ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಪ್ರಯೋಗಾಲಯಗಳಲ್ಲೂ ಇನ್ಮುಂದೆ ಜೀನೋಮ್ ಸೀಕ್ವೆನ್ಸಿಂಗ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಖಾಸಗಿ ಪ್ರಯೋಗಾಲಯಗಳಲ್ಲೂ ಇನ್ನುಮುಂದೆ ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ಅನುಮತಿ ನೀಡಲಾಗಿದೆ.

ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈ ಕುರಿತು ಹೇಳಿಕೆ ನೀಡಿರುವ ಐಎನ್‍ಎಸ್‍ಎಸಿಒಜಿಯು, ಖಾಸಗಿ ಪ್ರಯೋಗಾಲಯಗಳೊಂದಿಗೆ ಸಭೆ ನಡೆಸಲಾಗಿದ್ದು, ಈ ಪ್ರಯೋಗಾಲಯಗಳ ಅಭಿಪ್ರಾಯ ಹಾಗೂ ಆಸಕ್ತಿಯ ಆಧಾರದ ಮೇಲೆ ಕೆಲ ಮಾರ್ಗಸೂಚಿಗಳೊಂದಿಗೆ ಖಾಸಗಿ ಪ್ರಯೋಗಾಲಯಗಳಲ್ಲೂ 'ಜೀನೋಮ್ ಸೀಕ್ವೆನ್ಸಿಂಗ್' ನಡೆಸಲು ಅನುಮತಿ ನೀಡಲಾಗಿದೆ ಎಂದು ಹೇಳಿದೆ.

ಕೋವಿಡ್ ಲಸಿಕೆ ಅಭಿಯಾನ; ಸಿಬ್ಬಂದಿಗೆ ಭಾನುವಾರ ವಿರಾಮಕೋವಿಡ್ ಲಸಿಕೆ ಅಭಿಯಾನ; ಸಿಬ್ಬಂದಿಗೆ ಭಾನುವಾರ ವಿರಾಮ

ದೇಶದಲ್ಲಿ 'ಜೀನೋಮ್ ಸೀಕ್ವೆನ್ಸಿಂಗ್' ಪರೀಕ್ಷೆಗಳನ್ನು ಹೆಚ್ಚಳ ಮಾಡುವ ಅಗತ್ಯವಿದೆ. ಪ್ರತೀ ತಿಂಗಳು 80,000 ಪಾಸಿಟಿವ್ ಪ್ರಕರಣಗಳ ಜೀನೋಮಿಕ್ ಅನುಕ್ರಮವನ್ನು ನಡೆಸುವ ಗುರಿ ಹೊಂದಲಾಗಿದೆ. ಹೀಗಾಗಿ ಖಾಸಗಿ ಪ್ರಯೋಗಾಲಯಗಳನ್ನೂ ಪಾಲ್ಗೊಳ್ಳುವಂತೆ ಮಾಡುವುದು ಅಗತ್ಯವಾಗಿದೆ ಎಂದು ಐಎನ್‍ಎಸ್‍ಎಸಿಒಜಿ ತಿಳಿಸಿದೆ.

Genome Sequencing In India Gets A Private Sector Boost

ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿರುವ ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ಜೀನೋಮ್ ಸಮಿತಿಯ ಸದಸ್ಯ, ಕರ್ನಾಟಕ ಸರ್ಕಾರ, ಡಾ. ವಿಶಾಲ್ ರಾವ್ ಅವರು, ಎಲ್ಲಾ ವಿಜ್ಞಾನಿಗಳು, ತಜ್ಞರು ಇಂತಹ ಪ್ರಯೋಗಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿದೆ. ಈ ಬೆಳವಣಿಗೆಯು ರೂಪಾಂತರಿ ವೈರಸ್ ಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.

ರೂಪಾಂತರಿ ವೈರಸ್‌ಗಳ ಮೇಲೆ ಕಣ್ಣಿಡುವ ಸಲುವಾಗಿ ಕಳೆದ ಜನವರಿ ತಿಂಗಳಿನಲ್ಲಿ ಸಾರ್ಸ್‍ಕೋವ್-2 ಜೆನೊಮಿಕ್ಸ್‌ ಕಾನ್ಸೋರ್ಟಿಯಮ್' (ಐಎನ್‍ಎಸ್‍ಎಸಿಒಜಿ) ವೇದಿಕೆಯನ್ನು ರಚಿಸಲಾಗಿತ್ತು.

ದೇಶದಲ್ಲಿ ರೂಪಾಂತರಿ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಪತ್ತೆ ಹಚ್ಚುವ ಸಲುವಾಗಿ ಈ ವೇದಿಕೆಯು ಇದೀಗ ಖಾಸಗಿ ಪ್ರಯೋಗಾಲಯಗಳಿಗೂ 'ಜೀನೋಮ್ ಸೀಕ್ವೆನ್ಸಿಂಗ್' ಪರೀಕ್ಷೆ ನಡೆಸಲು ಅನುಮತಿ ನೀಡಿದೆ.

ಖಾಸಗಿ ವಲಯದ ಪ್ರಯೋಗಾಲಯಗಳ ಪರಿಣತಿ ಮತ್ತು ಅನುಭವದ ಆಧಾರದ ಮೇಲೆ, ಮಾರ್ಗಸೂಚಿಗಳೊಂದಿಗೆ ಕೋವಿಡ್ -19 ವೈರಸ್‌ನ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಉತ್ತಮವೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಐಎನ್‍ಎಸ್‍ಎಸಿಒಜಿ ಆರಂಭದಲ್ಲಿ 10 ಪ್ರಯೋಗಾಲಯಗಳನ್ನು ಒಳಗೊಂಡಿತ್ತು, ಇದು ಭಾರತದ ವಿವಿಧ ರಾಜ್ಯಗಳಿಂದ 60,000 ಪಾಸಿಟಿವ್ ಪ್ರಕರಣಗಳ ಜೀನೋಮಿಕ್ ಅನುಕ್ರಮವನ್ನು ನಡೆಸಿತ್ತು. ಬಳಿಕ ಇದರೊಂದಿಗೆ ಇನ್ನೂ 18 ಪ್ರಯೋಗಾಲಯಗಳನ್ನು ಸೇರ್ಪಡೆಗೊಳಿಸಲಾಯಿತು.

ಮಹಾಜನ್ ಇಮೇಜಿಂಗ್ ಪ್ರೈವೇಟ್ ಲಿಮಿಟೆಡ್‌, ನವದೆಹಲಿ; ಸ್ಟ್ರಾಂಡ್ಸ್ ಲೈಫ್ ಸೈನ್ಸಸ್, ಬೆಂಗಳೂರು; ಜೀನೋಟೈಪಿಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬೆಂಗಳೂರು; ಎನ್ಎಂಸಿ ಜೆನೆಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗುರ್ಗಾಂವ್; ಮ್ಯಾಪ್‌ಮಿಜೆನೊಮ್ ಇಂಡಿಯಾ ಲಿಮಿಟೆಡ್, ಹೈದರಾಬಾದ್ ಮತ್ತು ಪ್ರೇಮಾಸ್ ಲೈಫ್ ಸೈನ್ಸಸ್, ನವದೆಹಲಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಕೊರೊನಾ 3ನೇ ಅಲೆ ಭೀತಿ ನಡುವೆಯೇ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 31,382 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 318 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಶುಕ್ರವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಕ್ಕೆ ತಲುಪಿದ್ದು, 3,35,94,803 ಸಾವಿನ ಸಂಖ್ಯೆ 4,46,368ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,00,162ಕ್ಕೆ ತಲುಪಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 32,542 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,28,48,273ಕ್ಕೆ ತಲುಪಿದೆ.

ಇನ್ನು ಭಾರತದಲ್ಲಿ ಒಂದೇ 15,65,696 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, 55,99,32,709 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ

English summary
After much waiting, the government of India has finally decided to involve private laboratories in the process of genome sequencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X