ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಹಾಸ್ಯಕ್ಕೆ ಈಡಾಗಿರುವ ಚಿನ್ನ ಹುಡುಕುವ ಪ್ರಹಸನ

By Prasad
|
Google Oneindia Kannada News

ಬೆಂಗಳೂರು, ಅ. 21 : ಸಾಧು ಕನಸು ಕಂಡಿದ್ದು, ಎಎಸ್ಐ ನೆಲವನ್ನು ಅಗಿಯಲು ಶುರುಮಾಡಿದ್ದು, ನರೇಂದ್ರ ಮೋದಿ ಉತ್ಖನನವನ್ನು ಟೀಕಿಸಿದ್ದು, ನಂತರ ಸಾಧುವನ್ನೇ ಬೆಂಬಲಿಸಿ ಟ್ವೀಟಿಸಿದ್ದು, ಉತ್ತರಪ್ರದೇಶದಲ್ಲಿ ಜನರು ಸಾಧು ಹೇಳಿದಲ್ಲೆಲ್ಲ ತಾವೇ ನೆಲ ಬಗೆಯಲು ಶುರುಮಾಡಿದ್ದು, ಟ್ವಿಟ್ಟರಿನಲ್ಲಿ ಟೀಕೆಯ ಸುರಿಮಳೆಯೇ ಆಗುತ್ತಿರುವುದು... ಇಡೀ ಪ್ರಕರಣವೇ ಅಪಹಾಸ್ಯದ ವಸ್ತುವಾಗಿ ಪರಿಣಮಿಸಿದೆ.

ಈಗಿಂದೀಗಲೇ ನಾನು ನಮ್ಮ ಮನೆ ಬಳಿಯಿರುವ ನೆಲವನ್ನು ಅಗಿಯಲು ಶುರುಮಾಡುತ್ತೇನೆ. ವಜ್ರ ಸಿಕ್ಕರೂ ಸಿಗಬಹುದು ಎಂದು ಟ್ವಿಟ್ಟಿಗರೊಬ್ಬರು ಟ್ವೀಟಿಸಿದ್ದರೆ, ಇಂಥ ಕನಸುಗಳು ನಮ್ಮ ರಾಜಕಾರಣಿಗಳಿಗೇನಾದರೂ ಬಿದ್ದರೆ ಏನು ಗತಿ? ಭಾರತೀಯ ಸರ್ವೇಕ್ಷಣ ಇಲಾಖೆಗೆ ಕೂಡ ತಿಳಿಸದೆ ಎಲ್ಲ ಭೂಮಿಯನ್ನೇ ನುಂಗಿಹಾಕುತ್ತಾರೆ ಎಂದು ಮತ್ತೊಬ್ಬರು ಅಪಹಾಸ್ಯ ಮಾಡಿದ್ದಾರೆ.

ಸಾಧು ಶೋಭನ ಸರ್ಕಾರ್ ಮಾಡಿದ ಟೀಕೆಯಿಂದ ಮೆತ್ತಗಾದಂತೆ ಕಂಡುಬಂದಿರುವ ನರೇಂದ್ರ ಮೋದಿ, ಸಾಧುವನ್ನು ಹೊಗಳಿ ಟ್ವೀಟ್ ಮಾಡಿರುವುದು ಬಿಜೆಪಿಯನ್ನು ಮುಜುಗರಕ್ಕೆ ಈಡು ಮಾಡಿದರೂ ಅಚ್ಚರಿಯಿಲ್ಲ. ಆದರೆ, ಭೂಗತರಾಗಿ ಉಳಿದು ತಮ್ಮ ಸಹಾಯಕನಿಂದ ಎಲ್ಲ ವ್ಯವಹಾರ ನಡೆಸುತ್ತಿರುವ ಸಾಧು ಶೋಭನ ಸರ್ಕಾರ್ ಮಾತ್ರ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ.

"ಸಂತ ಶೋಭನ ಸರ್ಕಾರ್ ಅವರನ್ನು ಲಕ್ಷಾಂತರ ಜನರು ಹಲವಾರು ವರ್ಷಗಳಿಂದ ಅತ್ಯಂತ ಶ್ರದ್ಧೆಯಿಂದ ಗೌರವಿಸುತ್ತಾರೆ. ನಾನು ಅವರ ತಪಸ್ಸು ಮತ್ತು ತ್ಯಾಗಕ್ಕೆ ಪ್ರಣಾಮ ಮಾಡುತ್ತೇನೆ" ಎಂದು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸೋಮವಾರ ತಮ್ಮ ಟ್ವಿಟ್ಟರಿನಲ್ಲಿ ಸಂದೇಶ ಹಾಕಿದ್ದಾರೆ.

"ಸಾಧುವೊಬ್ಬ ಕಂಡ ಕನಸಿನ ಬೆನ್ನತ್ತಿ ಚಿನ್ನಕ್ಕಾಗಿ ನೆಲವನ್ನು ಅಗಿಯುವ ಬದಲು, ಸ್ವಿಸ್ ಬ್ಯಾಂಕ್ ನಲ್ಲಿ ಕೋಟಿಗಟ್ಟಲೆ ಕೊಳೆಯುತ್ತ ಬಿದ್ದಿರುವ ಹಣವನ್ನು ಭಾರತಕ್ಕೆ ವಾಪಸ್ ತರಲು ಕೇಂದ್ರ ಸರಕಾರ ಯತ್ನಿಸಬೇಕು" ಎಂದು ನರೇಂದ್ರ ಮೋದಿ ಅವರು ಕೆಣಕಿದ್ದಕ್ಕೆ ಪ್ರತಿಯಾಗಿ, ಚಿನ್ನದ ನಿಧಿಯಿರುವ ಕನಸು ಕಂಡಿದ್ದ ಸಾಧು ಶೋಭನ ಸರ್ಕಾರ್ ಅವರು ಮೋದಿಗೆ ಬಹಿರಂಗ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಪಾರ ಜನಮನ್ನಣೆ ಗಳಿಸಿರುವ ಅರವತ್ತರ ಆಸುಪಾಸಿನಲ್ಲಿರುವ ಸಾಧು ಸೋಭನ ಸರ್ಕಾರ್ ಅವರು, ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ದೌಡಿಯಾ ಖೇಡ್ ಗ್ರಾಮದಲ್ಲಿರುವ ಕೋಟೆಯ ಆವರಣದಲ್ಲಿ ಸಾವಿರ ಟನ್ ಚಿನ್ನ ಹೂಳಲಾಗಿದೆ ಎಂದು 19ನೇ ಶತಮಾನದಲ್ಲಿದ್ದ ರಾಜಾ ರಾವ್ ರಾಮ್ ಬಕ್ಸ್ ಸಿಂಗ್ ತನ್ನ ಕನಸಿನಲ್ಲಿ ಬಂದು ಹೇಳಿದ್ದ ಎಂದು ಸರಕಾರಕ್ಕೆ ತಿಳಿಸಿದ್ದರು.

ಆದರೆ, ಸ್ವಾಮೀಜಿ ಎಂದೂ ಕರೆಯಿಸಿಕೊಳ್ಳುವ ಸಾಧು ಶೋಭನ ಸರ್ಕಾರ್ ಸಿಡಿದೆದ್ದಿದ್ದಾರೆ. ತಮ್ಮನ್ನು ಟೀಕಿಸಿರುವ ನರೇಂದ್ರ ಮೋದಿಗೆ ಸವಾಲನ್ನು ಕೂಡ ಒಡ್ಡಿದ್ದಾರೆ. ಅಲ್ಲದೆ, ಮತ್ತೊಂದು ಸ್ಥಳದಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಹೂಳಲಾಗಿದೆ ಎಂದು ಹೇಳಿ ಭಾರತೀಯ ಸರ್ವೇಕ್ಷಣ ಇಲಾಖೆಯನ್ನು ಮತ್ತೆ ಬೆಚ್ಚಿಬೀಳಿಸಿದ್ದಾರೆ. ಆ ವಿವರಗಳು ಮುಂದಿವೆ ಓದಿರಿ.

ನರೇಂದ್ರ ಮೋದಿ ಟ್ವೀಟ್

ಸಾಧು ಶೋಭನ ಸರ್ಕಾರ್ ಅವರನ್ನು ಹೊಗಳಿ ನರೇಂದ್ರ ಮೋದಿ ಬರೆದ ಟ್ವೀಟ್. ಮೆತ್ತಗಾದರೆ ನರೇಂದ್ರ ಮೋದಿ?

ಮೋದಿಗೆ ಸಾಧು ಹಾಕಿದ ಸವಾಲು

ಮೋದಿಗೆ ಸಾಧು ಹಾಕಿದ ಸವಾಲು

"ನರೇಂದ್ರ ಮೋದಿ ಬ್ರಾಂಡಿಂಗ್ ಗಾಗಿ ಮತ್ತು ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಕೋಟ್ಯಂತರ ಹಣವನ್ನು ಬಿಜೆಪಿ ವ್ಯಯಿಸುತ್ತಿದೆ. ಅಷ್ಟೊಂದು ಹಣ ನಿಮ್ಮ ಬಳಿ ಬಂದಿದ್ದಾದರೂ ಎಲ್ಲಿಂದ? ಆ ಹಣ ಬಿಳಿಯದೋ, ಕಪ್ಪು ಹಣವೋ?" ಎಂದು ಶೋಭನ ಸರ್ಕಾರ್ ಮೋದಿಗೆ ತಿರುಗೇಟು ನೀಡಿದ್ದಾರೆ.

ಮುಂದುವರಿದ ಎನ್‌ಡಿಎ ಮೇಲಿನ ಪ್ರಹಾರ

ಮುಂದುವರಿದ ಎನ್‌ಡಿಎ ಮೇಲಿನ ಪ್ರಹಾರ

"ಅಷ್ಟಕ್ಕೆ ಸುಮ್ಮನಾಗದೆ, ಸರಕಾರದ ಆಡಳಿತದಲ್ಲಿ ಕಂಪ್ಯೂಟರ್ ಅಳವಡಿಸಬೇಕೆಂದು ಕೇಂದ್ರ ನಿರ್ಧರಿಸಿದ್ದಾಗ ಅಟಲ್ ಬಿಹಾರಿ ವಾಜಪೇಯಿ ವಿರೋಧಿಸಿದ್ದರು. ಅಂದು ವಿರೋಧಿಸಿದ್ದು ತಪ್ಪೆಂದು ಈಗ ಒಪ್ಪಿಕೊಳ್ಳುತ್ತೀರಾ? ಬೋಫೋರ್ಸ್ ಮುಂತಾದ ಪ್ರಕರಣಗಳನ್ನು ಕೆಣಕುತ್ತ ಯುಪಿಎ ಸರಕಾರವನ್ನು ಬಿಜೆಪಿ ಬ್ಲಾಕ್ ಮೇಲ್ ಮಾಡುತ್ತಿದೆ. ನಿಮ್ಮದೇ ಸರಕಾರವಿದ್ದಾಗ ನೀವ್ಯಾಕೆ ಅಪರಾಧಿಗಳನ್ನು ಶಿಕ್ಷಿಸಿಲ್ಲ" ಎಂದು ಅವರು ಪ್ರಹಾರ ಮಾಡಿದ್ದಾರೆ.

ಯಾವುದೇ ರಾಜಕೀಯ ದುರುದ್ದೇಶವಿಲ್ಲ

ಯಾವುದೇ ರಾಜಕೀಯ ದುರುದ್ದೇಶವಿಲ್ಲ

"ಚಿನ್ನದ ನಿಧಿ ಅಗಿಯುತ್ತಿರುವ ಘಟನೆಯ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಚಿನ್ನ ದೊರೆತರೆ ಭಾರತದ ಹಣಕಾಸಿನ ತೊಂದರೆ ನೀಗಿಸಬಹುದಲ್ಲ ಎಂಬ ಉದ್ದೇಶ ಮಾತ್ರ ಇದರ ಹಿಂದಿದೆ. ದೇಶದ ಸಮಸ್ಯೆ ಬಗೆಹರಿಸುವ ಉದ್ದೇಶ ನಿಮಗಿದ್ದರೆ ನನ್ನ ಆಶ್ರಮಕ್ಕೆ ಬನ್ನಿ, ಕುಳಿತು ಚರ್ಚಿಸೋಣ" ಎಂದೂ ಸಾಧು ಸವಾಲು ಹಾಕಿದ್ದಾರೆ. (ಚಿತ್ರದಲ್ಲಿರುವವರು ಶೋಭನ ಸರ್ಕಾರ್ ವಕ್ತಾರ ಸ್ವಾಮಿ ಓಂ.)

ಮತ್ತೊಂದು ಕಡೆ ಭಾರೀ ಚಿನ್ನದ ನಿಧಿ!

ಮತ್ತೊಂದು ಕಡೆ ಭಾರೀ ಚಿನ್ನದ ನಿಧಿ!

ಇದೊಂದೇ ಘಟನೆ ಸಾಕಪ್ಪಾ ಸಾಕು ಅನ್ನುವಂತೆ ಮಾಡಿರುವಾಗ, ದೌಡಿಯಾ ಖೇಡ್ ಗ್ರಾಮದ ಬಳಿಯಿರುವ ಆದಂಪುರ ಎಂಬ ಗ್ರಾಮದಲ್ಲಿ ಖೇಡ್ ಗ್ರಾಮದಲ್ಲಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ (2500 ಟನ್) ಚಿನ್ನದ ನಿಧಿ ಹುದುಗಿದೆ ಎಂಬ ಕನಸು ಸಾಧು ಶೋಭನ ಸರ್ಕಾರ್ ಅವರಿಗೆ ಬಿದ್ದಿದೆಯಂತೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಲಿನ ಗ್ರಾಮಸ್ಥರು ಅಲ್ಲಿಗೂ ದೌಡಾಯಿಸುತ್ತಿದ್ದಾರೆ.

ಚಿನ್ನಕ್ಕಾಗಿ ಜನರಿಂದಲೇ ಉತ್ಖನನ!

ಚಿನ್ನಕ್ಕಾಗಿ ಜನರಿಂದಲೇ ಉತ್ಖನನ!

ಗಂಗಾ ತಟದಲ್ಲಿರುವ ಆದಂಪುರ ಗ್ರಾಮದಲ್ಲಿ ಚಿನ್ನ ಹೂಳಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ, ಅಲ್ಲಿದ್ದ ಪುರಾತನ ಶಿವನ ಮಂದಿರದ ಬಳಿ ಜನರೇ ನೆಲವನ್ನು ಅಗಿಯಲು ಆರಂಭಿಸಿದ್ದಾರೆ. ಈಗಾಗಲೆ ಮೂರು ಅಡಿ ಅಗಲ, ನಾಲ್ಕು ಅಡಿ ಆಳದ ಗುಳಿಯನ್ನು ತೋಡಿದ್ದಾರೆ. ಕೆಲವರಿಗೆ ಚಿನ್ನ ಸಿಕ್ಕು ಪರಾರಿಯಾಗಿದ್ದಾರೆ ಎಂಬ ಗಾಳಿ ಸುದ್ದಿಯನ್ನೂ ಹಬ್ಬಿಸಲಾಗಿದೆ. ಜನರನ್ನು ನಿಯಂತ್ರಣದಲ್ಲಿಡುವುದೇ ಪೊಲೀಸರಿಗೆ ಭಾರೀ ತಲೆನೋವಾಗಿದೆ.

ಚಿನ್ನ ಸಿಗದಿದ್ದರೇನಂತೆ ಲಡ್ಡು ಗ್ಯಾರಂಟಿ!

ಸಾವಿರ ಟನ್ ಬಂಗಾರ ಸಿಗದಿದ್ದರೇನಂತೆ, ಕಾಂಗ್ರೆಸ್ ಸರಕಾರ ಶೋಬನ ಸರ್ಕಾರ್ ಗೆ ಸಾವಿರ ಟನ್ ಲಡ್ಡು ಕೊಡುವುದಂತೂ ಗ್ಯಾರಂಟಿ!


ಭಾರತೀಯ ಸರ್ವೇಕ್ಷಣ ಇಲಾಖೆ ಉತ್ಖನನವನ್ನು ಅ.18ರಿಂದ ಆರಂಭಿಸಿದ್ದು, ಅಲ್ಲಿ ಚಿನ್ನ ಸಿಗುವ ಬಗ್ಗೆ ಅನುಮಾನವಿದೆ. ಆದರೆ, ಉತ್ಖನನದಿಂದ ಮಹತ್ವದ ಐತಿಹಾಸಿಕ ದಾಖಲೆಗಳು ಸಿಗಬಹುದು ಎಂದು ರಕ್ಷಣಾತ್ಮಕ ಹೇಳಿಕೆಯನ್ನು ನೀಡಿದೆ. ಇಲಾಖೆಯ ಈ ಉತ್ಖನನಕ್ಕೆ ಹಲವಾರು ಕಡೆಗಳಿಂದ ಟೀಕೆಗಳು ಕೂಡ ಬಂದಿವೆ.

English summary
Gold hunt in Unnao : The drama continues. The famous sadhu Shobhan Sarkar has dreamed of another gold mine in a nearby place to Unnao. Modi has softened his stand towards Sarkar and tweeples again making mockery of this episode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X