ಅಂತಿಮ ಫಲಿತಾಂಶ: ಗೋವಾ ಅತಂತ್ರ, ಮುಂದೇನಾಗಬಹುದು?

Subscribe to Oneindia Kannada

ಬೆಂಗಳೂರು, ಮಾರ್ಚ್ 11: ಸಮೀಕ್ಷೆಗಳು ನುಡಿದಿದ್ದ ಭವಿಷ್ಯ ಹೆಚ್ಚು ಕಡಿಮೆ ನಿಜವಾಗಿ. ಗೋವಾದಲ್ಲಿ ಯಾರಿಗೂ ಬಹುಮತ ಬಂದಿಲ್ಲ. ನಿರೀಕ್ಷೆಯಂತೆ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೆ, ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಖಾತೆ ತೆರೆಯುವ ಭರವಸೆ ಮೂಡಿಸಿದ್ದ ಎಎಪಿ ಒಂದೂ ಸ್ಥಾನ ಗೆಲ್ಲಲಾಗದೆ ನೆಲಕಚ್ಚಿದೆ. ಆದರೆ ಅಚ್ಚರಿಯ ರೀತಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸಿಗೆ ಸ್ಥಳೀಯ ಪಕ್ಷಗಳು ಭಾರೀ ಪೈಪೋಟಿ ಒಡ್ಡಿದ್ದು ಚುನಾವಣೆಯ ವಿಶೇಷ.

ಅಂತಿಮ ಫಲಿತಾಂಶ ಹೀಗಿದೆ

ಅಂತಿಮ ಫಲಿತಾಂಶ ಹೀಗಿದೆ

ಬಿಜೆಪಿ - 13
ಕಾಂಗ್ರೆಸ್ - 17
ಎನ್.ಸಿ.ಪಿ - 1
ಎಂಜಿಪಿ (ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ) - 3
ಜಿಎಫ್ (ಗೋವಾ ಪಾರ್ವರ್ಡ್) - 3
ಇತರ - 3

ಯಾರಿಗೆ ಅವಕಾಶ ಜಾಸ್ತಿ?

ಯಾರಿಗೆ ಅವಕಾಶ ಜಾಸ್ತಿ?

ಗೋವಾದಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದ್ದು ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹೀಗಾಗಿ ಯಾರು ಸರಕಾರ ರಚಿಸುತ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ. ಮೇಲ್ನೋಟಕ್ಕೆ ಬಿಜೆಪಿಗೆ ಸರಕಾರ ರಚಿಸುವ ಅವಕಾಶ ತುಂಬಾ ಕಡಿಮೆ ಇದೆ. ಆದರೆ ಕಾಂಗ್ರೆಸ್ ಗೆ ಅವಕಾಶಗಳು ಹೆಚ್ಚಿವೆ. ಬಹುಮತಕ್ಕೆ 4 ಸ್ಥಾನಗಳ ಕೊರತೆ ಇರುವುದರಿಂದ ಸಣ್ಣಪುಟ್ಟ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅಧಿಕಾರ ನಡೆಸಬಹುದು.

ಕಾಂಗ್ರೆಸ್+ಎನ್.ಸಿ.ಪಿ+ ಎಂಜಿಪಿ

ಕಾಂಗ್ರೆಸ್+ಎನ್.ಸಿ.ಪಿ+ ಎಂಜಿಪಿ

ಎನ್.ಸಿ.ಪಿಯ ಚರ್ಚಿಲ್ ಅಲೆಮಾವೋ ಬಿಜೆಪಿ ಜತೆಗೂ ಮೈತ್ರಿ ಮಾಡಿಕೊಳ್ಳುವ ಅವಕಾಶವನ್ನು ಮುಕ್ತವಾಗಿಟ್ಟಿರುವುದಾಗಿ ಹೇಳಿದ್ದಾರೆ. ಆದರೆ ಬಿಜೆಪಿ ಸರಕಾರ ರಚಿಸುವ ಸಂಭವ ಇಲ್ಲದ ಕಾರಣ ಕಾಂಗ್ರೆಸ್ ಜತೆ ಸೇರುವ ಅವಕಾಶ ಜಾಸ್ತಿ. ಒಂದೊಮ್ಮೆ ಕಾಂಗ್ರೆಸ್ ಜತೆ ಸೇರಿದರೆ 18 ಸ್ಥಾನಗಳಾಗುತ್ತವೆ. ಇನ್ನುಳಿದ ಕೊರತೆಯ 3 ಸ್ಥಾನಗಳನ್ನು ಅದು ಎಂಜಿಪಿಯಿಂದ ಪಡೆದುಕೊಳ್ಳಬಹುದು. ಎಂಜಿಪಿಯೂ ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ದ ಎಂದು ಈಗಾಗಲೇ ಹೇಳಿದೆ.

ಕಾಂಗ್ರೆಸ್+ಎನ್.ಸಿ.ಪಿ+ ಜಿಎಫ್

ಕಾಂಗ್ರೆಸ್+ಎನ್.ಸಿ.ಪಿ+ ಜಿಎಫ್

ಕಾಂಗ್ರೆಸ್ ಮತ್ತು ಎನ್.ಸಿ.ಪಿಯ 18 ಶಾಸಕರು ಜತೆಗೆ ಗೋವಾ ಫಾರ್ವರ್ಡ್ ಪಕ್ಷದ 3 ಶಾಸಕರ ಬೆಂಬಲ ಪಡೆದುಕೊಂಡೂ ಸರಕಾರ ರಚಿಸಬಹುದು. ಆದರೆ ಸಮಸ್ಯೆ ಏನೆಂದರೆ ಈಗಾಗಲೇ ತಾವು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಇರುವುದಾಗಿ ಫಾರ್ವರ್ಡ್ ಪಕ್ಷದ ನಾಯಕ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.

ಕಾಂಗ್ರೆಸ್+ಎನ್.ಸಿ.ಪಿ+ ಇತರ

ಕಾಂಗ್ರೆಸ್+ಎನ್.ಸಿ.ಪಿ+ ಇತರ

ಕಾಂಗ್ರೆಸ್ ಮತ್ತು ಎನ್.ಸಿ.ಪಿಯ 18 ಶಾಸಕರು ಜತೆಗೆ ಮೂವರು ಪಕ್ಷೇತರ ಶಾಸಕರ ಬಂಬಲ ಪಡೆದುಕೊಂಡು ಸರಕಾರ ರಚಿಸಬಹುದು.

ಕಾಂಗ್ರೆಸ್+ಇತರ

ಕಾಂಗ್ರೆಸ್+ಇತರ

ಕಾಂಗ್ರೆಸಿಗೆ ಒಂದೊಮ್ಮೆ ಎನ್.ಸಿ.ಪಿ ಬೆಂಬಲ ನೀಡದೇ ಇದ್ದರೂ ಪಕ್ಷೇತರ ಅಥವಾ ಬೇರೆ ಪಕ್ಷದ ಬೆಂಬಲ ಪಡೆದುಕೊಂಡೂ ಸರಕಾರ ರಚಿಸಬಹುದು. ಕಾಂಗ್ರೆಸಿಗೆ ಸರಕಾರ ರಚಿಸಲು ಇಲ್ಲಿ ಮುಕ್ತ ಅವಕಾಶಗಳಿವೆ.

ಮುಖ್ಯಮಂತ್ರಿ ಯಾರು?

ಮುಖ್ಯಮಂತ್ರಿ ಯಾರು?

ಕಾಂಗ್ರೆಸಿನಿಂದ ಪ್ರಮುಖವಾಗಿ ಇಬ್ಬರು ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ. ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರು. ದಿಗಂಬರ ಕಾಮತ್ ಮತ್ತು ಪ್ರತಾಪ್ ಸಿಂಗ್ ರಾಣೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Goa Election Result 2017 Live. Here are the updates for Goa Assembly Election Results 2017. These are the complete result of Goa assembly election result 2017.
Please Wait while comments are loading...