ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 1 ರಿಂದ ಎಲ್ಲಾ ವಿಮೆ ಕಂತುಗಳು ದುಬಾರಿ

ಸಾಮಾನ್ಯ ವಿಮೆ ಏಪ್ರಿಲ್ 1, 2017ರಿಂದ ತುಟ್ಟಿಯಾಗಲಿದೆ. ಕಾರು, ಮೋಟಾರ್ ಸೈಕಲ್ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚಳವಾಗಲಿದೆ. ಏಜೆಂಟ್‍ಗಳಿಗೆ ಕಮಿಷನ್ ಪರಿಷ್ಕರಣೆಗೆ ಐಆರ್‍ಡಿಎಐ ಸಮ್ಮತಿ ನೀಡಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 26: ಸಾಮಾನ್ಯ ವಿಮೆ ಏಪ್ರಿಲ್ 1, 2017ರಿಂದ ತುಟ್ಟಿಯಾಗಲಿದೆ. ಕಾರು, ಮೋಟಾರ್ ಸೈಕಲ್ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚಳವಾಗಲಿದೆ. ಏಜೆಂಟ್‍ಗಳಿಗೆ ಕಮಿಷನ್ ಪರಿಷ್ಕರಣೆಗೆ ಐಆರ್‍ಡಿಎಐ ಸಮ್ಮತಿ ನೀಡಿದೆ.

ಗುಂಪು ಆರೋಗ್ಯ ವಿಮೆ ಹಾಗೂ ಥರ್ಡ್ ಪಾರ್ಟಿ ಮೋಟಾರ್ ಪ್ರೀಮಿಯಂನಲ್ಲಿ ಏಪ್ರಿಲ್ 1ರಿಂದ ಏರಿಕೆಯಾಗಲಿದ್ದು, ಮಾರ್ಪಾಡು ನಂತರ ಪ್ರೀಮಿಯಂನಲ್ಲಿ ಬದಲಾವಣೆಯಾಗಿದ್ದು, ಈಗಿರುವ ದರಕ್ಕಿಂತ ಶೇ.+/-5ರಷ್ಟು ನಿಗದಿಯಾಗಲಿದೆ. [ಕಾರು, ಬೈಕ್ ಇತರ ವಿಮೆ ಪ್ರೀಮಿಯಂ ಏರಿಕೆ!]

General insurance premium set to go up from April 1

ಏ.1ರಿಂದ ಜಾರಿಗೆ ಬರಲಿರುವ ಮೂರನೇ ವ್ಯಕ್ತಿ ಮೋಟಾರು ವಿಮೆ ಹೆಚ್ಚಳದೊಂದಿಗೆ ಸಾಮಾನ್ಯ ವಿಮೆ ಪ್ರೀಮಿಯಂ ದರ ಏರಿಕೆಯೂ ಅಂದಿನಿಂದಲೇ ಅನ್ವಯವಾಗಲಿದೆ. ಜೀವವಿಮೆ ಹೊರತಾದ ಇತರ ವಿಮೆಗಳ ಪ್ರೀಮಿಯಂ ಪೈಕಿ ಕೆಲವುದನ್ನು ಶೇ 10ರಿಂದ 15ರಷ್ಟು ಏರಿಸಲು ಚಿಂತಿಸಿವೆ.

ವಿಮಾ ಮಾರುಕಟ್ಟೆ ತುಂಬ ಸ್ಪರ್ಧಾತ್ಮಕವಾಗಿದೆ. ನಾವು ತುಂಬ ಏರಿಕೆ ಕೂಡ ಮಾಡಲು ಸಾಧ್ಯವಿಲ್ಲ. ನಷ್ಟದಲ್ಲಿರುವ ವಿಭಾಗದ ಇನ್ಷೂರೆನ್ಸ್ ಗಳ ಪ್ರೀಮಿಯಂಗಳಿಗೆ ಸದ್ಯಕ್ಕೆ ಎಷ್ಟು ಮೊತ್ತ ಏರಿಸಬಹುದು ಎಂಬ ಬಗ್ಗೆ ಆಲೋಚನೆ ನಡೆಯುತ್ತಿದೆ ಎಂದು ನ್ಯಾಷನಲ್ ಇನ್ಷೂರೆನ್ಸ್ ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಾ ನಿರ್ದೇಶಕ ಸನತ್ ಹೇಳಿದ್ದಾರೆ.(ಪಿಟಿಐ)

English summary
Car, motorcycle and health insurance will cost more from April 1 with regulator Irdai giving go-ahead to insurers for revision in commission for agents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X