ರೈತರಿಗೆ ಶೇ 4ರ ಬಡ್ಡಿ ದರದಲ್ಲಿ ಕೃಷಿ ಸಾಲ

Posted By:
Subscribe to Oneindia Kannada

ಬೆಂಗಳೂರು, ಜುಲೈ 06 : ಈ ಆರ್ಥಿಕ ವರ್ಷದಲ್ಲಿ ರೈತರಿಗೆ 3 ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲ ಶೇ 4ರ ಬಡ್ಡಿದರದಲ್ಲಿ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.

ಒಂದು ವರ್ಷದ ಅವಧಿಗೆ 3 ಲಕ್ಷ ರೂ.ವರೆಗೆ ಕೃಷಿ ಸಾಲ ಪಡೆಯುವ ಎಲ್ಲಾ ರೈತರಿಗೆ ಈ ಯೋಜನೆ ಅನ್ವಯವಾಗುತ್ತದೆ. ಪಡೆದ ಸಾಲಕ್ಕೆ ರೈತರು ಶೇ 4ರಷ್ಟು ಬಡ್ಡಿ ಪಾವತಿ ಮಾಡಬೇಕು. ಕೇಂದ್ರ ಸರ್ಕಾರದಿಂದ ಶೇ 5 ರಷ್ಟು ಸಬ್ಸಿಡಿ ಸಿಗುತ್ತದೆ. [ರಸಗೊಬ್ಬರ ದರ ಗಣನೀಯ ಇಳಿಕೆ: ಕೇಂದ್ರಕ್ಕೆ ಧನ್ಯವಾದ]

farmer

ಒಂದು ವರ್ಷದ ಅವಧಿಯ ಸಾಲಕ್ಕೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಒಂದು ವೇಳೆ ರೈತರು ಒಂದು ವರ್ಷದಲ್ಲಿ ಸಾಲ ಮರುಪಾವತಿ ಮಾಡದಿದ್ದರೆ ಶೇ 7ರಷ್ಟು ಬಡ್ಡಿ ಪಾವತಿ ಮಾಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. [ಕೃಷಿ ಅಭಿವೃದ್ಧಿ ಪ್ರಚಾರಾಂದೋಲನದ ಬಗ್ಗೆ ತಿಳಿಯಿರಿ]

ಯಾವ ಬ್ಯಾಂಕುಗಳು : ಸರ್ಕಾರಿ, ಖಾಸಗಿ ವಲಯದ ಬ್ಯಾಂಕ್, ಸಹಕಾರಿ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಮತ್ತು ನಬಾರ್ಡ್‌ ಈ ಯೋಜನೆ ವ್ಯಾಪ್ತಿಗೆ ಬರುತ್ತದೆ. [ಕೇಂದ್ರದ ಯೋಜನೆ, ರೈತರಿಗೂ ಆನ್ ಲೈನ್ ಮಾರುಕಟ್ಟೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Farmers will get short-term crop loans of up to Rs 3 lakh at a subsidised interest rate of 4 per cent this financial year.
Please Wait while comments are loading...