ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿವರ್ ರಾಫ್ಟಿಂಗ್ ವೇಳೆ ನೀರಿಗೆ ಬಿದ್ದ ಹುಡುಗಿಯರು: ಸೇನೆಯಿಂದ ರಕ್ಷಣೆ

|
Google Oneindia Kannada News

ಋಷಿಕೇಶ, ಏಪ್ರಿಲ್ 30: ರಿವರ್ ರಾಫ್ಟಿಂಗ್ ವೇಳೆ ನೀರಿಗೆ ಬಿದ್ದ ಹುಡುಗಿಯರನ್ನು ಭಾರತೀಯ ಸೇನೆಯ ಸೈನಿಕರು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಋಷಿಕೇಶದಲ್ಲಿ ನಡೆದಿದೆ.

ಬಯಲು ಸೀಮೆಯಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚಿನ ಜನರು ಬಿಸಿಲನ್ನು ಹೋಗಲಾಡಿಸಲು ಮತ್ತು ರಜೆಯನ್ನು ಆನಂದಿಸಲು ನೀರಿರುವ ಕಡೆ ತೆರಳುತ್ತಿರುವುದು ಕಂಡುಬರುತ್ತಿದೆ. ಈ ದಿನಗಳಲ್ಲಿ ರಿವರ್ ರಾಫ್ಟಿಂಗ್‌ನಿಂದಾಗಿ ರಿಷಿಕೇಶವು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಈ ಸಮಯದಲ್ಲಿ ರಿಷಿಕೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ದೋಣಿಯಲ್ಲಿ ಲೈಫ್ ಜಾಕೆಟ್‌ಗಳನ್ನು ಧರಿಸಿ ನದಿಯ ಬಲವಾದ ಪ್ರವಾಹದಲ್ಲಿ ಸವಾರಿ ಮಾಡುವುದನ್ನು ಕಾಣಬಹುದು. ಬೇಸಿಗೆ ಬಿಸಿ ತಣಿಸಲು ಹಾಗೂ ಮೋಜು ಮಸ್ತಿಗಾಗಿ ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್ ಮಾಡುತ್ತಿದ್ದ ಇಬ್ಬರು ಹುಡುಗಿಯರು ನದಿಗೆ ಬಿದ್ದಿದ್ದಾರೆ. ಸಮಯ ಪ್ರಜ್ಞೆ ತೋರಿದ ಆರ್ಮಿ ಸೈನಿಕರು ರಾಫ್ಟಿಂಗ್ ಸಮಯದಲ್ಲಿ ಇಬ್ಬರು ಹುಡುಗಿಯರ ಪ್ರಾಣವನ್ನು ಉಳಿಸಿದ್ದಾರೆ.

Girls fall into the water while river rafting: protection from the army

ರಿವರ್ ರಾಫ್ಟಿಂಗ್ ಮಾಡುತ್ತಿದ್ದ ಇಬ್ಬರು ಬಾಲಕಿಯರು ತೆಪ್ಪದಿಂದ ನದಿಗೆ ಬಿದ್ದಿರುವ ಘಟನೆಯೊಂದು ರಿಷಿಕೇಶದಿಂದ ಬೆಳಕಿಗೆ ಬಂದಿದೆ. ಇಬ್ಬರೂ ತೆಪ್ಪದಲ್ಲು ಕುಳಿತು ಧಾರಾಕಾರವಾಗಿ ಹರಿಯುತ್ತಿದ್ದ ನೀರಿನಲ್ಲಿ ರಾಫ್ಟಿಂಗ್ ಮಾಡಲು ಶುರುಮಾಡಿದರು. ಈ ವೇಳೆ ತೆಪ್ಪ ಮುಗುಚಿ ಇಬ್ಬರು ನೀರಿಗೆ ಬಿದ್ದಿದ್ದಾರೆ. ನದಿಯ ರಬಸಕ್ಕೆ ಇಬ್ಬರು ಕೈಕಾಲು ಬಡಿದರೂ ದಡ ಸೇರಲಾಗಿಲ್ಲ. ಅಷ್ಟರಲ್ಲಿ ದೇವತೆಗಳಾಗಿ ಬಂದ ಭಾರತೀಯ ಸೈನಿಕರು ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದ್ದಾರೆ. ಈ ಸಂಪೂರ್ಣ ರಕ್ಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ ನಂತರ ಜನ ಶಾಕ್ ಆಗಿದ್ದಾರೆ. ಈ ವಿಡಿಯೊವನ್ನು ಏಪ್ರಿಲ್ 29 ರ ಶುಕ್ರವಾರದಂದು ಸೆರೆ ಹಿಡಿಯಲಾಗಿದೆ. ಈ ಪಾರುಗಾಣಿಕಾ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಇದನ್ನು ಸುದ್ದಿ ಸಂಸ್ಥೆ ANI ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

Girls fall into the water while river rafting: protection from the army

ಜೋರಾದ ಪ್ರವಾಹದಲ್ಲಿ ಹರಿಯುತ್ತಿರುವ ಹೆಣ್ಣು ಮಕ್ಕಳನ್ನು ರಕ್ಷಿಸಲು ಭಾರತೀಯ ಸೇನಾಧಿಕಾರಿಗಳಿಬ್ಬರೂ ಚಾಣಾಕ್ಷತನ ತೋರದಿದ್ದರೆ ಇಬ್ಬರು ಬಾಲಕಿಯರು ಬದುಕುವುದು ಕಷ್ಟವಾಗುತ್ತಿತ್ತು ಎಂಬುದು ವಿಡಿಯೋ ನೋಡಿದಾಗಲೇ ಸ್ಪಷ್ಟವಾಗಿದೆ.

English summary
Indian Army official said that a member of the Army’s rafting team saved two girls from drowning in the river at Phool Chatti in Rishikesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X