ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 'ಮನದ ಮಾತು' ನಿಜ ಮಾಡಲಿದೆ ಈ ರಾಜ್ಯ!

ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ಆಶಯವನ್ನು ಕಾರ್ಯರೂಪಕ್ಕೆ ಇಳಿಸಲು ಗೋವಾ ರಾಜ್ಯ ಸಜ್ಜಾಗಿದೆ. ಡಿಸೆಂಬರ್ 31ರಿಂದ ನಗದು ರೂಪದ ವ್ಯವಹಾರವನ್ನು ಸಂಪೂರ್ಣ ನಿಲ್ಲಿಸಿ, ನಗದು ರಹಿತ ರಾಜ್ಯವಾಗಿ ಪರಿವರ್ತನೆಯಾಗಲಿದೆ.

By Mahesh
|
Google Oneindia Kannada News

ಪಣಜಿ, ನವೆಂಬರ್ 27: ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ಆಶಯವನ್ನು ಕಾರ್ಯರೂಪಕ್ಕೆ ಇಳಿಸಲು ಗೋವಾ ರಾಜ್ಯ ಸಜ್ಜಾಗಿದೆ. ಡಿಸೆಂಬರ್ 31ರಿಂದ ನಗದು ರೂಪದ ವ್ಯವಹಾರವನ್ನು ಸಂಪೂರ್ಣ ನಿಲ್ಲಿಸಿ, ನಗದು ರಹಿತ ರಾಜ್ಯವಾಗಿ ಪರಿವರ್ತನೆಯಾಗಲಿದೆ.

ಗೋವಾ ಈ ವರ್ಷಾಂತ್ಯದ ಒಳಗಾಗಿ ದೇಶದ ಮೊಟ್ಟಮೊದಲ ನಗದು ರಹಿತ ರಾಜ್ಯವಾಗಿ ಬದಲಾಗಲಿದೆ. ಮೀನು, ಮಾಂಸ, ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಸ್ಮಾರ್ಟ್ ಫೋನ್ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳಲು ವ್ಯವಸ್ಥೆ ಸಿದ್ಧವಾಗುತ್ತಿದೆ.[ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿ: ಮೋದಿ ಮನವಿ]

ಗೋವಾದಲ್ಲಿ ಇನ್ಮೇಲೆ ಮಾರುಕಟ್ಟೆಗೆ ಹೋದರೆ ಪರ್ಸ್ ಮರೆತರೂ ಚಿಂತೆಯಿಲ್ಲ. ಪಿಕ್‌ ಪಾಕೆಟರ್‌ಗಳಿಗಂತೂ ಈ ವ್ಯವಸ್ಥೆ ದುಃಸ್ವಪ್ನವಾಗಿ ಕಾಡಲಿದೆ. ಎಲ್ಲವೂ ಇನ್ಮೇಲೆ ಮೊಬೈಲ್ ಮೂಲಕವೇ ನಡೆಯಲಿದೆಯಂತೆ. ನಾಗರಿಕರು ಮಾಡುವ ಖರೀದಿಗೆ ಅವರ ಬ್ಯಾಂಕ್ ಖಾತೆಯಿಂದಲೇ ಹಣ ಕಡಿತವಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಆರ್.ಕೆ.ಶ್ರೀವಾಸ್ತವ ವಿವರಿಸಿದ್ದಾರೆ.

Goa set to go cashless from December 31

ನಾಗರಿಕರು ತಮ್ಮ ಮೊಬೈಲ್‌ನಿಂದ *99#ಗೆ ಕರೆ ಮಾಡುವ ಮೂಲಕ ಈ ಸೌಲಭ್ಯ ಪಡೆಯಬಹುದು. ಇದಕ್ಕೆ ಸ್ಮಾರ್ಟ್ ಫೋನ್‌ಗಳೇ ಬೇಕಿಲ್ಲ. ಅದರಲ್ಲಿ ಬರುವ ಸೂಚನೆಗಳಿಗೆ ಅನುಗುಣವಾಗಿ ವಹಿವಾಟು ನಡೆಸಬಹುದು. ಸಣ್ಣ ವ್ಯಾಪಾರಿಗಳಿಗೆ ಹಣವನ್ನು ವರ್ಗಾವಣೆ ಮಾಡಲು ಅವರು ಕಾರ್ಡ್ ಸ್ವೈಪ್ ಮಾಡಬೇಕಿಲ್ಲ. ಆದರೆ,ಈಗ ಮಳಿಗೆಗಳಲ್ಲಿ ಬಳಕೆಯಲ್ಲಿರುವ ಸ್ವೈಪಿಂಗ್ ಯಂತ್ರ ಕಾರ್ಯ ಮುಂದುವರಿಯಲಿದೆ ಎಂದು ವಿವರ ನೀಡಿದರು.

ಈ ನಗದುರಹಿತ ವ್ಯವಸ್ಥೆಯಲ್ಲಿ ಹೇಗೆ ವಹಿವಾಟು ನಡೆಸಬೇಕು ಎಂಬ ಬಗ್ಗೆ ವ್ಯಾಪಾರಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಮೊದಲಿಗೆ ಈ ವ್ಯವಸ್ಥೆ ಮಪೂಸಾ ಹಾಗೂ ಪಣಜಿಯಲ್ಲಿ ಜಾರಿಗೆ ಬರಲಿದೆ. ನಗದುರಹಿತ ವ್ಯವಸ್ಥೆಯಲ್ಲಿ ಹಣ ವರ್ಗಾವಣೆಗೆ ಕನಿಷ್ಠ ಮಿತಿ ಇರುವುದಿಲ್ಲ ,ವರ್ಗಾವಣೆಗಾಗಿ ಯಾವುದೇ ವಿಶೇಷ ಶುಲ್ಕ ವಿಧಿಸುವುದಿಲ್ಲ ಎಂದಿದ್ದಾರೆ.

ಮೋದಿ ಅವರ ಕನಸು ಮೊದಲಿಗೆ ಗೋವಾದಲ್ಲಿ ಸಾಕಾರಗೊಳ್ಳಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕಾರ್ ಅವರು ಕೂಡಾ ಹೇಳಿದ್ದಾರೆ. ನಿಮ್ಮ ಕೈಲಿರುವ ಮೊಬೈಲೇ ನಿಮ್ಮ ಬ್ಯಾಂಕ್, ಎಟಿಎಂ ಎಲ್ಲವೂ ಆಗಲಿದೆ. ಪ್ರವಾಸಿಗರು, ವಿದೇಶಿಯರಿಗೂ ಈ ಹೊಸ ವ್ಯವಸ್ಥೆ ಅನುಕೂಲಕರ ಎಂದು ಮನೋಹರ್ ಹೇಳಿದರು.

ನಗದು ರಹಿತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ನಗದು ವ್ಯವಹಾರವನ್ನು ನಿಷೇಧಿಸಲಾಗುವುದು. ನಗದುರಹಿತ ವ್ಯವಸ್ಥೆಯಲ್ಲಿ ಹಣ ವರ್ಗಾವಣೆಗೆ ಕನಿಷ್ಠ ಮಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ ಈ ವರ್ಗಾವಣೆಗಾಗಿ ಯಾವುದೇ ವಿಶೇಷ ಶುಲ್ಕ ವಿಧಿಸುವುದಿಲ್ಲ ಎಂದರು.

English summary
Goa state is set to become cashless starting from December 31. People will be able to buy perishables like: fish, vegetables etc. from their mobile by dialing *99# and follow the instruction for transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X