ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾಲಿಕಾಗೃಹದಲ್ಲಿ ಲೈಂಗಿಕ ದೌರ್ಜನ್ಯ: ಇಂತಹ ಘಟನೆಗಳು ಇನ್ನೂ ಇವೆ'

|
Google Oneindia Kannada News

ನವದೆಹಲಿ, ಆಗಸ್ಟ್ 6: 'ಮುಜಫ್ಫರ್‌ಪುರ ಮತ್ತು ಡಿಯೊರಿಯಾದಲ್ಲಿ ನಡೆದಿರುವ ಘಟನೆಗಳು ನಮಗೆ ತೀವ್ರ ಆಘಾತ ಮತ್ತು ದುಃಖ ಉಂಟುಮಾಡಿವೆ. ಇಂತಹ ಅನೇಕ ಸ್ಥಳಗಳನ್ನು ಹೊರಕ್ಕೆ ತೆಗೆಯುತ್ತೇವೆ' ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

ಬಿಹಾರದ ಮುಜಫ್ಫರ್ ಪುರ ಮತ್ತು ಉತ್ತರ ಪ್ರದೇಶದ ಡಿಯೊರಿಯಾದಲ್ಲಿನ ಬಾಲಿಕಾಗೃಹಗಳಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಅವರು ಮೇನಕಾ ಕಳವಳ ವ್ಯಕ್ತಪಡಿಸಿದ್ದಾರೆ.

ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಹೊರಬಿದ್ದ ಭಯಾನಕ ಸತ್ಯಗಳು!ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಹೊರಬಿದ್ದ ಭಯಾನಕ ಸತ್ಯಗಳು!

'ಎಲ್ಲ ಸಂಸದರೂ ತಮ್ಮ ಕ್ಷೇತ್ರಗಳಲ್ಲಿನ ಬಾಲಿಕಾಗೃಹಗಳು, ಸಂಸ್ಥೆಗಳಿಗೆ ಭೇಟಿ ನೀಡಿ ಅವುಗಳ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗುವುದು. ನಾನು ಕೂಡಲೇ ಕ್ರಮ ಕೈಗೊಳ್ಳುತ್ತೇನೆ.

girls shelter cases maneka gandhi asked mps to give reports

ಇದಕ್ಕೆ ದೀರ್ಘಾವಧಿ ಪರಿಹಾರವೆಂದರೆ, ಸಣ್ಣ ಸಣ್ಣ ಕೇಂದ್ರಗಳನ್ನು ತೆರೆಯುವ ಬದಲು, ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಇರುವಂತಹ 1000 ಮಹಿಳೆಯರು ಮತ್ತು 1000 ಮಕ್ಕಳು ವಾಸಿಸಲು ಯೋಗ್ಯವಾದ ಬೃಹತ್ ಮನೆಗಳನ್ನು ನಿರ್ಮಿಸುವುದು. ಇದಕ್ಕೆ ನಾನು ಹಣ ಮಂಜೂರು ಮಾಡಿಕೊಡುತ್ತೇನೆ' ಎಂದು ಹೇಳಿದ್ದಾರೆ.

ಈ ಘಟನೆಗಳು ಭಯ ಮತ್ತು ನೋವುಂಟುಮಾಡುತ್ತಿವೆ. ಏಕೆಂದರೆ, ನಾವು ಈ ಕೇಂದ್ರಗಳಿಗೆ ವರ್ಷಗಳಿಂದ ಹಣ ನೀಡುವುದರ ಹೊರತಾಗಿ ಬೇರೆ ಯಾವುದೇ ಗಮನ ಹರಿಸಿಲ್ಲ ಎಂದಿದ್ದಾರೆ.

ಬಿಹಾರದ ಮುಜಫ್ಫರ್‌ಪುರದ ಬಾಲಿಕಾ ಗೃಹವೊಂದರಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ಸಂಗತಿ ಇತ್ತೀಚೆಗೆ ಬಹಿರಂಗವಾಗಿತ್ತು.

ಬಿಹಾರ: ಆಶ್ರಮದಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ ಬಿಹಾರ: ಆಶ್ರಮದಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಡಿಯೊರಿಯಾದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ 24 ಬಾಲಕಿಯರನ್ನು ಭಾನುವಾರ ರಕ್ಷಿಸಲಾಗಿದೆ. ಇನ್ನು ಉಳಿದ 18 ಬಾಲಕಿಯರು ನಾಪತ್ತೆಯಾಗಿದ್ದಾರೆ.

ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಮಾ ವಿಂಧ್ಯವಾಸಿನಿ ಮಹಿಳಾ ಪ್ರಕಿಷಣ್ ಏವಂ ಸಮಾಜ ಸೇವಾ ಸಂಸ್ಥಾನ್ ಎಂಬ ಹೆಸರಿನ ಬಾಲಿಕಾಗೃಹದಲ್ಲಿ ಅಕ್ರಮಗಳು ನಡೆಯುತ್ತಿದ್ದವು ಎಂದು ಆರೋಪಿಸಲಾಗಿದೆ.

ಇದನ್ನು ಎನ್‌ಜಿಓ ಒಂದು ನಡೆಸುತ್ತಿದ್ದು, ಅದಕ್ಕೆ ನೀಡಲಾಗಿದ್ದ ಮಾನ್ಯತೆಯನ್ನು ಒಂದು ವರ್ಷದ ಹಿಂದೆಯೇ ರದ್ದುಗೊಳಿಸಲಾಗಿತ್ತು. ಅದಕ್ಕೆ ಹಣವನ್ನು ಸಹ ನೀಡಲಾಗುತ್ತಿರಲಿಲ್ಲ. ಇದುವರೆಗೂ ಅದು ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೀಟಾ ಬಹುಗುಣ ಜೋಶಿ ತಿಳಿಸಿದ್ದಾರೆ.

10 ವರ್ಷದ ಬಾಲಕಿಯೊಬ್ಬಳು ಅದರಿಂದ ತಪ್ಪಿಸಿಕೊಂಡು ಸಮೀಪದ ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬಹಿರಂಗಗೊಂಡಿದೆ.

'ಅನೇಕ ಬಾರಿ ಬಿಳಿ, ಕಪ್ಪು ಮತ್ತು ಕೆಂಪು ಬಣ್ಣದ ಕಾರುಗಳು ಬಂದು ಹೆಣ್ಣುಮಕ್ಕಳನ್ನು ಕರೆದೊಯ್ಯುತ್ತಿದ್ದವು. ಬೆಳಿಗ್ಗೆ ಅವರು ಮರಳಿದಾಗ ಅಳುತ್ತಿದ್ದರು. ಅಲ್ಲದೆ, ಪ್ರತಿದಿನ ಸಂಜೆ 4 ಗಂಟೆಗೆ ಕೆಲವು ಮಂದಿ ಬಂದು ಕೆಲವು ಬಾಲಕಿಯರನ್ನು ಕರೆದೊಯ್ಯುತ್ತಿದ್ದರು. ಅವರ ಜತೆ ಮ್ಯಾನೇಜರ್ ಕೂಡ ಹೋಗುತ್ತಿದ್ದರು' ಎಂದು ಬಾಲಕಿ ತಿಳಿಸಿದ್ದಾರೆ.

ಅದನ್ನು ನಡೆಸುತ್ತಿದ್ದ ಗಿರಿಜಾ ತ್ರಿಪಾಠಿ ಮತ್ತು ಆಕೆಯ ಪತಿ ಮೋಹನ್ ತ್ರಿಪಾಠಿಯನ್ನು ಬಂಧಿಸಲಾಗಿದೆ.

English summary
Union minister Maneka Gandhi said that she proposed that MPs go to institutions in their constituencies and give the reports, after one more incident in Uttar Pradesh reported like Bihar's Muzaffarpur girls shelter case on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X