ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 4ರೊಳಗೆ ಮಲ್ಯರನ್ನು ಭಾರತಕ್ಕೆ ಕರೆ ತನ್ನಿ : ಕೋರ್ಟ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 06: ಸಾಲಗಾರ ಉದ್ಯಮಿ ವಿಜಯ್ ಮಲ್ಯ ಅವರು ಎಲ್ಲೇ ಇರಲಿ ನವೆಂಬರ್ 04ರಂದು ವಿಚಾರಣೆಗೆ ಕರೆ ತನ್ನಿ ಎಂದು ವಿದೇಶಾಂಗ ಸಚಿವಾಲಯಕ್ಕೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶನಿವಾರ ಆದೇಶ ನೀಡಿದೆ.

ಸರ್ಕಾರಿ ಸ್ವಾಮ್ಯದ ಎಸ್ ಬಿಐ ಸೇರಿದಂತೆ ವಿವಿಧ ಬ್ಯಾಂಕುಗಳಿಂದ 9,000 ಕೋಟಿ ರು ಗೂ ಅಧಿಕ ಸಾಲ ಪಡೆದುಕೊಂಡು ತೀರಿಸಲಾಗದೆ ಮಲ್ಯ ಅವರು ಬ್ರಿಟನ್ನಿನಲ್ಲಿ ಬೀಡು ಬಿಟ್ಟಿದ್ದಾರೆ. ಈಗಾಗಲೇ ರೆಡ್ ಕಾರ್ನರ್ ನೋಟಿಸ್, ಜಾಮೀನು ರಹಿತ ವಾರೆಂಟ್ ಗಳು ಜಾರಿಯಾಗಿವೆ. [ಮಲ್ಯ, ಲೇಟೆಸ್ಟ್ ಆಗಿ ರಾಜೀನಾಮೆ ನೀಡಿದ ಕಂಪನಿ ಯಾವುದು?]

Get Mallya to court on Nov. 4, Court tells MEA

ಈ ನಡುವೆ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪಟಿಯಾಲ ಹೌಸ್ ಕೋರ್ಟ್, ವಿದೇಶಾಂಗ ಸಚಿವಾಲಯಕ್ಕೆ ಮೇಲ್ಕಂಡಂತೆ ನಿರ್ದೇಶನ ನೀಡಿದೆ. ಲಂಡನ್ನಿನಲ್ಲಿರುವ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದ್ದು, ವಿಚಾರಣೆಗಾಗಿ ನವೆಂಬರ್ 04ರಂದು ಕೋರ್ಟಿಗೆ ಹಾಜರಾಗಬೇಕಿದೆ. [ಮಲ್ಯ ವಿರುದ್ಧ ಮತ್ತೆ ಸುಪ್ರೀಂ ಮೊರೆಹೋದ ಬ್ಯಾಂಕ್‌ಗಳು]

ಕೋರ್ಟಿನಿಂದ ಅನೇಕ ವಾರೆಂಟ್ ಗಳು ಜಾರಿಯಾದರೂ ಮಲ್ಯ ಅವರು ಯಾವುದಕ್ಕೂ ಉತ್ತರಿಸಿಲ್ಲ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಸಂಸ್ಥೆ ವತಿಯಿಂದ ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ ಮಲ್ಯ ವಿರುದ್ಧ 7.5 ಕೋಟಿ ರು ಮೌಲ್ಯದ ಚೆಕ್ ಬೌನ್ಸ್ ಆರೋಪ ಹೊರೆಸಲಾಗಿದೆ. [ಮಲ್ಯರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ: ಯುಕೆ]

ಕೆಳಹಂತದ ನ್ಯಾಯಾಲಯದಲ್ಲಿ ಬಂದಿದ್ದ ಆದೇಶವನ್ನು ಪ್ರಶ್ನಿಸಿದ್ದ ಮಲ್ಯ ಪರ ವಕೀಲರು ದೆಹಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಅರ್ಜಿ ಪುರಸ್ಕರಿಸದ ನ್ಯಾಯಾಲಯ, ಮಲ್ಯ ಅವರು ಖುದ್ದು ವಿಚಾರಣೆಗೆ ಹಾಜರಾಗಬೇಕು, ಮಲ್ಯರನ್ನು ಭಾರತಕ್ಕೆ ಕರೆ ತರುವ ಜವಾಬ್ದಾರಿ ವಿದೇಶಾಂಗ ಸಚಿವಾಲಯ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ. (ಒನ್ಇಂಡಿಯಾ ಸುದ್ದಿ)

English summary
The Patiala House Court in Delhi hearing a cheque bounce case directed the Ministry of External Affairs to send the non-bailable warrant to Vijay Mally who is in London and ensure that he is present in court on November 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X