ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಕೊಡುಗೆ: ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳವಾಯ್ತು

By Srinath
|
Google Oneindia Kannada News

GOI Central govt employees Dearness Allowance increased by 10 per cent
ನವದೆಹಲಿ, ಸೆಪ್ಟೆಂಬರ್ 20: ಜುಲೈ 1 ರಿಂದಲೇ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ನಿರೀಕ್ಷಿತ ಪ್ರಮಾಣದಲ್ಲಿ ಅಂದರೆ ಶೇ. 10ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ.

ಸದ್ಯ ಶೇ. 80ರಷ್ಟು ಇರುವ ತುಟ್ಟಿಭತ್ಯೆಯನ್ನು ಶೇ. 90ಕ್ಕೆ ಏರಿಸಬೇಕು ಎಂಬ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ಸೂಚಿಸಿದ್ದು, ಇದರಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 30 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತುಟ್ಟಿ ಭತ್ಯೆಯು 2 ಅಂಕಿಯಷ್ಟು ಹೆಚ್ಚಾಗುತ್ತಿರುವುದು ಕಳೆದ 3 ವರ್ಷಗಳಲ್ಲಿ ಇದೇ ಮೊದಲು. 2010ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು ಶೇ. 10ರಷ್ಟು ಏರಿಕೆ ಮಾಡಿತ್ತು. ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ (CPI-IW data) ಆಧಾರದಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ.

ಈ ನಿರ್ಧಾರದಿಂದ ಸರಕಾರದ ಬೊಕ್ಕಸದ ಮೇಲೆ ಹೆಚ್ಚುವರಿಯಾಗಿ ವಾರ್ಷಿಕ 10,879 ಕೋಟಿ ರೂ ಗಳ ಹೊರೆ ಬೀಳಲಿದೆ. 2013-14ನೇ ಸಾಲಿನಲ್ಲಿ 6,297 ಕೋಟಿ ರೂ.ಅಧಿಕ ಹೊರೆ ಬೊಕ್ಕಸದ ಮೇಲೆ ಬೀಳಲಿದೆ.

English summary
GOI Central govt employees Dearness Allowance increased by 10 per cent. The government today approved a proposal to hike dearness allowance to 90 per cent from existing 80 per cent, a move that would benefit about 50 lakh central government employees and 30 lakh pensioners. "The Union Cabinet approved the proposal to increase dearness allowance to 90 per cent at its meeting here. The hike would be effective from July 1, this year," a source said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X