ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್ ಐಆರ್ ದಾಖಲು, ಬಂಧನ ಭೀತಿಯಲ್ಲಿ ತೇಜಪಾಲ್

By Mahesh
|
Google Oneindia Kannada News

ಬೆಂಗಳೂರು, ನ.22: ತೆಹಲ್ಕಾ ಸುದ್ದಿಸಂಸ್ಥೆ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ತರುಣ್ ತೇಜಪಾಲ್ ತನ್ನ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಪಾಲ್ ವಿರುದ್ಧ ಗೋವಾ ಪೊಲೀಸರು ಶುಕ್ರವಾರ ಎಫ್ ಐಆರ್ ದಾಖಲಿಸಿದ್ದಾರೆ. ಗೋವಾ ಸರ್ಕಾರ ತೇಜಪಾಲ್ ವಿರುದ್ಧ ತನಿಖೆ ಚುರುಕುಗೊಳಿಸುವಂತೆ ಆದೇಶಿಸಿತ್ತು. 6 ತಿಂಗಳ ರಜೆ ಪಡೆದಿರುವ ತೇಜ್ ಪಾಲ್ ಸದ್ಯಕ್ಕೆ ಬಂಧನ ಭೀತಿ ಎದುರಿಸುತ್ತಿದ್ದಾರೆ.

ಪ್ರಕರಣದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ತೇಜಪಾಲ್. ಯಾವುದೇ ರೀತಿಯ ತನಿಖೆಗೆ ಸಿದ್ಧ ಎಂದಿದ್ದಾರೆ. ತೇಜಪಾಲ್ ರಕ್ಷಿಸಲಾಗುತ್ತಿದೆ ಯಾವುದೇ ಶಿಕ್ಷೆಗೊಳಗಾಗದೆ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ, ಭಾರತ ಬಿಟ್ಟು ಬೇರೆ ದೇಶಕ್ಕೆ ತೆರಳಿದ್ದಾರೆ ಎಂಬ ಸುದ್ದಿಗಳನ್ನು ತೆಹೆಲ್ಕಾ ವ್ಯವಸ್ಥಾಪಕ ನಿರ್ದೇಶಕಿ ಶೋಮಾ ಅಲ್ಲಗೆಳೆದಿದ್ದಾರೆ.

ಪ್ರಕರಣಕ್ಕೆ ಸಾಕ್ಷಿ ಎನ್ನಲಾಗಿರುವ ಸಿಸಿಟಿವಿ ಕೆಮೆರಾ ತುಣುಕು ಬಗ್ಗೆ ಪ್ರತಿಕ್ರಿಯೆ ನೀಡಿರುವ ತೇಜಪಾಲ್, ಹೊಟೆಲ್ ನವರನ್ನು ಕೇಳಿ ಸಿಸಿಟಿವಿ ಫುಟೇಜ್ ತರೆಸಿಕೊಂಡು ನೋಡಲಿ ನಾನು ಏನು ತಪ್ಪು ಮಾಡಿಲ್ಲ. ಈಗಾಗಲೇ ಕ್ಷಮೆಯಾಚಿಸಿ, ಸಂಸ್ಥೆ ನಿಯಮದಂತೆ ನಡೆದುಕೊಂಡಿದ್ದೇನೆ ಎಂದಿದ್ದಾರೆ. ಗೋವಾ ಪೊಲೀಸರು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ 344 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

Goa Police files FIR against Tarun Tejpal

ವೃತ್ತಿಯಲ್ಲಿ ಪತ್ರಕರ್ತರಾಗಿರುವ ತರುಣ್ ತೇಜಪಾಲ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಪ್ರಕರಣ ಸಂಬಂಧ ರಾಜ್ಯ ಪೊಲೀಸರು ತನಿಖೆ ಕೈಗೊಳ್ಳಲಿದ್ದು, ಆರೋಪ ಸಾಬೀತಾದರೆ ಕೇಸು ದಾಖಲಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕಾರ್ ಹೇಳಿದ್ದಾರೆ.

ಗೋವಾದ ಹೋಟೆಲ್ ವೊಂದರಲ್ಲಿ ತರುಣ್ ಅವರು ಎರಡು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಸಹದ್ಯೋಗಿ ಆರೋಪಿಸಿದ್ದರು. ತರುಣ್ ಅವರ ಮೇಲೆ ಲೈಂಗಿಕ ಆರೋಪ ಕೇಳಿ ಬರುತ್ತಿದ್ದಂತೆ, ನೈತಿಕ ಹೊಣೆ ಹೊತ್ತು ಕ್ಷಮೆಯಾಚಿಸಿ, ತಮ್ಮ ಸಹ ಸಂಪಾದಕ ಸ್ಥಾನದಿಂದ ಆರು ತಿಂಗಳ ಕಾಲ ದೂರಸರಿದಿದ್ದರು.

10 ದಿನಗಳ ಹಿಂದೆ ಗೋವಾದಲ್ಲಿ ಆಯೋಜಿಸಿದ್ದ ಸಮಾರಂಭದ ವೇಳೆ ತೇಜ್ ಪಾಲ್ ತಮ್ಮ ಜತೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ಪತ್ರಕರ್ತೆಯೊಬ್ಬರು, ತೆಹಲ್ಕಾದ ವ್ಯವಸ್ಥಾಪಕ ಸಂಪಾದಕಿ ಸೋಮಾ ಚೌಧರಿಗೆ ಇಮೇಲ್ ಕಳುಹಿಸಿದ್ದರು.

''ಇದು ನಮ್ಮ ಸಂಸ್ಥೆಯ ಆಂತರಿಕ ವಿಷಯ,'' ಎಂಬ ಚೌಧರಿ ಹೇಳಿಕೆ ಮಹಿಳಾ ಪರ ಕಾರ್ಯಕರ್ತರನ್ನು ಕೆರಳಿಸಿದ್ದು, ಪ್ರಕರಣ ಸಂಬಂಧ ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ತರುಣ್ ತೇಜ್ ಪಾಲ್ ವಿರುದ್ಧ ಎಫ್ ಐಆರ್ ದಾಖಲಿಸಿ ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.

ತಪ್ಪು ಮಾಡಿರುವುದಾಗಿ ಸ್ವತಃ ಒಪ್ಪಿಕೊಂಡಿರುವ ತೇಜ್ ಪಾಲ್ ಅವರನ್ನು ತೆಹಲ್ಕಾದಿಂದ ಹೊರಹಾಕಿದ ಮಾತ್ರಕ್ಕೆ ಪ್ರಕರಣ ಇತ್ಯರ್ಥವಾಗುವುದಿಲ್ಲ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ತರುಣ್ ತೇಜ್‌ಪಾಲ್ ಪ್ರಸಾರ ಭಾರತಿ ಮಂಡಳಿಯ ಸದಸ್ಯತ್ವ ಕಳೆದುಕೊಂಡಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನೇತೃತ್ವದ ಸಮಿತಿ ಪ್ರಸಾರ ಭಾರತಿ ಮಂಡಳಿಯ ಸದಸ್ಯರಾಗಿ ತೇಜ್‌ಪಾಲ್ ಅವರನ್ನು ಮಂಗಳವಾರ ಆಯ್ಕೆ ಮಾಡಿತ್ತು.

English summary
Goa Police files FIR against Tehelka Editor Tarun Tejpa in the alleged sexual assault case.National Commission for Women on Friday said it has written to Goa Police to file an FIR against the Tejpal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X