• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ಬಗ್ಗುಬಡಿಯಲು ಸಜ್ಜಾಗುತ್ತಿದೆ ಭಾರತೀಯ ಸೇನೆ?

|

ನವದೆಹಲಿ, ಆ.8: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿರುವ ಸಂದರ್ಭದಲ್ಲೇ ಭಾರತೀಯ ಸೇನಾ ಮುಖ್ಯಸ್ಥರು ಮಹತ್ವದ ಆದೇಶ ಹೊರಡಿಸಿದ್ದಾರೆ. ಮಧ್ಯ ಮತ್ತು ಪೂರ್ವ ವಲಯದ ಕಮಾಂಡರ್‌ಗಳು ಯಾವುದೇ ಸನ್ನಿವೇಶ ಎದುರಿಸಲು ಸಿದ್ಧವಾಗಿರುವಂತೆ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಬಂದಿದೆ.

   Mysore Zooನಲ್ಲಿ ತಾನೇ ಸಾಕಿದ್ದ ಆನೆಯಿಂದ ವ್ಯಕ್ತಿ ಸಾವು | Oneindia Kannada

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಲಕ್ನೋದಲ್ಲಿರುವ ಭಾರತೀಯ ಭೂಸೇನಾ ಕೇಂದ್ರ ಕಮಾಂಡ್ ಕಚೇರಿಗೆ ಭೇಟಿ ನೀಡಿದ್ದ ಜನರಲ್ ನರವಾಣೆ ಅವರಿಗೆ ಕಮಾಂಡರ್‌ಗಳು ಮಹತ್ವದ ಮಾಹಿತಿ ನೀಡಿದ್ದಾರೆ. 'ಎಲ್‌ಎಸಿ' ಉದ್ದಕ್ಕೂ ಚೀನಾ ಸೈನಿಕರ ಸಂಖ್ಯೆ ಹೆಚ್ಚಿಸಿರುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ಭಾರತ-ಚೀನಾ ಗಡಿ ಕೂಡುವ ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶದ ಗಡಿ ಭಾಗದಲ್ಲೂ ಹೆಚ್ಚಿನ ಸೈನಿಕರನ್ನು ಚೀನಾ ನೇಮಿಸಿದೆ.

   ಲಡಾಖ್ ಗಡಿಯಿಂದ ಸೇನೆ ಹಿಂತೆಗೆಯುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದ ಭಾರತ

   ಈ ಮಾಹಿತಿ ಸಿಗುತ್ತಿದ್ದಂತೆ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಕಮಾಂಡರ್‌ಗಳಿಗೆ ಸರ್ವಸನ್ನದ್ಧವಾಗಿ ಇರುವಂತೆ ಮಹತ್ವದ ಸೂಚನೆ ನೀಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಚೀನಾ ಇಲ್ಲೂ ತನ್ನ ಕಪಟ ಬುದ್ಧಿ ತೋರಿಸುವ ಸಾಧ್ಯತೆ ಇದ್ದು, ಚೂರು ಎಚ್ಚರ ತಪ್ಪಿದರೂ ಚೀನಾ ಸೇನೆ ಒಳನುಸುಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಭಾರತ ಕೂಡ ಹೆಚ್ಚಿನ ಸೈನಿಕರನ್ನು ಚೀನಾ ಗಡಿಯಲ್ಲಿ ನಿಯೋಜಿಸಿದೆ.

   ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

   ಮಾತುಕತೆಗೆ ಬಗ್ಗದ ಕಪಟಿ ’ಡ್ರ್ಯಾಗನ್‘

   ಮಾತುಕತೆಗೆ ಬಗ್ಗದ ಕಪಟಿ ’ಡ್ರ್ಯಾಗನ್‘

   ಸದ್ಯದ ಪರಿಸ್ಥಿತಿ ಗಮನಿಸಿದರೆ ಚೀನಾ ಸೇನೆ ಯುದ್ಧಕ್ಕೆ ಯೋಜನೆ ರೂಪಿಸಿ ಕಾಯುತ್ತಿರುವಂತೆ ಕಾಣುತ್ತಿದೆ. ಗಡಿಯಲ್ಲಿ 4-5 ಸಶಸ್ತ್ರ ಬ್ರಿಗೇಡ್‌ಗಳನ್ನೂ ನಿರ್ಮಿಸಿದೆ. ಪೂರ್ವ ಲಡಾಖ್‌ನ ‘ಎಲ್‌ಎಸಿ' ಬಳಿ ಭಾರಿ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜನೆ ಮಾಡಿದೆ. ಆದರೆ ಈ ಹಿಂದೆ ಎರಡೂ ಸೇನೆಗಳ ನಡುವೆ ನಡೆದಿದ್ದ ಉನ್ನತಮಟ್ಟದ ಮಾತುಕತೆ ನಂತರ ಚೀನಾ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತದೆ ಎಂದೇ ನಂಬಲಾಗಿತ್ತು. ಆದರೆ ತೊಟ್ಟಿಲು ತೂಗಿ, ಮಗುವನ್ನೂ ಚಿವುಟುವ ಕೆಲಸ ಮಾಡುತ್ತಿದೆ ಕುತಂತ್ರಿ ಡ್ರ್ಯಾಗನ್.

   ನಾವು ಯಾರಿಗೂ ಕಮ್ಮಿ ಇಲ್ಲ..!

   ನಾವು ಯಾರಿಗೂ ಕಮ್ಮಿ ಇಲ್ಲ..!

   ಗಡಿಯಲ್ಲಿ ಚೀನಾ ತನ್ನ ಸೇನಾಬಲ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಸೈನಿಕರ ಸಂಖ್ಯೆಯನ್ನು ಹೆಚ್ಚು ಮಾಡಿದ್ದು, ಸುಮಾರು 40 ಸಾವಿರ ಸೈನಿಕರನ್ನು ನಿಯೋಜಿಸಿದೆ. ಅಲ್ಲದೆ ದಿಢೀರ್ ದಾಳಿಗಳನ್ನ ಹಿಮ್ಮೆಟಿಸಲು ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ. ಈಗಾಗಲೇ ಹಲವು ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್, ಕ್ಷಿಪಣಿ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಚೀನಾ ಗಡಿಯಲ್ಲಿ ಬಿಡಾರ ಹೂಡಿವೆ. ಇದು ಭಾರತೀಯ ಸೇನಾ ಪಡೆಯ ಬಲಪ್ರದರ್ಶನವೂ ಆಗಿದೆ. ಈ ಬಾರಿ ಚೀನಾ ಭಾರತದ ತಂಟೆಗೆ ಬಂದ್ರೆ ಮುಟ್ಟಿ ನೋಡಿಕೊಳ್ಳುವ ಹಾಗೆ ಪೆಟ್ಟು ಕೊಡಲು ಸೇನೆ ಸನ್ನದ್ಧವಾಗಿದೆ.

   ಭಾರತ-ಚೀನಾ ಗಡಿಯಲ್ಲಿ ಸನ್ನದ್ಧರಾಗಿರಿ: ರಾಜನಾಥ್ ಸಿಂಗ್

   ಜಾಗತಿಕವಾಗಿ ಚೀನಾ ವಿರುದ್ಧ ಅಸಮಾಧಾನ..!

   ಜಾಗತಿಕವಾಗಿ ಚೀನಾ ವಿರುದ್ಧ ಅಸಮಾಧಾನ..!

   ಚೀನಾ ಗಡಿ ಬಗ್ಗೆ ಪಿರಿಪಿರಿ ಮಾಡುತ್ತಲೇ ಬಂದಿದೆ ಸದ್ಯದ ಪರಿಸ್ಥಿತಿಯಲ್ಲಿ ಚೀನಾ ಹೀಗೆ ಗಡಿ ಕಿರಿಕ್ ತೆಗೆದಿರುವುದು ಭಾರತದ ಜೊತೆ ಮಾತ್ರವಲ್ಲ. ಅಕ್ಕಪಕ್ಕದ ಪ್ರತಿ ರಾಷ್ಟ್ರದ ಜೊತೆಗೂ ಕಪಟಿ ಚೀನಾ ಗಡಿ ಬಗ್ಗೆ ಪಿರಿಪಿರಿ ಮಾಡುತ್ತಲೇ ಬಂದಿದೆ. ಈಗಾಗಲೇ ದಕ್ಷಿಣ ಚೀನಾ ಸಮುದ್ರ, ತೈವಾನ್ ಹಾಗೂ ಹಾಂಕಾಂಗ್ ವಿಚಾರದಲ್ಲಿ ಚೀನಾ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ.

   ವೈರಸ್ ಫ್ಯಾಕ್ಟರಿ ಚೀನಾದ ವಿನಾಶಕ್ಕೆ ಮುನ್ನುಡಿ

   ವೈರಸ್ ಫ್ಯಾಕ್ಟರಿ ಚೀನಾದ ವಿನಾಶಕ್ಕೆ ಮುನ್ನುಡಿ

   ಹೀಗೆ ಚೀನಾ ವಿರುದ್ಧ ಅಸಮಾಧಾನ ಭುಗಿಲೆದ್ದಿರುವಾಗಲೇ ಭಾರತವನ್ನೂ ಕುತಂತ್ರಿ ಚೀನಾ ಎದುರು ಹಾಕಿಕೊಳ್ಳುತ್ತಿದೆ. ಇದು ವೈರಸ್ ಫ್ಯಾಕ್ಟರಿ ಚೀನಾದ ವಿನಾಶಕ್ಕೆ ಮುನ್ನುಡಿ ಬರೆದಂತಾಗುತ್ತಿದೆ. ಭವಿಷ್ಯದಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾದರೆ ಚೀನಾ ವಿರೋಧಿಗಳು ಒಗ್ಗೂಡಿ, ಚೀನಾವನ್ನು ಬಗ್ಗುಬಡಿಯಲು ರಣತಂತ್ರ ಹೆಣೆಯುತ್ತಿವೆ. ಆದರೆ ಚೀನಾ ಈಗ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದೇ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

   English summary
   Army Chief Manoj Mukund Naravane has asked top military commanders of Central and Eastern sectors to prepared for any eventuality and maintain highest operational preparedness.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X