• search

ಗೋವುಗಳ ರಕ್ಷಣೆ, ಜರ್ಮನ್ ಮಹಿಳೆಯ ಕಾರ್ಯಕ್ಕೆ ಸಲಾಂ!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಲಕ್ನೋ, ಸೆಪ್ಟೆಂಬರ್ 18 : ಜರ್ಮನ್ ಮೂಲದ ಮಹಿಳೆಯೊಬ್ಬರು 1,200ಕ್ಕೂ ಹೆಚ್ಚು ಹಸುಗಳನ್ನು ಮಥುರಾದಲ್ಲಿ ಸಾಕುತ್ತಿದ್ದಾರೆ. ಹಸುಗಳನ್ನು ಸಾಕಲು ಪ್ರತಿ ತಿಂಗಳು 22 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ಮಹಿಳೆಯ ಗೋ ಸೇವೆ ಇತರರಿಗೆ ಮಾದರಿ ಆಗುವಂತಿದೆ.

  ಕಟುಕರ ಪಾಲಾಗಲಿದ್ದ ಸಾವಿರ ಹಸುಗಳಿಗೆ 'ಅಭಯ' ನೀಡಿದ ರಾಮಚಂದ್ರಾಪುರ ಮಠ

  ಸುರ್ ಬಾಯಿ ಗೋಸೇವಾ ನಿಕೇತನ ಹೆಸರಿನಲ್ಲಿ ಗೋ ಶಾಲೆ ನಿರ್ಮಿಸಿ, ಸಾವಿರಾರು ಹಸುಗಳಿಗೆ ಆಶ್ರಯ ನೀಡಿದ್ದಾರೆ. ಫ್ರಿಡೆರಿಕ್ ಇರಿನಾ ಬ್ರೂನಿಂಗ್ (69). ಮಥುರಾದಲ್ಲಿ ಬ್ರೂನಿಂಗ್ ಅವರ ಆಶ್ರಮವಿದೆ. ಸ್ಥಳೀಯರು ಇವರನ್ನು ಪ್ರೀತಿಯಿಂದ ಸುದೇವಿ ಮಾತಾಜೀ ಎಂದು ಕರೆಯುತ್ತಾರೆ.

  'ಹಸು ಪ್ರಿಯ' ಫೆಡರರ್ ಬಗ್ಗೆ ಸೆಹ್ವಾಗ್ ಟ್ವೀಟ್

  ಗಾಯಗೊಂಡ, ಕಾಯಿಲೆಯಿಂದ ಬಳಲುತ್ತಿರುವ, ಹಾಲು ಕೊಡುವುದನ್ನು ನಿಲ್ಲಿಸಿದ ಹಸುಗಳಿಗೆ ಮಾತಾಜೀ ತಮ್ಮ ಗೋ ಶಾಲೆಯಲ್ಲಿ ಆಶ್ರಯ ನೀಡಿದ್ದಾರೆ. ಗೋ ಶಾಲೆಯಲ್ಲಿ 1200ಕ್ಕೂ ಹೆಚ್ಚು ಹಸುಗಳಿವೆ. 60 ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ವೇತನ, ಹಸುಗಳ ಆಹಾರ, ಔಷಧಿ ಹೀಗೆ ಒಟ್ಟು ತಿಂಗಳಿಗೆ 22 ಲಕ್ಷವನ್ನು ಮಾತಾಜೀ ಖರ್ಚು ಮಾಡುತ್ತಿದ್ದಾರೆ. (ಪಿಟಿಐ ಚಿತ್ರಗಳು)

  1978ರಲ್ಲಿ ಭಾರತಕ್ಕೆ ಬಂದರು

  1978ರಲ್ಲಿ ಭಾರತಕ್ಕೆ ಬಂದರು

  ಬರ್ಲಿನ್‌ನಿಂದ ಫ್ರಿಡೆರಿಕ್ ಇರಿನಾ ಬ್ರೂನಿಂಗ್ 1978ರಲ್ಲಿ ಭಾರತಕ್ಕೆ ಬಂದವರು. ಗುರುವಿಗಾಗಿ ಹುಡುಕಾಟ ನಡೆಸಿದರು. ರಾಧಾ ಕುಂಡದಲ್ಲಿ ನೆಲೆಸಿದ್ದ ಅವರಿಗೆ ಗೋವುಗಳನ್ನು ಸಾಕುವ ಯಾವ ಉದ್ದೇಶವೂ ಇರಲಿಲ್ಲ. ಸ್ಥಳೀಯರಿಂದ ಅವರು ಗೋವುಗಳ ಬಗ್ಗೆ ತಿಳಿದುಕೊಂಡರು.

  ಹಿಂದಿ ಭಾಷೆ ಕಲಿತರು

  ಹಿಂದಿ ಭಾಷೆ ಕಲಿತರು

  ಗೋವುಗಳ ಬಗ್ಗೆ ತಿಳಿದುಕೊಳ್ಳಲು ಫ್ರಿಡೆರಿಕ್ ಹಿಂದಿ ಕಲಿತರು. ನಂತರ ಜೀವನವೇ ಬದಲಾಯಿತು. ಗೋವುಗಳ ಬಗ್ಗೆ ಹಲವು ಪುಸ್ತಕಗಳನ್ನು ಓದಿದರು. ಈಗ 'ಗೋವುಗಳು ನನ್ನ ಮಕ್ಕಳಿದ್ದಂತೆ ಅವುಗಳನ್ನು ಬಿಟ್ಟು ಹೋಗುವುದಿಲ್ಲ' ಎನ್ನುತ್ತಾರೆ ಸುದೇವಿ ಮಾತಾಜೀ.

  ಗೋಶಾಲೆಯಲ್ಲಿವೆ 1200 ಹಸು

  ಗೋಶಾಲೆಯಲ್ಲಿವೆ 1200 ಹಸು

  3,300 ಚದರ ಅಡಿ ಪ್ರದೇಶದಲ್ಲಿ ಸುದೇವಿ ಮಾತಾಜೀ ಗೋಶಾಲೆ ನಿರ್ಮಿಸಿದ್ದಾರೆ. ಇಲ್ಲಿ 1200 ಹಸುಗಳಿಗೆ ಆಶ್ರಯ ನೀಡಲಾಗಿದೆ. ಗಾಯಗೊಂಡ, ಕಾಯಿಲೆಯಿಂದ ಬಳಲುವ ಹಸುಗಳನ್ನು ಜನರು ಇಲ್ಲಿಗೆ ತಂದು ಬಿಟ್ಟು ಹೋಗುತ್ತಾರೆ. ಕುರುಡಾಗಿರುವ, ತೀವ್ರವಾಗಿ ಗಾಯಗೊಂಡಿರುವ ಹಸುಗಳನ್ನು ಪ್ರತ್ಯೇಕವಾಗಿ ನೋಡಿಕೊಳ್ಳಲಾಗುತ್ತದೆ.

  60 ಜನರು ಕೆಲಸ ಮಾಡುತ್ತಿದ್ದಾರೆ

  60 ಜನರು ಕೆಲಸ ಮಾಡುತ್ತಿದ್ದಾರೆ

  ಸುರ್ ಬಾಯಿ ಗೋಸೇವಾ ನಿಕೇತನ ಹೆಸರಿನ ಗೋ ಶಾಲೆಯಲ್ಲಿ 60 ಜನರು ಕೆಲಸ ಮಾಡುತ್ತಿದ್ದಾರೆ. ವೇತನ, ಆಹಾರ, ಔಷಧ ಎಂದು ತಿಂಗಳಿಗೆ ಸುಮಾರು 22 ಲಕ್ಷ ಖರ್ಚಾಗುತ್ತಿದೆ. ಬರ್ಲಿನ್‌ನಲ್ಲಿ ಇರುವ ಕಟ್ಟಡಗಳ ಬಾಡಿಗೆ ಮೂಲಕವೇ ಇದರ ಖರ್ಚನ್ನು ನಿಭಾಯಿಸುತ್ತಾರೆ.

  ಭಾರತದ ರಾಷ್ಟ್ರೀಯತೆ ಇಲ್ಲ

  ಭಾರತದ ರಾಷ್ಟ್ರೀಯತೆ ಇಲ್ಲ

  ಫ್ರಿಡೆರಿಕ್ ಅವರ ತಂದೆ ಜರ್ಮನಿಯ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸಂಪಾದನೆಯ ಹಣವನ್ನು ಗೋ ಶಾಲೆಗೆ ಬಳಸಲಾಗುತ್ತಿದೆ. ಫ್ರಿಡೆರಿಕ್ ಅವರು ಭಾರತೀಯ ಪೌರತ್ವವನ್ನು ಹೊಂದಿಲ್ಲ. ಪ್ರತಿ ವರ್ಷ ಅವರು ವೀಸಾ ನವೀಕರಣ ಮಾಡಿಕೊಳ್ಳುತ್ತಾರೆ. ಗೋ ಸೇವೆಯಲ್ಲಿಯೇ ನೆಮ್ಮದಿ ಕೊಂಡುಕೊಂಡಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Cows mostly abandoned sick and injured have found a saviour in mathura. German based woman Friederike Irina Bruning (59) who looking as many as 1,200 cows. Friederike fondly called Sudevi Mataji, started cowshed known as Surbhai Gauseva Niketan.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more