ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಇಬ್ಬಗೆ ನೀತಿ ಬಿಟ್ಟು, ಆರೋಪಿಗಳಿಗೆ ಶಿಕ್ಷೆ ನೀಡಿ: ಪಾಕ್ ಗೆ ಛೀಮಾರಿ ಹಾಕಿದ ಭಾರತ

|
Google Oneindia Kannada News

ಮುಂಬೈ 26/11 ದಾಳಿಗೆ 10 ವರ್ಷ ಆಗಿದ್ದು, 166 ಅಮಾಯಕರು ಮೃತಪಟ್ಟಿದ್ದರೆ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ದಾಳಿಯ ಆರೋಪಿಗಳನ್ನು ಕಾನೂನಿನ ಮುಂದೆ ನಿಲ್ಲಿಸಲು ಪಾಕಿಸ್ತಾನ ಸ್ವಲ್ಪವೂ ಪ್ರಾಮಾಣಿಕತೆ ತೋರುತ್ತಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.

26/11 ದಾಳಿಯ ಯೋಜನೆ ರೂಪಿಸಿದ್ವರು ಈಗಲೂ ಪಾಕಿಸ್ತಾನದ ರಸ್ತೆಗಳಲ್ಲಿ ಓಡಾಡಿಕೊಂಡಿದ್ದಾರೆ. 26/11 ದಾಳಿ ಯೋಜನೆ, ಅನುಷ್ಠಾನ ಹಾಗೂ ಶುರು ಮಾಡಿದ್ದು ಪಾಕಿಸ್ತಾನದ ನೆಲದಿಂದ. ಪಾಕಿಸ್ತಾನ ಸರಕಾರವು ಇಬ್ಬಗೆ ನೀತಿಯನ್ನು ಬಿಟ್ಟು, ಅಂಥ ಕ್ರೂರ ದಾಳಿ ನಡೆಸಿದ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಿ, ನ್ಯಾಯ ದೊರೆಯುವಂತೆ ಆಗಬೇಕು ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅತ್ಯಂತ ರಹಸ್ಯವಾಗಿ ಅಂದು ನಡೆದಿತ್ತು ಅಜ್ಮಲ್ ಕಸಬ್ ಗಲ್ಲು ಶಿಕ್ಷೆ ಅತ್ಯಂತ ರಹಸ್ಯವಾಗಿ ಅಂದು ನಡೆದಿತ್ತು ಅಜ್ಮಲ್ ಕಸಬ್ ಗಲ್ಲು ಶಿಕ್ಷೆ

26/11 ದಾಳಿಯ ಹೊಣೆಗಾರ ಭಯೋತ್ಪಾದಕರು ಹಾಗೂ ಉಗ್ರ ಸಂಘಟನೆಗಳಾದ ಲಷ್ಕರ್ ಇ ತೈಬಾ ಹಾಗೂ ಇತರ ಸಂಘಟನೆ ವಿರುದ್ಧ ದಿಗ್ಬಂಧನ ಹಾಕುವುದಾಗಿ ವಿಶ್ವಸಂಸ್ಥೆ ಭದ್ರತಾ ಸಭೆಯಲ್ಲಿ ಪಾಕಿಸ್ತಾನ ಕೊಟ್ಟ ಮಾತಿನಂತೆ ನಡೆದುಕೊಳ್ಳಲೇಬೇಕು ಎಂದು ಅಮೆರಿಕವು ನೀಡಿದ ಹೇಳಿಕೆಯನ್ನು ಭಾರತ ಸ್ವಾಗತಿಸಿದೆ.

ಹಫೀಜ್ ಸಯೀದ್, ಝಕಿ ಉರ್ ರೆಹಮಾನ್ ಲಖ್ವಿ ಮಾಸ್ಟರ್ ಮೈಂಡ್ಸ್

ಹಫೀಜ್ ಸಯೀದ್, ಝಕಿ ಉರ್ ರೆಹಮಾನ್ ಲಖ್ವಿ ಮಾಸ್ಟರ್ ಮೈಂಡ್ಸ್

ನವೆಂಬರ್ 26, 2008ರಲ್ಲಿ ಕರಾಚಿಯಿಂದ ಮುಂಬೈಗೆ ಸಮುದ್ರ ಮಾರ್ಗದಲ್ಲಿ ಬಂದ ಲಷ್ಕರ್ ಇ ತೈಬಾದ ಹತ್ತು ಉಗ್ರರು ದಾಳಿ ನಡೆಸಿದ್ದರು. ಆ ದಾಳಿಯಲ್ಲಿ 166 ಮಂದಿಯನ್ನು ಕೊಲ್ಲಲಾಗಿತ್ತು. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ನ ಹಫೀಜ್ ಸಯೀದ್ ಹಾಗೂ ಝಕಿ ಉರ್ ರೆಹಮಾನ್ ಲಖ್ವಿ ಎಂಬುದು ಆರೋಪ.

ಉಗ್ರ ಹಫೀಜ್ ಸಯೀದ್ ನ ಕತ್ತಿನ ಮೇಲೆ ಕಾಲಿಟ್ಟಿತೇ ಪಾಕಿಸ್ತಾನ? ಉಗ್ರ ಹಫೀಜ್ ಸಯೀದ್ ನ ಕತ್ತಿನ ಮೇಲೆ ಕಾಲಿಟ್ಟಿತೇ ಪಾಕಿಸ್ತಾನ?

2012ನೇ ಇಸವಿಯಲ್ಲಿ ಅಜ್ಮಲ್ ಕಸಬ್ ನೇಣಿಗೆ

2012ನೇ ಇಸವಿಯಲ್ಲಿ ಅಜ್ಮಲ್ ಕಸಬ್ ನೇಣಿಗೆ

ಹತ್ತು ದಾಳಿಕೋರರ ಪೈಕಿ ಒಂಬತ್ತು ಮಂದಿಯನ್ನು ಕೊಲ್ಲಲಾಗಿತ್ತು. ಒಬ್ಬನನ್ನು (ಅಜ್ಮಲ್ ಕಸಬ್) ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಆತನನ್ನು 2012ನೇ ಇಸವಿಯಲ್ಲಿ ನೇಣಿಗೆ ಏರಿಸಲಾಯಿತು. "ಹದಿನೈದು ದೇಶಗಳ 166 ಮಂದಿಯನ್ನು ಆ ದಾಳಿಯಲ್ಲಿ ಕೊಲ್ಲಲಾಯಿತು. ಹತ್ಯೆಯಾದ ಕುಟುಂಬದವರು ಈ ಪ್ರಕರಣದಲ್ಲಿ ನ್ಯಾಯ ಸಿಗಲು ಕಾಯುತ್ತಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಮಿತಾಬ್ ಬಚ್ಚನ್ ನೋಡಲು ಬಂದಿದ್ದೆ ಎಂದಿದ್ದ 26/11ರ ದಾಳಿಯ ಉಗ್ರ ಕಸಬ್ ಅಮಿತಾಬ್ ಬಚ್ಚನ್ ನೋಡಲು ಬಂದಿದ್ದೆ ಎಂದಿದ್ದ 26/11ರ ದಾಳಿಯ ಉಗ್ರ ಕಸಬ್

ವಿಚಾರಣೆ ತಡ ಆಗುತ್ತಿರುವುದಕ್ಕೆ ಪಾಕ್ ಸರಕಾರವೇ ಹೊಣೆ

ವಿಚಾರಣೆ ತಡ ಆಗುತ್ತಿರುವುದಕ್ಕೆ ಪಾಕ್ ಸರಕಾರವೇ ಹೊಣೆ

"ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಗಳ ವಿಚಾರಣೆ ನಡೆಸುವುದರಲ್ಲಿ ತಡ ಆಗುತ್ತಿರುವುದಕ್ಕೆ ಪಾಕಿಸ್ತಾನ ಸರಕಾರವೇ ಜವಾಬ್ದಾರಿ" ಎನ್ನಲಾಗಿದೆ. ಮುಂಬೈ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಹಫೀಜ್ ಸಯೀದ್ ನನ್ನು ಕೆಲ ಕಾಲ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಆದರೆ ನಂತರ ಪಾಕಿಸ್ತಾನ ಕೋರ್ಟ್ ನಿಂದ ಆತನನ್ನು ಮುಕ್ತಗೊಳಿಸಲಾಯಿತು.

ಹಫೀಜ್ ಸಯೀದ್ ತಲೆಗೆ $ 10 ಮಿಲಿಯನ್ ಬಹುಮಾನ

ಹಫೀಜ್ ಸಯೀದ್ ತಲೆಗೆ $ 10 ಮಿಲಿಯನ್ ಬಹುಮಾನ

ಪಾಕಿಸ್ತಾನದಲ್ಲಿ ವಿವಿಧ ಉಗ್ರ ಸಂಘಟನೆಗಳಿಗೆ ನಿಷೇಧ ಹೇರಿದ್ದರೂ ಅವು ಹೆಸರು ಬದಲಿಸಿಕೊಂಡು, ಕಾರ್ಯ ಚಟುವಟಿಕೆ ಮುಂದುವರಿಸಿದ ಉದಾಹರಣೆಗಳಿವೆ. ಇನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆತನ ಪಾತ್ರ ಇರುವುದರಿಂದ ಹಫೀಜ್ ಸಯೀದ್ ತಲೆಗೆ ಅಮೆರಿಕವು $ 10 ಮಿಲಿಯನ್ ಬಹುಮಾನ ಘೋಷಿಸಿದೆ.

ಮುಂಬೈ ದಾಳಿ: ಹತ್ತು ವರ್ಷ ಕಳೆದರೂ ಇನ್ನೂ ಮಾಸದ ಗಾಯದ ಕಲೆ ಮುಂಬೈ ದಾಳಿ: ಹತ್ತು ವರ್ಷ ಕಳೆದರೂ ಇನ್ನೂ ಮಾಸದ ಗಾಯದ ಕಲೆ

English summary
On the 10th anniversary of the 2008 Mumbai terror attacks, India has hit out at Pakistan for allowing those responsible for the strike that left 166 people dead to roam free. Pakistan has shown little sincerity in bringing perpetrators to justice, the centre said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X