ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮನೋಜ್ ಪಾಂಡೆ

|
Google Oneindia Kannada News

ನವದೆಹಲಿ, ಏಪ್ರಿಲ್ 30: ಭಾರತದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಎಂ.ಎಂ. ನರವಣೆ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಜನರಲ್‌ ಮನೋಜ್‌ ಪಾಂಡೆ ಸೇನಾ ಸಿಬ್ಬಂದಿಯ 29ನೇ ಮುಖ್ಯಸ್ಥರಾಗಿ ಇಂದು ಅಧಿಕಾರ ಸ್ವೀಕರಿಸಿದರು.

ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರ ನಿಧನದ ಬಳಿಕ 2021ರ ಡಿಸೆಂಬರ್ ತಿಂಗಳಲ್ಲಿ ಭಾರತದ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಎಂ.ಎಂ. ನರವಣೆ ಅಧಿಕಾರ ವಹಿಸಿಕೊಂಡಿದ್ದರು.

ನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆ

ಈಗ ಎಂ.ಎಂ. ನರವಣೆ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಹೊಸ ಉತ್ತರಾಧಿಕಾರಿಯಾಗಿ ಜನರಲ್ ಮನೋಜ್ ಪಾಂಡೆ ಅವರನ್ನು ಘೋಷಿಸಲಾಗಿದೆ. ಅವರು ಇಂದು ಸೇನಾ ಮುಖ್ಯಸ್ಥರಾಗಿ ಭಾರತದ ಸೇನಾ ಸಿಬ್ಬಂದಿ ದಂಡವನ್ನು ನಿವೃತ್ತ ಎಂ.ಎಂ. ನರವಣೆ ಅವರಿಂದ ಸ್ವೀಕರಿಸಿಕೊಂಡರು.

General Manoj Pande Today Took Over As 29th Indian Army Chief

ಅಧಿಕಾರಾವಧಿ ಎಷ್ಟು?
ಭಾರತೀಯ ಸೇನಾ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಜನರಲ್ ಮನೋಜ್ ಪಾಂಡೆ ಕಾರ್ಡ್ ಆಫ್ ಇಂಜಿನಿಯರ್ಸ್‌ನ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನೋಜ್ ಸಿ ಪಾಂಡೆ ಎರಡು ವರ್ಷಕ್ಕೂ ಹೆಚ್ಚು ಕಾಲ ಸೇನಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೂರು ವರ್ಷಗಳ ಸೇವೆಯವರೆಗೆ ಅಥವಾ 62 ವರ್ಷದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸೇನಾ ಮುಖ್ಯಸ್ಥರು ತಮ್ಮ ಅಧಿಕಾರದಲ್ಲಿರುತ್ತಾರೆ.

General Manoj Pande Today Took Over As 29th Indian Army Chief

ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಪರಿಚಯ
1962ರ ಮೇ 6ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿ ಪಾಂಡೆ, 1982ರ ಡಿಸೆಂಬರ್ 24ರಂದು ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್ಸ್ (ದಿ ಬಾಂಬೆ ಸಪ್ಪರ್ಸ್) ನಲ್ಲಿ ನೇಮಕಗೊಂಡರು. 39 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯ ಅವಧಿಯಲ್ಲಿ ಅವರು ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ಬೋಧನಾ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

General Manoj Pande Today Took Over As 29th Indian Army Chief

ಮನೋಜ್ ಪಾಂಡೆ ಎಂಜಿನಿಯರ್ ಆಗಿದ್ದು, ಸೇನಾ ಪಡೆ ಮುಖ್ಯಸ್ಥರಾಗಲಿರುವ ಮೊದಲ ಎಂಜಿನಿಯರ್ ಎನಿಸಲಿದ್ದಾರೆ. ಮನೋಜ್ ಚಂದ್ರಶೇಖರ್ ಪಾಂಡೆ ಫೆಬ್ರವರಿ 1ರಿಂದಷ್ಟೇ ಉಪ ಸೇನಾ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅದೃಷ್ಟಕ್ಕೆ ಅವರಿಗಿಂತ ಹಿರಿಯ ಸೇನಾಧಿಕಾರಿಗಳು ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ. ಹೀಗಾಗಿ, ಮನೋಜ್ ಪಾಂಡೆ ಅವರೇ ಈಗ ಸೀನಿಯರ್ ಮೋಸ್ಟ್ ಸೇನಾಧಿಕಾರಿ ಆಗಿದ್ದು, ಸಹಜವಾಗಿಯೇ ಅವರು ನೂತನ ಸಿಡಿಎಸ್ ಆಗಿ ನೇಮಕವಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ಮನೋಜ್ ಪಾಂಡೆ ಅವರು 29ನೇ ಸೇನಾ ಮುಖ್ಯಸ್ಥರಾಗಲಿದ್ದಾರೆ.

English summary
Lieutenant General Manoj Pandey has been Took Over as the 29th Chief of Indian Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X