• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧ

|
Google Oneindia Kannada News

ನವದೆಹಲಿ, ಜೂನ್ 29: ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದೆ ಎಂದು ಎಎನ್ಐ ವರದಿ ಮಾಡಿದೆ.

   SSLC ಪರೀಕ್ಷೆ ನಡೆಸಿದ್ದು ಏಕೆ ಎಂದು ಹೇಳಿದ ರೇಣುಕಾಚಾರ್ಯ | Renukacharya | Oneindia Kannada

   ಚೀನಾ ಮೂಲದ ಅಪ್ಲಿಕೇಷನ್ ಗಳನ್ನು ನಿರ್ಬಂಧಿಸುವಂತೆ ಗೂಗಲ್ ಹಾಗೂ ಆಪಲ್ ಸಂಸ್ಥೆಗಳಿಗೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿರುವ National Informatics Centre(NIC) ನಿರ್ದೇಶನ ನೀಡಿರುವ ಆದೇಶ ಪ್ರತಿ ಇತ್ತೀಚೆಗೆ ಬಂದಿತ್ತು. ಆದರೆ, ಇದು ಸುಳ್ಳು ಎಂದು ಪಿಐಬಿ ಸ್ಪಷ್ಟಪಡಿಸಿತ್ತು.

   ಈ ಚೀನಿ App ಬಳಸುತ್ತಿದ್ದರೆ ಅಪಾಯ ಎಚ್ಚರಿಕೆ!ಈ ಚೀನಿ App ಬಳಸುತ್ತಿದ್ದರೆ ಅಪಾಯ ಎಚ್ಚರಿಕೆ!

   ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ಪರಿಣಾಮದಿಂದ ಚೀನಾ ದೇಶ ಮೂಲದ ಅನೇಕ ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸುವ ಪ್ರಕ್ರಿಯೆ ಮುಂದುವರೆದಿದೆ. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಸ್ವಯಂಪ್ರೇರಿತರಾಗಿ ಆಪ್ ಡಿಲೀಟ್ ಆಗುತ್ತಿದೆ. ಇನ್ನೊಂದೆಡೆ ಗುಪ್ತಚರ ಇಲಾಖೆಯಿಂದ ಚೀನಾ ಮೂಲದ ಕಂಪನಿಗಳ ಅಪ್ಲಿಕೇಷನ್ ಬಳಕೆ ಬಗ್ಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.

   ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ತಾರಕಕ್ಕೇರಿ ಮಾರಕವಾಗಿ ಪರಿಣಮಿಸಿತ್ತು. ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು, 35 ಮಂದಿ ಚೀನಾ ಯೋಧರು ಮೃತಪಟ್ಟಿದ್ದಾರೆ. ಚೀನಿ ಆಪ್ ಬಳಸಿದರೆ ನಿಮ್ಮ ಖಾಸಗಿ ಮಾಹಿತಿ, ಸುರಕ್ಷತೆ, ಭದ್ರತೆಗೆ ಖಂಡಿತ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಒದಗುತ್ತದೆ ಎಂದು ಭಾರತೀಯ ಇಂಟೆಲಿಜೆನ್ಸ್ ಏಜೆನ್ಸಿ ಎಚ್ಚರಿಸಿತ್ತು.

   ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ

   ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ

   ಬಹು ಜನಪ್ರಿಯ ಆಪ್ ಗಳಾದ ಟಿಕ್ ಟಾಕ್, ಜೂಮ್, ಶೇರ್ ಇಟ್, ಯುಸಿ ಬ್ರೌಸರ್, ಕ್ಸೆಂಡರ್ ಹಾಗೂ ಕ್ಲೀನ್ ಮಾಸ್ಟರ್ ಕೂಡಾ ಇವೆ. ಈ ಆಪ್ ಗಳಲ್ಲಿ ಸ್ಪೈವೇರ್ ತುಂಬಿ ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಬಗ್ಗೆ ಏಜೆನ್ಸಿ ಹೇಳಿದೆ. ಏಪ್ರಿಲ್ ತಿಂಗಳಿನಲ್ಲಿ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಭದ್ರತೆ ಬಗ್ಗೆ ಅಪಸ್ವರ ಕೇಳಿ ಬಂದಾಗ, ಈ ಕುರಿತಂತೆ ಗೃಹ ಸಚಿವಾಲಯವು ಮಾರ್ಗಸೂಚಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ಮಾರ್ಗಸೂಚಿಯಂತೆ ಜೂಮ್ ಆಪ್ ಕೂಡಾ ಸುರಕ್ಷತೆ ಹೆಚ್ಚಿಸಿ ಹೊಸ ಆವೃತ್ತಿ ಬಿಡುಗಡೆ ಮಾಡಿತ್ತು.

   NIC ಆದೇಶ ಪ್ರತಿಯಲ್ಲಿ ಬಂದಿತ್ತು

   NIC ಆದೇಶ ಪ್ರತಿಯಲ್ಲಿ ಬಂದಿತ್ತು

   ಗೂಗಲ್ ಇಂಡಿಯಾದ ನೇಹಾ ಅಗರವಾಲ್ ಹಾಗೂ ಆಪಲ್ ಇಂಡಿಯಾದ ಅನುಜ್ ರೆಡ್ಡಿ ಅವರಿಗೆ ಬರೆದಿರುವ ಆದೇಶ ಪ್ರತಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 2000 ಪ್ಯಾರಾ 1, 2 ಅನ್ವಯ ಈ ಕೆಳಕಂಡ ಆಪ್ ಗಳನ್ನು ನಿಮ್ಮ ವೇದಿಕೆಯಲ್ಲಿ ನಿರ್ಬಂಧಿಸಲು ಸೂಚಿಸಲಾಗಿದೆ. ಈ ಪ್ರತಿ ನಿಮಗೆ ತಲುಪಿದ ತಕ್ಷಣ ಸೂಚನೆಯನ್ನು ಪಾಲಿಸುವಂತೆ ತಿಳಿಸಲಾಗಿದೆ. ಈ ಆಪ್ ಬಳಕೆಯಿಂದ ದೇಶದ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ವರದಿ ಬಂದಿದೆ ಎಂದು ಪ್ರಧಾನ ಕಾರ್ಯದರ್ಶಿ ಆನಂದ್ ಸಾಗರ್ ನೇಗಿ ಅವರ ಸಹಿ ಹಾಕಲಾಗಿದೆ. ಆದರೆ, ಇದೆಲ್ಲವೂ ಸುಳ್ಳು ಎಂದು PIB ಸ್ಪಷ್ಟಪಡಿಸಿ ಟ್ವೀಟ್ ಮಾಡಿದೆ.

   ಟಿಕ್‌ಟಾಕ್‌ನ ದೇಸಿ ಪರ್ಯಾಯ ಆ್ಯಪ್ 'ಚಿಂಗಾರಿ' 25 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಟಿಕ್‌ಟಾಕ್‌ನ ದೇಸಿ ಪರ್ಯಾಯ ಆ್ಯಪ್ 'ಚಿಂಗಾರಿ' 25 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌

   ಈ ಕೆಳಕಂಡ ಆಪ್ ಗಳ ನಿಷೇಧ

   ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ನಲ್ಲಿ ಲಭ್ಯವಿರುವ ಈ ಕೆಳಕಂಡ ಆಪ್ ಗಳನ್ನು ನಿರ್ಬಂಧಿಸಲು ಸೂಚಿಸಲಾಗಿದೆ. LiveMe Bigo Live BeautyPlus Cam Scannaer Clash of Kings Mobile Legends' Tik Tok Clib Factory Shein Romwe App Lock V mate Game of Sultans ಆದರೆ, ಇದೆಲ್ಲವೂ ಈಗಾಗಲೇ ಗುಪ್ತಚರ ಇಲಾಖೆ ನೀಡಿದ ಪಟ್ಟಿಯಲ್ಲಿದೆ. ಹೀಗಾಗಿ ಸರ್ಕಾರದ ಅಧಿಕೃತ ಖಾತೆಯಿಂದ ಆದೇಶ ಬಂದರೆ ಮಾತ್ರ ಪರಿಗಣಿಸಲು ಸೂಚಿಸಲಾಗಿದೆ.

   ಗುಪ್ತಚರ ಇಲಾಖೆ ನೀಡಿದ ಪಟ್ಟಿಯಲ್ಲಿರುವ ಆಪ್

   ಗುಪ್ತಚರ ಇಲಾಖೆ ನೀಡಿದ ಪಟ್ಟಿಯಲ್ಲಿರುವ ಆಪ್

   ಗುಪ್ತಚರ ಇಲಾಖೆ ನೀಡಿದ ಪಟ್ಟಿಯಲ್ಲಿರುವ ಆಪ್ ಗಳು 360 Security, APUS Browser, Baidu Map, Baidu Translate, BeautyPlus, Bigo Live, CacheClear DU apps studio, Clash of Kings, Clean Master - Cheetah, ClubFactory, CM Browser, DU Battery Saver, DU Browser, DU Cleaner, DU Privacy, DU recorder, ES File Explorer, Helo, Kwai, LIKE, Mail Master, Mi Community, Mi Store, Mi Video call-Xiaomi, NewsDog, Parallel Space, Perfect Corp, Photo Wonder, QQ International, QQ Launcher, QQ Mail, QQ Music, QQ NewsFeed, QQ Player, QQ Security Centre, ROMWE, SelfieCity, SHAREit, SHEIN, TikTok, UC Browser, UC News, Vault-Hide, Vigo Video, Virus Cleaner (Hi Security Lab), VivaVideo- QU Video Inc, WeChat, Weibo, WeSync, Wonder Camera, Xender and YouCam Makeup.

   English summary
   List of 59 apps banned by Government of India "which are prejudicial to sovereignty and integrity of India, defence of India, security of state and public order”.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X