ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಅನುಭವ: ಭಾರತಕ್ಕೆ 80, ಪಾಕಿಸ್ತಾನಕ್ಕೆ 120ನೇ ಸ್ಥಾನ

|
Google Oneindia Kannada News

ನವದೆಹಲಿ, ಜನವರಿ 24: 2019ರ ಭ್ರಷ್ಟಾಚಾರ ಅನುಭವ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ಹಾಗೂ ಪಾಕಿಸ್ತಾನ ಜಾಗತಿಕ ಸರಾಸರಿಯ ಅಂಕಗಳಿಗಿಂತಲೂ ಕಡಿಮೆ ಪಡೆದು, ಕಳಪೆ ಪ್ರದರ್ಶನ ತೋರಿವೆ.

ಇದರಿಂದ ಭಾರತ 80 ಹಾಗೂ ಪಾಕಿಸ್ತಾನ 120ನೇ ಸ್ಥಾನ ಪಡೆದಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿ ಜಾಗತಿಕ ಸೂಚ್ಯಂಕವು 100ಕ್ಕೆ 43 ಇದ್ದರೆ ಭಾರತದಲ್ಲಿ ಅದು 41 ಇದೆ. ಪಾಕಿಸ್ತಾನವು 32 ಅಂಕ ಪಡೆದಿದೆ. ಹೀಗಾಗಿ 80 ದೇಶಗಳ ಪಟ್ಟಿಯಲ್ಲಿ ಈ ಎರಡೂ ದೇಶಗಳು ಸಾಧನೆ ಮಾಡಿಲ್ಲ.

2019 ರ ಟಾಪ್ 8 ಭ್ರಷ್ಟ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಯಾವ ಸ್ಥಾನ?2019 ರ ಟಾಪ್ 8 ಭ್ರಷ್ಟ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಯಾವ ಸ್ಥಾನ?

87 ಅಂಕ ಪಡೆದಿರುವ ಡೆನ್ಮಾರ್ಕ್ ಹಾಗೂ ನ್ಯೂಜಿಲೆಂಡ್ ಮೊದಲ ಸ್ಥಾನ ಪಡೆದಿವೆ. ಸಮೀಕ್ಷೆ ಪ್ರಕಾರ ಪ್ರಭಾವಿಗಳಿಗೆ ಮಣೆಹಾಕಿದ್ದು ಹಾಗೂ ಚುನಾವಣಾ ಅಕ್ರಮಗಳು ಈ ಸ್ಥಾನ ಕುಸಿತಕ್ಕೆ ಕಾರಣವಾಗಿವೆ. ಕಳೆದೊಂದು ವರ್ಷದಲ್ಲಿ ಭಾರತವು ಈ ಎರಡೂ ವಿಚಾರಗಳಿಗೆ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Global Corruption Perception Index Is Out

ಪಾಕಿಸ್ತಾನದಲ್ಲಿ ಸೇನೆ ಹಾಗೂ ಸರ್ಕಾರಗಳ ಮೇಲೆ ಪದೇ ಪದೇ ಭ್ರಷ್ಟಾಚಾರದ ಆರೋಪಗಳು ಬರುತ್ತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಇನ್ನು ಭಾರತದಲ್ಲಿಯೇ ಆಯಾ ಸರ್ಕಾರಗಳ ಮೇಲೆ ಆಗಿಂದಾಗೆ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಲೇ ಇದೆ.

ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿ ಹೊಸ ಸಕಾರದ ಮೇಲೆ ಅತೀವ ಭರವಸೆಯನ್ನು ಜನರು ಇಟ್ಟಿದ್ದರು. ಆದರೆ ಅನುಷ್ಠಾನದ ಹಂತದಲ್ಲಿ ಅದು ಸಫಲವಾಗದಿರುವುದು ಜಾಗತಿಕ ಸ್ಥಾನದಲ್ಲಿ ಕಂಡುಬಂದಿದೆ.

English summary
Global Corruption Perception Index Is Out India and Pakistan Got 80 And 120th Rank respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X