ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಉತ್ತರಾಖಂಡ್ ಹಿಮಪಾತದಿಂದ ಸಾವು-ನೋವಿನ ಕುರಿತು ಸಂಪೂರ್ಣ ಮಾಹಿತಿ

|
Google Oneindia Kannada News

ಉತ್ತರಾಖಂಡ್ ಚಮೋಲಿ ಜಿಲ್ಲೆಯ ಹಿಮಪರ್ವತಗಳಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಈ ಪ್ರದೇಶದಲ್ಲಿ ಹರಿಯುವ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಪ್ರವಾಹ ಭೀತಿ ಎದುರಾಗಿತ್ತು. ರೇನಿ, ದೌಲಿಗಂಗಾ ನದಿಯಲ್ಲಿ ನೀರಿನ ಮಟ್ಟದ ಅಪಾಯದ ಮೀರಿ ಹರಿಯುತ್ತಿದೆ.

ಹಿಮಪಾತದಲ್ಲಿ ಸಿಲುಕಿ ಪ್ರಾಣ ಬಿಟ್ಟ 30 ಜನರ ಮೃತದೇಹಗಳು ಪತ್ತೆಯಾಗಿವೆ. ಒಂದೇ ಸುರಂಗದಲ್ಲಿ ಸುಮಾರು 35 ಜನರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ನಂದಾದೇವಿ ಹಿಮನದಿಯಲ್ಲಿ ಹಿಮ ಪಾತದ ಪರಿಣಾಮ ಉಂಟಾಗಿರುವ ಪ್ರವಾಹ ಭೀತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 1070 or 9557444486ಕ್ಕೆ ಕರೆ ಮಾಡಬಹುದು.

ರಾಜ್ಯದಲ್ಲಿ ರಕ್ಷಣಾ ಕಾರ್ಯಾಚರಣೆ ಅನುಕೂಲಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಸೋಮವಾರವೇ 20 ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗುವುದು ಎಂದು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದರು. ಮೃತರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು.

Glacier Burst in Chamoli district, high alert in Uttarakhand

Newest FirstOldest First
3:24 PM, 9 Feb

ಉತ್ತರಾಖಂಡ್ ದಲ್ಲಿ ಭಾರಿ ಹಿಮಪಾತದಿಂದಾಗಿ ಋಷಿಗಂಗಾ ವಿದ್ಯುತ್ ಯೋಜನೆಗೂ ಹಾನಿಯಾಗಿದೆ. ರೇಣಿ ಗ್ರಾಮದ ತಪೋವನ ಪ್ರದೇಶವು ಹಿಮದಿಂದ ತುಂಬಿದೆ. ಜೋಶಿಮಠ್ ಪ್ರದೇಶದಲ್ಲಿ ಹಿಮಪರ್ವತ ಸ್ಫೋಟದಿಂದ ಅಲಕ್ ನಂದ್, ದೌಲಿಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 171ಕ್ಕೂ ಅಧಿಕ ಮಂದಿ ಕಾರ್ಮಿಕರು ನಾಪತ್ತೆ ಆಗಿದ್ದಾರೆ.
3:01 PM, 9 Feb

ಚಮೋಲಿ ಜಿಲ್ಲೆಯ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುುವರಿಸಲಾಗಿದ್ದು, ಇದುವರೆಗೂ ಉತ್ತರಾಖಂಡ್ ಹಿಮಪಾತದಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
1:58 PM, 9 Feb

ಉತ್ತರಾಖಂಡ್ ಹಿಮಪಾತದಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಭಡೋರಿಯಾ ತಿಳಿಸಿದ್ದಾರೆ.
12:02 PM, 9 Feb

ಉತ್ತರಾಖಂಡ್ ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ 11 ಕೋಟಿ ರೂಪಾಯಿ ನೆರವು ನೀಡಿದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್.
12:00 PM, 9 Feb

ಉತ್ತರಾಖಂಡ್ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗಾಗಿ ಮುಂದುವರಿದ ಕಾರ್ಯಾಚರಣೆ.
11:59 AM, 9 Feb

ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್.
11:58 AM, 9 Feb

ಉತ್ತರಾಖಂಡ್ ತಪೋವನ ಸುರಂಗದಲ್ಲಿ ITBP, Army, NDRF, SDRF ಸಿಬ್ಬಂದಿಯಿಂದ ಮುಂದವರಿದ ರಕ್ಷಣಾ ಕಾರ್ಯಾಚರಣೆ.
Advertisement
11:59 PM, 8 Feb

ಜಾರ್ಖಂಡ್‌ನ ಗ್ರಾಮದಿಂದ ಕೆಲಸಕ್ಕೆಂದು ಉತ್ತರಾಖಂಡಕ್ಕೆ ತೆರಳಿದ್ದ 9 ಕಾರ್ಮಿಕರು ನಾಪತ್ತೆಯಾಗಿದ್ದಾರೆ.
11:30 PM, 8 Feb

ಉತ್ತರಾಖಂಡದ ಪ್ರವಾಹವು ಹಠಾತ್ ಹಿಮಪಾತದಿಂದ ಉಂಟಾಗಿರಬೇಕೇ ವಿನಾ ಹಿಮನದಿ ಸ್ಫೋಟದಿಂದ ಅಲ್ಲ ಎಂದು ಮುಖ್ಯಮಂತ್ರಿ ರಾವತ್ ಹೇಳಿದ್ದಾರೆ.
10:33 PM, 8 Feb

ಉತ್ತರ ಪ್ರದೇಶ ಸರ್ಕಾರವು ಉತ್ತರಾಖಂಡದ ದುರಂತದಲ್ಲಿ ಮೃತಪಟ್ಟ ತಮ್ಮ ರಾಜ್ಯದ ಕುಟುಂಬದವರಿಗೆ ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಿದೆ.
9:46 PM, 8 Feb

ಉತ್ತರಾಖಂಡದಲ್ಲಿನ ನಡೆದ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಜನರಿಗಾಗಿ 1070 ಟೋಲ್ ಫ್ರೀ ಸಂಖ್ಯೆ ಮತ್ತು 9454441036 ವಾಟ್ಸಾಪ್ ಸಂಖ್ಯೆ ಸ್ಥಾಪಿಸಲಾಗಿದೆ.
8:51 PM, 8 Feb

ಫೆ. 8ರ ರಾತ್ರಿ ಎಂಟು ಗಂಟೆಯವರೆಗೂ 26 ಮೃತದೇಹಗಳು ಪತ್ತೆಯಾಗಿವೆ. 171 ಜನರು ಇನ್ನೂ ಪತ್ತೆಯಾಗಿಲ್ಲ. ಸುಮಾರು 35 ಜನರು ಸುರಂಗದ ಒಳಗೆ ಇದ್ದಾರೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
Advertisement
8:06 PM, 8 Feb

ಇದುವರೆಗೂ 24 ಮೃತದೇಹಗಳು ಪತ್ತೆಯಾಗಿವೆ ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
7:34 PM, 8 Feb

ಹಿಮನದಿ ಸ್ಫೋಟಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಸಂಸದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡ ಹಾಜರಿದ್ದರು.
6:52 PM, 8 Feb

ಚಮೋಲಿಯ ತಪೋವನ ಸುರಂಗದಲ್ಲಿ ಐಟಿಬಿಪಿ ಸಿಬ್ಬಂದಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಜಂಟಿ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ ವಿಡಿಯೋ
6:28 PM, 8 Feb

ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯು ವ್ಯಾಪಕವಾಗಿ ನಡೆಯುತ್ತಿದೆ. ನಾನು ಜೋಶಿಮಠಕ್ಕೆ ತೆರಳಿ ಅಲ್ಲಿಯೇ ರಾತ್ರಿ ಕಳೆಯಲಿದ್ದೇನೆ. ನಾಳೆ ಹಾನಿಗೊಳಗಾದ ಸ್ಥಳಗಳಿಗೆ ತೆರಳಿ ಜನರನ್ನು ಭೇಟಿ ಮಾಡಲಿದ್ದೇನೆ ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಟ್ವೀಟ್ ಮಾಡಿದ್ದಾರೆ.
5:03 PM, 8 Feb

ಹಿಮನದಿ ಸ್ಫೋಟಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಪರಿಶೀಲನಾ ಸಭೆ ಹಮ್ಮಿಕೊಂಡಿದ್ದು, ರಾಜ್ಯ ಪ್ರಾಕೃತಿಕ ವಿಕೋಪ ನಿಧಿಯಿಂದ 20 ಕೋಟಿ ರೂ ಹಣ ಬಿಡುಗಡೆ ಮಾಡಿದ್ದಾರೆ.
4:31 PM, 8 Feb

ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಸ್ಫೋಟದಲ್ಲಿ ಸಿಲುಕಿರುವ ಜನರ ಸಹಾಯಕ್ಕೆ ಜಾರ್ಖಂಡ್ ಸರ್ಕಾರ ಹೆಲ್ಪ್‌ಲೈನ್ ಸಂಖ್ಯೆಗಳನ್ನು ನೀಡಿದೆ.
4:01 PM, 8 Feb

ಹಿಮನದಿ ಸ್ಫೋಟದಿಂದ ಸಂಕಷ್ಟಕ್ಕೆ ಸಿಲುಕಿರುವ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜನರಿಗೆ ಧೈರ್ಯ ತುಂಬಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇಡೀ ದೇಶ ಉತ್ತರಾಖಂಡ ಜನರೊಂದಿಗೆ ನಿಲ್ಲಲಿದೆ ಎಂದು ಹೇಳಿದ್ದಾರೆ.
3:35 PM, 8 Feb

ನಮ್ಮ ತಂಡವು ಚಾಮೋಲಿಯಲ್ಲಿ ಏರಿಯಲ್ ಸರ್ವೇ ನಡೆಸಿದೆ. ಮೊದಲು ಕಣಿವೆಯಲ್ಲಿ ನದಿ ಸೃಷ್ಟಿಯಾಗಿ ನಂತರ ಅದು ಸ್ಫೋಟಗೊಂಡಿದೆ. ಇದು ಸಾಕಷ್ಟು ಹಾನಿಗೆ ಕಾರಣವಾಗಿದೆ. ನಮ್ಮ ವಿಜ್ಞಾನಿಗಳು ಈ ಸಂಗತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಡಿಆರ್ ಡಿಒ ನಿರ್ದೇಶಕ ಡಾ.ಎಲ್.ಕೆ. ಸಿನ್ದಾ ತಿಳಿಸಿದ್ದಾರೆ.
2:27 PM, 8 Feb

ಉತ್ತರಾಖಂಡ್ ಚಮೋಲಿ ಜಿಲ್ಲೆಯ ಸುರಂಗದಲ್ಲಿ 34 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆಯಿದೆ. 70 ಮೀಟರ್ ಕ್ರಮಿಸಿದರೂ ಕಾರ್ಮಿಕರ ಸುಳಿವು ಸಿಕ್ಕಿಲ್ಲ, ಇನ್ನೂ 180 ಮೀಟರ್ ಸುರಂಗದಲ್ಲಿ ಕ್ರಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತದೆ.
1:30 PM, 8 Feb

ಉತ್ತರಾಖಂಡ್ ನಲ್ಲಿ ವಾಯುಪಡೆ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ.
9:20 AM, 8 Feb

ಉತ್ತರಾಖಂಡ್ ಹಿಮ ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗಿದೆ ಈ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಏನಾದರೂ ಸಹಾಯ ಬೇಕೆ ಎಂದು ಭಾರತವನ್ನು ಕೇಳಿದ್ದಾರೆ. ಭಾರತಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡಲು ಬ್ರಿಟನ್ ಸಿದ್ಧವಿದೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.ಇಂತಹ ಸಂದರ್ಭದಲ್ಲಿ ಯುಕೆ ಭಾರತದೊಂದಿಗೆ ನಿಂತಿದೆ, ಯಾವುದೇ ಸಂದರ್ಭದಲ್ಲಿ ನಾವು ಅಗತ್ಯ ಬೆಂಬಲ ನೀಡಲು ಸಿದ್ಧವಿದ್ದೇವೆ ಎಂದರು.
8:43 AM, 8 Feb

IMDಯಿಂದ ಮಹತ್ವದ ಹವಾಮಾನ ಮುನ್ಸೂಚನೆ

ಹಿಮಪಾತದ ನಂತರ ಭಾರತೀಯ ಹವಾಮಾನ ಇಲಾಖೆಯಿಂದ ಮಹತ್ವದ ಹವಾಮಾನ ಮುನ್ಸೂಚನೆ ಸಿಕ್ಕಿದೆ.
8:29 AM, 8 Feb

ಗಂಗಾ ನದಿ ಹರಿಯುವ ಜಿಲ್ಲೆಗಳಲ್ಲಿ ಹೈ ಅಲರ್ಟ್

ಉತ್ತರಾಖಂಡ್ ನಲ್ಲಿರುವ ನಂದಾ ದೇವಿ ಹಿಮಪರ್ವತ ಸ್ಫೋಟದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಹೈಅಲರ್ಟ್ ಘೋಷಿಸಿದೆ.
7:02 AM, 8 Feb

ಚಮೋಲಿಯಲ್ಲಿ ನಡೆದ ರಕ್ಷಣಾ ಕಾರ್ಯದ ಚಿತ್ರಗಳು
7:01 AM, 8 Feb

ಚಮೋಲಿ ಜಿಲ್ಲೆಯ ತಪೋವನದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿರುವಾಗ 8 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ.
8:54 PM, 7 Feb

ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೊರಟ ಭಾರತೀಯ ವಾಯುಪಡೆಯ ಸಿ-130 ವಿಮಾನ.
8:07 PM, 7 Feb

ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆಯ ಸಿ-130 ವಿಮಾನಗಳನ್ನು ಡೆಹ್ರಾಡೂನ್ ಗೆ ಕಳುಹಿಸಿ ಕೊಡಲಾಗಿದೆ.
8:05 PM, 7 Feb

ಉತ್ತರಾಖಂಡ್ ಹಿಮನದಿ ಸ್ಫೋಟಗೊಂಡಿರುವ ಈ ವೇಳೆಯಲ್ಲಿ ಫ್ರಾನ್ಸ್ ಭಾರತದೊಂದಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ. 100ಕ್ಕೂ ಹೆಚ್ಚು ಜನರ ಕಣ್ಮರೆಗೆ ಕಾರಣವಾಗಿರುವ ಕುಟುಂಬಗಳೊಂದಿಗೆ ನಾವಿದ್ದೇವೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
READ MORE

English summary
uttrakhand Glacier burst live updates in kannada: A glacier broke off in Joshimath in Uttarakhand's Chamoli district today. Stay here for all live updates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X