• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಾಹೇತರ ಸಂಬಂಧದಲ್ಲಿ ಮಹಿಳೆಯರೇ ಹೆಚ್ಚು!: ಡೇಟಿಂಗ್ ಆಪ್ ಸಮೀಕ್ಷೆ

|

ನವದೆಹಲಿ, ಫೆಬ್ರವರಿ 28: ವಿವಾಹಿತ ಭಾರತೀಯರಲ್ಲಿ ಶೇ 55ರಷ್ಟು ಮಂದಿ ತಮ್ಮ ಸಂಗಾತಿಗೆ ವಿಶ್ವಾಸದ್ರೋಹ ಎಸಗಿರುತ್ತಾರೆ. ಅವರಲ್ಲಿ ಶೇ 56ರಷ್ಟು ಮಂದಿ ಮಹಿಳೆಯರಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಭಾರತದ ಮೊದಲ ವಿವಾಹೇತರ ಡೇಟಿಂಗ್ ಆಪ್ 'ಗ್ಲೀಡೆನ್' ಈ ಸಮೀಕ್ಷೆಯನ್ನು ಇತ್ತೀಚೆಗೆ ನಡೆಸಿದೆ.

ಒಂದೇ ಸಮಯಕ್ಕೆ ಒಬ್ಬರೊಂದಿಗೆ ಪ್ರೀತಿಯಲ್ಲಿ ಬೀಳುವುದು ಸಾಧ್ಯ ಎಂದು ಶೇ 48ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಶೇ 46ರಷ್ಟು ಮಂದಿ, ತಮ್ಮ ಸಂಗಾತಿಯೊಂದಿಗೆ ಪ್ರೀತಿಯಲ್ಲಿ ಇರುವಾಗಲೇ ಅವರನ್ನು ವಂಚಿಸಲೂ ಸಾಧ್ಯ ಎಂದು ಹೇಳಿದ್ದಾರೆ.

ಅನೈತಿಕ ಸಂಬಂಧ ಹೊಂದಲು ಬಯಸುವವರಲ್ಲೇ ಬೆಂಗಳೂರಿಗರೇ ಟಾಪ್!

ಹೀಗಾಗಿ ತಮ್ಮ ಸಂಗಾತಿಯ ಇನ್ನೊಂದು ಪ್ರೇಮ ಪುರಾಣದ ಬಗ್ಗೆ ತಿಳಿದಿದ್ದರೂ ಭಾರತೀಯರು ಅವರನ್ನು ಕ್ಷಮಿಸುವಷ್ಟ ಔದಾರ್ಯ ಹೊಂದಿರುತ್ತಾರೆ. ಶೇ 7ರಷ್ಟು ಮಂದಿ ಮತ್ತೊಂದು ಆಲೋಚನೆಯನ್ನೂ ಮಾಡದೆ ತಮ್ಮ ಸಂಗಾತಿಯನ್ನು ಕ್ಷಮಿಸಿಬಿಡುತ್ತಾರಂತೆ. ಶೇ 40ರಷ್ಟು ಮಂದಿ ಅಂತಹ ಸಂದರ್ಭಬಂದಾಗ ಕ್ಷಮೆ ನೀಡಲು ಸಿದ್ಧರಿರುತ್ತಾರಂತೆ. ಹಾಗೆಯೇ ಶೇ 69ರಷ್ಟು ಮಂದಿ ತಮ್ಮ ವಿವಾಹೇತರ ಸಂಬಂಧವನ್ನು ತಮ್ಮ ಸಂಗಾತಿ ಕ್ಷಮಿಸಬೇಕು ಎಂಬ ಬಯಕೆ ಹೊಂದಿರುತ್ತಾರೆ.

1,525 ವಿವಾಹಿತರ ಸಮೀಕ್ಷೆ

1,525 ವಿವಾಹಿತರ ಸಮೀಕ್ಷೆ

25 ರಿಂದ 50 ವರ್ಷ ವಯಸ್ಸಿನ 1,525 ವಿವಾಹಿತ ಭಾರತೀಯರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಪುಣೆ, ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ಈ ಸಮೀಕ್ಷೆ ನಡೆದಿದೆ.

ಕುಟುಂಬ ನಿಶ್ಚಯಿಸಿದ ಮದುವೆಗಳೇ ಹೆಚ್ಚು

ಕುಟುಂಬ ನಿಶ್ಚಯಿಸಿದ ಮದುವೆಗಳೇ ಹೆಚ್ಚು

ಭಾರತದಲ್ಲಿ ವಿವಾಹ ವಿಚ್ಛೇದನದ ಪ್ರಮಾಣ ಜಗತ್ತಿನಲ್ಲಿ ತೀರಾ ಕಡಿಮೆ ಇದ್ದು ಶೇ 1ರಷ್ಟು ಮಾತ್ರವಿದೆ. 1,000 ಜನರಿಗೆ 13ರಷ್ಟು ಮಂದಿ ಮಾತ್ರ ತಮ್ಮ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಶೇ 90ರಷ್ಟು ಮದುವೆಗಳನ್ನು ಕುಟುಂಬಗಳೇ ನಿರ್ಧರಿಸುತ್ತವೆ. ಶೇ 5ರಷ್ಟು ಮದುವೆಗಳು ಮಾತ್ರ ಪ್ರೇಮವಿವಾಹವಾಗಿರುತ್ತದೆ.

ಡೇಟಿಂಗ್ ಆಪ್ ಬಳಸಿ ಜೀವನ ಸಂಗಾತಿ ಆಯ್ಕೆ ಬೆಂಗಳೂರಿಗರು ಮುಂದೆ

ವಿವಾಹೇತರ ಸಂಬಂಧ ಹೆಚ್ಚು

ವಿವಾಹೇತರ ಸಂಬಂಧ ಹೆಚ್ಚು

ತಮ್ಮ ಜೀವನ ಸಂಗಾತಿಯಲ್ಲದೆ ಬೇರೊಬ್ಬರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವುದಾಗಿ ಶೇ 49ರಷ್ಟು ವಿವಾಹಿತರು ತಪ್ಪೊಪ್ಪಿಕೊಳ್ಳುತ್ತಾರೆ. 10ರಲ್ಲಿ ಹೆಚ್ಚೂ ಕಡಿಮೆ ಐದು ಮಂದಿ ಈಗಾಗಲೇ ಪ್ರಾಸಂಗಿಕವಾಗಿ ಲೈಂಗಿಕ ಸಂಬಂಧ (ಶೇ 47) ಅಥವಾ ಒಂದು ರಾತ್ರಿ ಕಳೆದಿರುತ್ತಾರೆ (ಶೇ 46). ದಾಂಪತ್ಯದ ನಂಬಿಕೆಗೆ ದ್ರೋಹ ಎಸಗುವುದರಲ್ಲಿ ಮಹಿಳೆಯರ ಪ್ರಮಾಣವೇ ಹೆಚ್ಚಿದೆ ಎಂದು ಸಮೀಕ್ಷೆ ಹೇಳುತ್ತದೆ.

ವಿವಾಹೇತರ ಲೈಂಗಿಕ ಸಂಬಂಧ- ಮಹಿಳೆಯರೇ ಮುಂದು

ವಿವಾಹೇತರ ಲೈಂಗಿಕ ಸಂಬಂಧ- ಮಹಿಳೆಯರೇ ಮುಂದು

ಶೇ 41ರಷ್ಟು ಮಹಿಳೆಯರು ತಮ್ಮ ಪತಿಯಲ್ಲದೆ ಬೇರೆಯವರ ಜತೆಗೆ ಆಗಾಗ ಲೈಂಗಿಕ ಸಂಬಂಧ ಹೊಂದುವುದನ್ನು ಒಪ್ಪಿಕೊಂಡಿದ್ದಾರೆ. ಈ ಪ್ರಮಾಣ ಪುರುಷರಲ್ಲಿ ಶೇ 26ರಷ್ಟಿದೆ. ತಮ್ಮ ಮದುವೆಯಾಚೆ ಆತ್ಮೀಯ ಸಂಬಂಧವನ್ನು ಹೊಂದಿರುವುದಾಗಿ ಶೇ 53ರಷ್ಟು ವಿವಾಹಿತ ಮಹಿಳೆಯರು ತಿಳಿಸಿದ್ದರೆ, ಶೇ 43ರಷ್ಟು ಪುರುಷರು ಹೀಗೆ ಆಪ್ತ ಸಂಬಂಧ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಅಮ್ಮನ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ: ಬಾಲಕನ ಹತ್ಯೆ

ಡೇಟಿಂಗ್ ಆಪ್‌ನಲ್ಲಿ ಮಹಿಳೆಯರೇ ಹೆಚ್ಚು

ಡೇಟಿಂಗ್ ಆಪ್‌ನಲ್ಲಿ ಮಹಿಳೆಯರೇ ಹೆಚ್ಚು

'ದಾಂಪತ್ಯ ದ್ರೋಹ ಅಥವಾ ವಿವಾಹೇತರ ಸಂಬಂಧದ ಕುರಿತು ಭಾರತದ ಮಹಿಳೆಯರು ಹೆಚ್ಚು ಮುಕ್ತ ಮನಸಿನವರಾಗಿದ್ದಾರೆ ಎನಿಸುತ್ತದೆ. ಅದರಲ್ಲಿಯೂ ರೊಮ್ಯಾನ್ಸ್‌ನಲ್ಲಿ ಒಳಗೊಳ್ಳುವ ವಿಚಾರದಲ್ಲಿ ಹೆಚ್ಚು ಮುಕ್ತ ಮನಸಿನವರಾಗಿದ್ದಾರೆ. ದಾಂಪತ್ಯ ಸಂಬಂಧಗಳಿಗೆ ಯಾವುದೇ ಧಕ್ಕೆ ಬಾರದಂತೆ ಸಮಾನ ಮನಸ್ಕ ವ್ಯಕ್ತಿಗಳ ಜತೆಗೆ ಹೊಸ ಪ್ರೇಮ ಕಥೆ ಹೊಸೆಯಲು ಉತ್ತಮವಾದ ವಾತಾವರಣವನ್ನು ಗ್ಲೀಡೆನ್ ಒದಗಿಸುತ್ತದೆ. ಮಹಿಳೆಯರು ಸಂಪೂರ್ಣ ರೊಮ್ಯಾಂಟಿಕ್ ಅನುಭವವನ್ನು ತಮ್ಮ ಖಾಸಗಿತನದ ರಕ್ಷಣೆಯೊಂದಿಗೆ ಪಡೆದುಕೊಳ್ಳಬಹುದು. ಹಾಗೂ ಅವರ ರಹಸ್ಯ ಸುರಕ್ಷಿತವಾಗಿಯೇ ಇರುತ್ತದೆ. ಈ ಕಾರಣದಿಂದಾಗಿಯೇ ಗ್ಲೀಡೆನ್ ಹೆಚ್ಚಿನ ಮಹಿಳೆಯರನ್ನು ಪ್ರತಿ ದಿನ ಆಕರ್ಷಿಸುತ್ತಿದೆ' ಎಂದು ಆಪ್‌ನ ಮಾರ್ಕೆಟಿಂಗ್ ಡೈರೆಕ್ಟರ್ ಸೋಲೆನ್ ಪೈಲೆಟ್ ಹೇಳಿದ್ದಾರೆ.

ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ

ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ

2017ರ ಏಪ್ರಿಲ್‌ನಲ್ಲಿ ಭಾರತಕ್ಕೆ ಕಾಲಿಟ್ಟ ಗ್ಲೀಡೆನ್ ಡೇಟಿಂಗ್ ಆಪ್, ದೇಶದಲ್ಲಿ ಎಂಟು ಲಕ್ಷ ಗ್ರಾಹಕರನ್ನು ಹೊಂದಿರುವುದಾಗಿ ತಿಳಿಸಿದೆ. 2018ರಲ್ಲಿ ಸುಪ್ರೀಂಕೋರ್ಟ್, ವಿವಾಹೇತರ ಸಂಬಂಧ ಕಾನೂನು ಬಾಹಿರವಲ್ಲ ಎಂಬ ತೀರ್ಪು ನೀಡಿದ ಬಳಿಕ ಈ ಡೇಟಿಂಗ್ ಆಪ್‌ನ ಬಳಕೆದಾರರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ.

English summary
Dating app Gleeden's survey said, 55% of married Indians are unfaithful to their partner at least once.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X