ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಪೊಲೀಸರಿಂದ ತೆಹೆಲ್ಕಾ ಸಂಪಾದಕರ ಬಂಧನ

|
Google Oneindia Kannada News

Goa session court denied bail to Tehelka Tarun Tejpal, arrested
ಪಣಜಿ, ನ 30: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲಿ ತೆಹೆಲ್ಕಾ ಮಾಜಿ ಸಂಪಾದಕ, ಖ್ಯಾತ ಪತ್ರಕರ್ತ ತರುಣ್ ತೇಜಪಾಲ್ ಅವರನ್ನು ಗೋವಾ ಪೊಲೀಸರು ಇದೀಗ (ನ 30) ಬಂಧಿಸಿದ್ದಾರೆ.

ತರುಣ್ ತೇಜಪಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶನಿವಾರ ಬೆಳಗ್ಗೆ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಗೋವಾ ಸೆಷನ್ಸ್ ಕೋರ್ಟ್, ಸುದೀರ್ಘ ವಿಚಾರಣೆ ನಡೆಸಿ ತರುಣ್ ತೇಜಪಾಲ್ ಅವರಿಗೆ ಜಾಮೀನು ನಿರಾಕಸಿದ ಹಿನ್ನಲೆಯಲ್ಲಿ ಗೋವಾ ಪೊಲೀಸರು ತೇಜ್ಪಾಲ್ ಅವರನ್ನು ತಮ್ಮ ವಶಕ್ಕೆ ತೆಗೆದು ಕೊಂಡಿದ್ದಾರೆ.

ಈ ಕೇಸಿನ ತನಿಖಾಧಿಕಾರಿ ಸುನೀತಾ ಸಾವಂತ್, ಕೋರ್ಟ್ ತೇಜ್ಪಾಲಿಗೆ ಬೇಲ್ ನಿರಾಕರಿಸಿದೆ. ಗೋವಾ ಪೊಲೀಸರು ಅವರನ್ನು ಬಂಧಿಸಿದ್ದಾರೆ. ತಪಾಸಣೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದು ನಂತರ ಜೈಲಿಗೆ ಹಸ್ತಾಂತರಿಸಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಇದರೊಂದಿಗೆ ಕೆಲವು ದಿನಗಳಿಂದ ಬಂಧನಕ್ಕೊಳಾಗುವುದನ್ನು ತಪ್ಪಿಸಿಕೊಳ್ಳಲು ಪೊಲೀಸರ ಜೊತೆ ಕಣ್ಣುಮುಚ್ಚಾಲೆ ಆಡುತ್ತಿದ್ದ ತೇಜಪಾಲ್ ಕಾನೂನು ತೆಕ್ಕೆಗೆ ಸಿಕ್ಕಿ ಬಿದ್ದಂತಾಗಿದೆ.

English summary
Goa session court denied bail to Tehelka Tarun Tejpal and he is arrested by Goa police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X