• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಎನ್ ಯು ಕನ್ಹಯ್ಯ ಬಂಧನ ವಿರೋಧಿಸಿದ ಗಿರೀಶ್ ಕಾರ್ನಾಡ್

By Vanitha
|
Google Oneindia Kannada News

ಬೆಂಗಳೂರು,ಫೆಬ್ರವರಿ,20: ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಕರಣದ ಬಿಸಿ ಬೆಂಗಳೂರು ಮಂದಿಯವರೆಗೂ ಹಬ್ಬಿದೆ. ಜೆಎನ್ ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕುಮಾರ್ ಕನ್ಹಯ್ಯ ಅವರ ಬಂಧನ ವಿರೋಧಿಸಿ ಗಣ್ಯರು, ವಿದ್ಯಾರ್ಥಿಗಳು ಕೂಗುತ್ತಿರುವ ಘೋಷಣೆಗಳು ನಾಡಿನಾದ್ಯಂತ ಮಾರ್ದನಿಸುತ್ತಿವೆ.

ಈಗಾಗಲೇ ನವದೆಹಲಿಯಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿಸಿದ ಜೆಎನ್ ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕುಮಾರ್ ಕನ್ಹಯ್ಯ ಅವರನ್ನು ಬಿಡುಗಡೆಗೊಳಿಸುವಂತೆ ಬೆಂಗಳೂರಿನಲ್ಲಿಯೂ ಶುಕ್ರವಾರ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡ್ ಭಾಗವಹಿಸಿ ಬೆಂಬಲ ಸೂಚಿಸಿದರು.

ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಮೂವರು ವಿದ್ಯಾರ್ಥಿಗಳಿಗೆ ದೆಹಲಿ ಪೊಲೀಸರು ಶನಿವಾರ ಲುಕ್ ಔಟ್ ನೋಟಿಸ್ ನೀಡಿದ್ದು, ಎಲ್ಲಾ ತಪಾಸಣಾ ಕೇಂದ್ರಗಳಿಗೆ ಮಾಹಿತಿ ರವಾನೆ ಮಾಡಿದ ಪೊಲೀಸರು ತಲೆಮರೆಸಿಕೊಂಡಿರುವ ಮೂವರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.[ಬೇಲ್ ಕೇಳಿದ ಕನ್ಹಯ್ಯಾನನ್ನು ವಾಪಸ್ ಕಳಿಸಿದ ಸುಪ್ರೀಂಕೋರ್ಟ್]

ಒಟ್ಟಿನಲ್ಲಿ ಇತ್ತೀಚೆಗೆ ಭಾರತ ಹಲವು ಪ್ರತಿಭಟನೆಗಳ ವೇದಿಕೆಯಾಗುತ್ತಿದೆ. ಪ್ರತಿಭಟನೆಯ ಪೂರ್ವಪರ ಉದ್ದೇಶಗಳನ್ನು ಕಂಡುಕೊಂಡು ನೈತಿಕ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದು ತೋರುತ್ತದೆ. ಈ ಸುದ್ದಿಯ ಜೊತೆಗೆ ಇನ್ನಷ್ಟು ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ. [ಚಿತ್ರಗಳು: ಪಿಟಿಐ]

ಜೆಎನ್ ಯು ಪ್ರಕರಣಕ್ಕೆ ಗಿರೀಶ್ ಕಾರ್ನಾಡ್ ಬೆಂಬಲ

ಜೆಎನ್ ಯು ಪ್ರಕರಣಕ್ಕೆ ಗಿರೀಶ್ ಕಾರ್ನಾಡ್ ಬೆಂಬಲ

ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡ್ ಹಾಗೂ ಗೌರಿ ಲಂಕೇಶ್ ಅವರು ಡೆಮೊಕ್ರೆಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ ಸದಸ್ಯರೊಂದಿಗೆ ಸೇರಿ ಜೆಎನ್ ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕುಮಾರ್ ಕನ್ಹಯ್ಯ ಅವರ ಭಾವಚಿತ್ರ ಹಿಡಿದು ಕನ್ಹಯ್ಯ ಕುಮಾರ್ ಅವರ ಬಂಧನನ್ನು ವಿರೋಧಿಸಿದರು.[ಜೆಎನ್ ಯು ಹಗರಣದ ರೂವಾರಿ ಉಮರ್ ಖಾಲೀದ್ ಎಲ್ಲಿ?]

ಶಿಕ್ಷಣ ಸಂಶೋಧನಾ ವಿದ್ಯಾರ್ಥಿಗಳ ಪ್ರತಿಭಟನೆ

ಶಿಕ್ಷಣ ಸಂಶೋಧನಾ ವಿದ್ಯಾರ್ಥಿಗಳ ಪ್ರತಿಭಟನೆ

ಜೆಎನ್ ಯು ವಿಶ್ವವಿದ್ಯಾಲಯ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳ ಮೇಲೆ ನಡೆದ ಆಕ್ರಮಣವನ್ನು ವಿರೋಧಿಸಿದ ಶಿಕ್ಷಣ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ಲೆಕಾರ್ಡ್ ಹಿಡಿದು ನೀವು ಮಾಡಿರುವ ದೌರ್ಜನ್ಯ ಸರಿಯಲ್ಲ ಎಂದು ತಮ್ಮ ಅಭಿಪ್ರಾಯವನ್ನು ಪ್ರತಿಭಟನೆ ಮೂಲಕ ವ್ಯಕ್ತಪಡಿಸಿದರು.[JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ನ್ಯಾಯಾವಾದಿಗಳ ಹೋರಾಟ

ನ್ಯಾಯಾವಾದಿಗಳ ಹೋರಾಟ

ಫೆಬ್ರವರಿ 9ರಂದು ಜೆಎನ್ ಯು ಆವರಣದಲ್ಲಿ ದೇಶದ್ರೋಹ ಘೋಷಣೆ ಕೂಗಿದ ಪ್ರತಿಯೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು ಎಂಬುದು ಹಲವಾರು ನ್ಯಾಯವಾದಿಗಳ ಅಭಿಮತವಾಗಿದೆ. ಹಾಗಾಗಿ ಅವರನ್ನು ಬಂಧಿಸಿ ಎಂದು ಮುಗಿಲು ಮುಟ್ಟುವಂತೆ ನವದೆಹಲಿಯಲ್ಲಿ ಘೋಷಣೆ ಕೂಗಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿ ನಡೆಸಿದ ಜೆಎನ್ ಯು ವಿಶ್ವವಿದ್ಯಾಲಯ ಉಪಕುಲಪತಿ

ಪತ್ರಿಕಾಗೋಷ್ಠಿ ನಡೆಸಿದ ಜೆಎನ್ ಯು ವಿಶ್ವವಿದ್ಯಾಲಯ ಉಪಕುಲಪತಿ

ಜೆಎನ್ ಯು ವಿಶ್ವವಿದ್ಯಾಲಯದ ಉಪಕುಲಪತಿ ಶೆಹ್ಲಾ ರಶೀದ್ ಅವರು ಪ್ರಕರಣದ ಸಂಬಂಧ ನವದೆಹಲಿಯ ಜೆಎನ್ ಯು ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

'ಎನಿಥಿಂಗ್ ಬಟ್ ಖಮೋಶ್' ಶತ್ರುಘ್ನ ಸಿನ್ಹಾ ಅವರ ಆತ್ಮಚರಿತ್ರೆ

'ಎನಿಥಿಂಗ್ ಬಟ್ ಖಮೋಶ್' ಶತ್ರುಘ್ನ ಸಿನ್ಹಾ ಅವರ ಆತ್ಮಚರಿತ್ರೆ

ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರ 'ಎನಿಥಿಂಗ್ ಬಟ್ ಖಮೋಶ್' ಎಂಬ ಆತ್ಮಚರಿತ್ರೆ ಲೋಕಾರ್ಪಣೆ ಸಮಾರಂಭಕ್ಕೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಭಾಗವಹಿಸಿದ್ದರು. ಶತ್ರುಘ್ನ ಸಿನ್ಹಾ ಮತ್ತು ಅಮಿತಾಬ್ ಜೊತೆಯಲ್ಲಿ ಕಂಡದ್ದು ಹೀಗೆ

ಮೀಸಲಾತಿ ಕೊಡುವವರೆಗೂ ರೈಲ್ವೆ ಹಳಿ ಬಿಡಲ್ಲ

ಮೀಸಲಾತಿ ಕೊಡುವವರೆಗೂ ರೈಲ್ವೆ ಹಳಿ ಬಿಡಲ್ಲ

ಹರಿಯಾಣದ ಸೋನಿಪಟ್ ನಲ್ಲಿ ಜಾತ್ ಸಮುದಾಯದ ಸದಸ್ಯರು ರೈಲ್ವೆ ಹಳಿಯನ್ನು ಮೇಲೆ ಕುಳಿತಯ ರೈಲಿನ ಸಂಚಾರಕ್ಕೆ ಅಡ್ಡಿ ಪಡಿಸಿದರು. ಜಾತ್ ಸಮುದಾಯದವರು ಸುಮಾರು ದಿನಗಳ ಬೇಡಿಕೆಯಾದ ಮೀಸಲಾತಿ ಪ್ರಕ್ರಿಯೆಯನ್ನು ಈಡೇರಿಸದ ಕಾರಣ ರೈಲ್ವೆ ಹಳಿಯ ತಡೆಗೆ ಮುಂದಾದರು.

English summary
Playwright Girish Karnad protesting against the arrest of JNU students leader Kanhaiya Kumar in Bengaluru. Bollywood actors Shatrughan Sinha and Amitabh Bachhan during the book launch of "Anything but Khamosh, the biography of Shatrughan Shinha" in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X