• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fastag; ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರೇ ಎಚ್ಚರ

|

ನವದೆಹಲಿ, ಮೇ 17 : ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲ ಎಂಬ ಕಾರಣಕ್ಕೆ ಹಲವು ಗಲಾಟೆಗಳು ನಡೆದಿವೆ. ಕೇಂದ್ರ ಭೂ ಸಾರಿಗೆ ಇಲಾಖೆ ವಾಹನ ಸವಾರರಿಗೆ ಈಗ ಮತ್ತೊಂದು ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಡೆಸುವಾಗ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಇರಲೇಬೇಕು. ಫಾಸ್ಟ್‌ಟ್ಯಾಗ್ ಇಲ್ಲ, ಅದು ಕೆಲಸ ಮಾಡುತ್ತಿಲ್ಲ ಎಂದರೆ ನೀವು ಎರಡು ಪಟ್ಟು ಹೆಚ್ಚಿನ ದಂಡವನ್ನು ಪಾವತಿ ಮಾಡಬೇಕು ಎಂದು ಇಲಾಖೆ ಹೇಳಿದೆ.

ಫಾಸ್ಟ್‌ಟ್ಯಾಗ್ ಇಲ್ಲವೆಂದು ಕಾರಿನ ಗಾಜು ಒಡೆದ ಟೋಲ್ ಸಿಬ್ಬಂದಿ

ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಇರುವ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಲೈನ್ ನಿರ್ಮಾಣ ಮಾಡಲಾಗಿದೆ. ಒಂದು ವೇಳೆ ನಿಮ್ಮ ವಾಹನದಲ್ಲಿ ಫಾಸ್ಟ್‌ಟ್ಯಾಗ್ ಇಲ್ಲದೇ ಹೋದರೆ ಅಥವ ಅದು ಕೆಲಸ ಮಾಡದಿದ್ದರೆ ನೀವು ಫಾಸ್ಟ್‌ಟ್ಯಾಗ್‌ಗೆ ಮೀಸಲಾಗಿರುವ ಲೈನ್‌ನಲ್ಲಿ ಹೋಗಬೇಡಿ.

ಬೆಂಗಳೂರು ಏರ್ ಪೋರ್ಟ್‌ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ

ಫಾಸ್ಟ್‌ಟ್ಯಾಗ್ ಇಲ್ಲದೇ ಅಥವ ಅದು ಕೆಲಸ ಮಾಡದೇ ನೀವು ಫಾಸ್ಟ್‌ಟ್ಯಾಗ್ ಲೈನ್‌ಗೆ ಹೋದರೆ ನಿಮ್ಮ ವಾಹನದ ಟೋಲ್‌ ಶುಲ್ಕದ ದುಪ್ಪಟ್ಟು ದಂಡವನ್ನು ಪಾವತಿ ಮಾಡಬೇಕು. ಕೇಂದ್ರ ಭೂ ಸಾರಿಗೆ ಇಲಾಖೆ ಈ ಕುರಿತು ಹೇಳಿಕೆ ನೀಡಿದೆ.

ಫಾಸ್ಟ್ಯಾಗ್ ; ಒಂದೇ ದಿನದಲ್ಲಿ 86.2 ಕೋಟಿ ಟೋಲ್ ಸಂಗ್ರಹ

ಟೋಲ್‌ ಬೂತ್‌ಗಳಲ್ಲಿನ ಉದ್ದದ ಕ್ಯೂ ಕಡಿಮೆ ಮಾಡಲು ಫಾಸ್ಟ್‌ಟ್ಯಾಗ್ ಪರಿಚಯಿಸಲಾಗಿದೆ. ಆದರೆ, ಫಾಸ್ಟ್‌ಟ್ಯಾಗ್ ಇಲ್ಲದಿರುವ ವಾಹನ ಆ ಮಾರ್ಗದಲ್ಲಿ ಬಂದರೆ ಇತರ ವಾಹನಗಳಿಗೆ ಅಡಚಣೆಯಾಗಲಿದೆ. ಆದ್ದರಿಂದ, ವಾಹನ ಸವಾರರಿಗೆ ದಂಡವನ್ನು ಹಾಕಲಾಗುತ್ತದೆ.

ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರ ಜೊತೆ ಟೋಲ್ ಬೂತ್ ಸಿಬ್ಬಂದಿಗಳು ಜಗಳವಾಡಿದ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಈಗ ಕೇಂದ್ರದ ಹೊಸ ದಂಡ ಪ್ರಯೋಕ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗುವ ನಿರೀಕ್ಷೆ ಇದೆ.

English summary
If a vehicle which is not fitted with FASTag or a vehicle without a valid or functional FASTag enters into FASTag lane of fee plazas then they shall pay a fee equivalent to two times said ministry of road transport and highways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X