ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸೇರಿದಂತೆ ಹೊರ ರಾಜ್ಯದ ಮೀನುಗಳಿಗೆ ಗೋವಾ ನಿರ್ಬಂಧ

|
Google Oneindia Kannada News

ಪಣಜಿ, ನವೆಂಬರ್ 11 : ಗೋವಾ ಸರ್ಕಾರ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳ ಮೀನುಗಳನ್ನು 6 ತಿಂಗಳ ಕಾಲ ನಿರ್ಬಂಧಿಸಿದೆ. ರಾಜ್ಯದ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸರ್ಕಾರ ಹೇಳಿದೆ.

ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಶನಿವಾರ ಈ ಕುರಿತು ಘೋಷಣೆ ಮಾಡಿದ್ದಾರೆ. ಈ ಆದೇಶ ನವೆಂಬರ್ 12ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

ಮೀನೂಟ ಬಡಿಸಿದವನಿಗೆ ಭರ್ಜರಿ ಗಿಫ್ಟ್‌ ನೀಡಿದ ಜಮೀರ್‌ ಅಹ್ಮದ್‌ಮೀನೂಟ ಬಡಿಸಿದವನಿಗೆ ಭರ್ಜರಿ ಗಿಫ್ಟ್‌ ನೀಡಿದ ಜಮೀರ್‌ ಅಹ್ಮದ್‌

'ಮೀನುಗಳನ್ನು ಕೆಡದಂತೆ ಸಿಂಪಡಿಸಲಾಗುವ ಫಾರ್ಮಲಿನ್ ಅಂಶವನ್ನು ಪತ್ತೆ ಹಚ್ಚಲು ಸರ್ಕಾರದಿಂದ ಪ್ರಯೋಗಾಲಯ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ' ಎಂದು ವಿಶ್ವಜಿತ್ ರಾಣೆ ತಿಳಿಸಿದ್ದಾರೆ.

ಎರ್ಮಾಳು ಕಡಲತೀರದಲ್ಲಿ ರಾಶಿ ರಾಶಿ ಮೀನು:ಕರಾವಳಿಗರಿಗೆ ಹಬ್ಬವೋ ಹಬ್ಬಎರ್ಮಾಳು ಕಡಲತೀರದಲ್ಲಿ ರಾಶಿ ರಾಶಿ ಮೀನು:ಕರಾವಳಿಗರಿಗೆ ಹಬ್ಬವೋ ಹಬ್ಬ

fish

'ಆರಂಭಿಕ ಹಂತದಲ್ಲಿ 6 ತಿಂಗಳ ಕಾಲ ಹೊರ ರಾಜ್ಯಗಳ ಮೀನುಗಳನ್ನು ನಿರ್ಭಂದಿಸುತ್ತಿದ್ದೇವೆ. ಪ್ರಯೋಗಾಲಯ ತೆರೆಯುವುದು ತಡವಾದಲ್ಲಿ ನಿರ್ಬಂಧ ಮತ್ತೆ ಆರು ತಿಂಗಳು ವಿಸ್ತರಣೆಯಾಗಬಹುದು' ಎಂದು ಸಚಿವರು ವಿವರಣೆ ನೀಡಿದ್ದಾರೆ.

ಅನಾರೋಗ್ಯದ ಬಳಿಕ ಗೋವಾ ಸಿಎಂ ಪರಿಕ್ಕರ್‌ ಈಗ ಹೇಗಿದ್ದಾರೆ ನೋಡಿಅನಾರೋಗ್ಯದ ಬಳಿಕ ಗೋವಾ ಸಿಎಂ ಪರಿಕ್ಕರ್‌ ಈಗ ಹೇಗಿದ್ದಾರೆ ನೋಡಿ

ಹೊರರಾಜ್ಯಗಳ ಮೀನುಗಳ ನಿರ್ಬಂಧ ಕುರಿತು ಪೊಲೀಸ್ ಅಧಿಕಾರಿಗಳ ಜೊತೆಗೂ ಸಭೆ ನಡೆಸಲಾಗಿದೆ. ನಿಯಮ ಮೀರಿದರೆ ಪ್ರಕರಣ ದಾಖಲು ಮಾಡಿಕೊಳ್ಳಲು ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

English summary
Goa Health Minister Vishwajit Rane announced that the state government banned the import of fish into the state for six months from November 12 , 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X