಗಳೂರು: ಚಿನ್ನವನ್ನು ಅದರ ಆಭರಣದ ಮೇಲಿನ ಮೋಹಕ್ಕಿಂತ ಹೆಚ್ಚಾಗಿ ತುರ್ತು ಸಂದರ್ಭಗಳಲ್ಲಿ ಸಾಲವನ್ನೊದಗಿಸುವ ಹಣಕಾಸು ಸಾಧನವನ್ನಾಗಿ ಕಾಣುವವರೇ ಹೆಚ್ಚು. ಅಂತಹವರಿಗಾಗಿ ಇಲ್ಲೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಅಂದರೆ ಚಿನ್ನ ಸಾಲಸೋಲ: ಬಡ್ಡಿ ವಿಷ್ಯಾ ಹೇಗೆ? ಎಂಬುದರ ವಿವರವನ್ನು ಇಲ್ಲಿ ಸಾದರಪಡಿಸಲಾಗಿದೆ.

ಚಿನ್ನದ ಮೇಲೆ ಸಾಲ ನೀಡುವಾಗ ನಾನಾ ಹಣಕಾಸು ಸಂಸ್ಥೆಗಳು ನಾನಾ ರೀತಿ ನೀತಿಗಳನ್ನು ಅನುಸರಿಸಿ, ನಾನಾ ದರದ ಬಡ್ಡಿಗಳಲ್ಲಿ ಸಾಲವನ್ನು ನೀಡುತ್ತವೆ. ಅದು ತುಸು ದುಬಾರಿಯೂ ಹೌದು. ನಿಮ್ಮದೇ ಚಿನ್ನದ ಮೇಲೆ ಸಾಲ ಪಡೆಯಲುವಾಗ ಈ ಲೆಕ್ಕಾಚಾರವನ್ನು ತುಲನೆ ಮಾಡಿ ನೋಡಿ -

ಬ್ಯಾಂಕಿಂಗ್ ವ್ಯವಹಾರ ಮಾಡದ ಹಣಕಾಸು ಸಂಸ್ಥೆಗಳಲ್ಲಿ ನಿಮ್ಮ ಚಿನ್ನದ ಮೇಲೆ ಸಾಲ ಪಡೆಯುವುದು ನಿಜಕ್ಕೂ ದುಬಾರಿಯೇ. ಆದರೆ ಅನಿವಾರ್ಯವೆಸಿದಾಗ ನಿಮ್ಮ ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ಸಾಲ ಪಡೆಯಬೇಕಾದರೆ ವರ್ಷಕ್ಕೆ ಶೇ. 22ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ.

ಅದೇ ಉತ್ಪಾದಕತೆ ಉದ್ದೇಶದ ಸಾಲ ಪಡೆಯುವುದಾದರೆ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆಂದು ಚಿನ್ನದ ಮೇಲೆ ಸಾಲ ನೀಡುವುದು ಉಂಟು. ಇದು ಶೇ. 13 ರಿಂದ ಶೇ. 16ರ ಪ್ರಮಾಣದಲ್ಲಿರುತ್ತದೆ.

ಅದೇ ಬ್ಯಾಂಕಿಂಗ್ ವ್ಯವಹಾರ ನಡೆಸುವ ಹಣಕಾಸು ಸಂಸ್ಥೆಗಳಲ್ಲಿ (ಅಂದರೆ ಸಹಕಾರ ಸೊಸೈಟಿಗಳಲ್ಲಿ) ಮತ್ತು ಬ್ಯಾಂಕುಗಳ ಮೂಲಕವೇ ಚಿನ್ನದ ಮೇಲೆ ಸಾಲ ಪಡೆಯುವುದಾದರೆ ಬಡ್ಡಿ ದರ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ಹೆಚ್ಚು ನಂಬಿಕಾರ್ಹ ಮತ್ತು ಸುರಕ್ಷಿತವೂ ಹೌದು. ಇದು ಸಹ ಒಂದು ಬ್ಯಾಂಕ್/ ಸೊಸೈಟಿಯಿಂದ ಮತ್ತೊಂದಕ್ಕೆ ಭಿನ್ನವಾಗಿರುತ್ತದೆ. ಹಾಗಾಗಿ ಖುದ್ದಾಗಿ ಹಣಕಾಸು ಸಂಸ್ಥೆಗೆ ಭೇಟಿ ನೀಡಿ ವಿಚಾರಿಸುವುದು ಒಳಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gold loans are one set of loans that can be availed rather quickly and is handy during times of emergency. However, they are one of the most expensive forms of loans and should be availed only in case of an emergency. Here is a look at how the interest rates compare between different institutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more