ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿದ ಆರ್ಥಿಕತೆ: ಮೋದಿ ಸರ್ಕಾರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಟೀಕೆ

|
Google Oneindia Kannada News

ನವದೆಹಲಿ, ಆಗಸ್ಟ್ 31: ವಿರೋಧ ಪಕ್ಷದವರನ್ನು ಮಾತ್ರವಲ್ಲದೆ, ತಮ್ಮದೇ ಪಕ್ಷದವರನ್ನು ಟೀಕಿಸುವುದರಲ್ಲಿ ಕೂಡ ಹಿಂದೇಟು ಹಾಕದ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಆರ್ಥಿಕ ಕುಸಿತದ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಈಗಿನ ಪರಿಸ್ಥಿತಿಯಲ್ಲಿ ಆರ್ಥಿಕ ಪ್ರಗತಿಯ ಕುಸಿತವನ್ನು ತಡೆಯುವುದು ಕಷ್ಟ ಎಂದು ಟೀಕಿಸಿದ್ದಾರೆ.

10 ಬ್ಯಾಂಕುಗಳು ವಿಲೀನವಾಗಿ 4 ಬ್ಯಾಂಕ್, ಉದ್ಯೋಗ ಕಡಿತ ಭೀತಿ ಬೇಡ10 ಬ್ಯಾಂಕುಗಳು ವಿಲೀನವಾಗಿ 4 ಬ್ಯಾಂಕ್, ಉದ್ಯೋಗ ಕಡಿತ ಭೀತಿ ಬೇಡ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥಿಕತೆಯನ್ನು 2025ರ ವೇಳೆಗೆ 5 ಟ್ರಿಲಿಯನ್ ಡಾಲರ್‌ಗೆ ಏರಿಸುವ ಸಂಬಂಧ ಆಶಯ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕವಾದ ನೀತಿಗಳನ್ನು, ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುವ ಭರವಸೆ ನೀಡಿದ್ದರು.

Get Ready To Say Good Bye To 5 Trillion Subramanian Swamy

ಆದರೆ, ಈಗಿನ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವ ಕನಸನ್ನು ಬಿಟ್ಟುಬಿಡುವುದು ಒಳಿತು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಆರ್ಥಿಕ ಕುಸಿತವನ್ನು ತಡೆಯಲು ದಿಟ್ಟತನ ಅಥವಾ ಜ್ಞಾನದಿಂದ ಮಾತ್ರ ಸಾಧ್ಯವಿಲ್ಲ ಎಂದಿದ್ದಾರೆ.

ಬ್ಯಾಂಕ್ ಗಳ ಒಟ್ಟಾರೆ NPA (ಅನುತ್ಪಾದಕ ಆಸ್ತಿ) 7.90 ಲಕ್ಷ ಕೋಟಿಗೆ ಇಳಿಕೆಬ್ಯಾಂಕ್ ಗಳ ಒಟ್ಟಾರೆ NPA (ಅನುತ್ಪಾದಕ ಆಸ್ತಿ) 7.90 ಲಕ್ಷ ಕೋಟಿಗೆ ಇಳಿಕೆ

'ಯಾವುದೇ ಹೊಸ ಆರ್ಥಿಕ ನೀತಿ ಬಾರದೇ ಇದ್ದರೆ ಐದು ಟ್ರಿಲಿಯನ್ ಡಾಲರ್‌ಗೆ ಗುಡ್ ಬೈ ಹೇಳಲು ಸಿದ್ಧರಾಗಿ. ಕೇವಲ ದಿಟ್ಟತನ ಅಥವಾ ಜ್ಞಾನವೊಂದೇ ಆರ್ಥಿಕತೆಯನ್ನು ಕುಸಿತದಿಂದ ರಕ್ಷಿಸಲು ಸಾಧ್ಯವಾಗದು. ಅದಕ್ಕೆ ಎರಡೂ ಬೇಕು. ಇಂದು ನಮ್ಮ ಬಳಿ ಯಾವುದೂ ಇಲ್ಲ' ಎನ್ನುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯದ ಬಾಣ ಬಿಟ್ಟಿದ್ದಾರೆ.

English summary
BJP MP Subramanian Swamy on Saturday criticised Modi government's economic policy and said, get ready to say good bye to Rs 5 trillion is no new economic policy is forthcoming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X