ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗೆ ಬಂದ 2,700ಕ್ಕೂ ಹೆಚ್ಚು ಉಡುಗೊರೆ ಸೆ. 14ರಿಂದ ಹರಾಜು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ಬಂದಿರುವ 2,700ಕ್ಕೂ ಹೆಚ್ಚು ವಸ್ತುಗಳನ್ನು ಸೆಪ್ಟೆಂಬರ್ 14ನೇ ತಾರೀಕಿನಿಂದ ಆನ್ ಲೈನ್ ಮೂಲಕ ಹರಾಜು ಹಾಕಲಾಗುತ್ತದೆ ಎಂದು ಸಂಸ್ಕೃತಿ ಖಾತೆ ಸಚಿವ್ ಪ್ರಹ್ಲಾದ್ ಪಟೇಲ್ ಅವರು ತಿಳಿಸಿದ್ದಾರೆ.

ಭಾರತ ಭೇಟಿ ವೇಳೆ ಇಸ್ರೇಲ್ ಪ್ರಧಾನಿಯಿಂದ ಮೋದಿಗೆ ವಿಶೇಷ ಉಡುಗೊರೆಭಾರತ ಭೇಟಿ ವೇಳೆ ಇಸ್ರೇಲ್ ಪ್ರಧಾನಿಯಿಂದ ಮೋದಿಗೆ ವಿಶೇಷ ಉಡುಗೊರೆ

ಒಟ್ಟು 2,772 ಉಡುಗೊರೆಗಳನ್ನು ಆನ್ ಲೈನ್ ಮೂಲಕ ಹರಾಜು ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ. ಅತ್ಯಂತ ಕನಿಷ್ಠ ಮೊತ್ತದ ಆರಂಭಿಕ ಬಿಡ್ ಅಂದರೆ 200 ರುಪಾಯಿ ಹಾಗೂ ಅತ್ಯಂತ ಗರಿಷ್ಠ ಮೊತ್ತದ ಆರಂಬಿಕ ಬಿಡ್ ಅಂದರೆ 2.5 ಲಕ್ಷ ರುಪಾಯಿ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Gifts Received By PM Modi Will Be Auctioned From September 14th

ಈ ವರ್ಷದ ಜನವರಿಯಲ್ಲಿ ಕೂಡ 1,800ಕ್ಕೂ ಹೆಚ್ಚು ಉಡುಗೊರೆಗಳನ್ನು ಹದಿನೈದು ದಿನಗಳ ಕಾಲ ಹರಾಜು ಹಾಕಲಾಗಿತ್ತು. ಆ ಮೂಲಕ ಸಂಗ್ರಹವಾದ ಹಣವನ್ನು ಕೇಂದ್ರ ಸರಕಾರವು ಹಮ್ಮಿಕೊಂಡಿರುವ ಗಂಗಾ ನದಿ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮ 'ನಮಾಮಿ ಗಂಗೆ'ಗಾಗಿ ಬಳಸಿಕೊಳ್ಳಲಾಗಿತ್ತು.

English summary
More than 2,700 gifts received by PM Narendra Modi will be auctioned from September 14th through online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X