ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲಿಕಾಪ್ಟರ್ ಪತನ: ಬಿಪಿನ್ ರಾವತ್ ಸೇರಿ 13 ಮೃತರಿಗೆ ಪ್ರಧಾನಿ ಅಂತಿಮ ನಮನ

|
Google Oneindia Kannada News

ನವದೆಹಲಿ, ಡಿಸೆಂಬರ್ 9: ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯ ಕುನೂರ್ ಬಳಿ ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿರುವ ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಮತ್ತು ಇತರ 11 ಮಂದಿ ಸಾವನ್ನಪ್ಪಿದ ಹೆಲಿಕಾಪ್ಟರ್‌ನ ಫ್ಲೈಟ್ ಡೇಟಾ ರೆಕಾರ್ಡರ್ ಪತ್ತೆಯಾಗಿದೆ. ಘಟನೆಯ ಬಗ್ಗೆ ವಾಯುಪಡೆಯು ತ್ರಿ-ಸೇವಾ ತನಿಖೆಗೆ ಆದೇಶಿಸಿದೆ.

Recommended Video

ಭಾರತ ಸೇನೆಗೆ ಬಿಪಿನ್ ರಾವತ್ ಕೊಟ್ಟ ಕೊಡುಗೆ ಏನೇನು ಗೊತ್ತಾ? | Oneindia Kannada

ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಐಎಎಫ್ ಯೋಧರಿಗೆ ರಾತ್ರಿ 9 ಗಂಟೆ ವೇಳೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಂತಿಮ ನಮನ ಸಲ್ಲಿಸಲಿದ್ದಾರೆ. ಈ ವೇಳೆ ರಕ್ಷಣಾ ಸಚಿವರ ಜೊತೆಗೆ ರಕ್ಷಣಾ ರಾಜ್ಯ ಸಚಿವರು ಹಾಗೂ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಯ ಮುಖ್ಯಸ್ಥರು ಸಹ ಉಪಸ್ಥಿತರಿರುತ್ತಾರೆ.

Army Helicopter Crash updates: ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಪತ್ತೆArmy Helicopter Crash updates: ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಪತ್ತೆ

ಮೃತರ ಪಾರ್ಥಿವ ಶರೀರವನ್ನು ಗುರುವಾರ ಸಂಜೆ ದೆಹಲಿಯ ಪಾಲಂ ವಾಯು ನೆಲೆಗೆ ಆಗಮಿಸಲಿದೆ ಎಂದು ಎಎನ್ಐ ಉಲ್ಲೇಖಿಸಿದೆ. ಈ ಕುರಿತು ಪ್ರಮುಖ ಬೆಳವಣಿಗೆಗಳನ್ನು ಇಲ್ಲಿ ವಿವರಿಸಲಾಗಿದೆ.

General Bipin Rawat and his wife Dead body will reach Delhi Soon: 10 Updates on Developments


ಬಿಪಿನ್ ರಾವತ್ ಸೇರಿ ಎಲ್ಲ ಯೋಧರಿಗೆ ಅಂತಿಮ ಗೌರವ:

* ವಾಯುಪಡೆಗೆ ಸೇರಿದ ಸಿ-130ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದಲ್ಲಿ ಎಲ್ಲಾ 13 ಮೃತದೇಹಗಳನ್ನು ದೆಹಲಿಗೆ ತರಲಾಗುತ್ತಿದೆ. ನಿನ್ನೆ ವಿಮಾನ ದುರಂತದ ಸ್ಥಳಕ್ಕೆ ತೆರಳಿದ್ದ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮೃತದೇಹಗಳನ್ನು ಸ್ವೀಕರಿಸಲು ದೆಹಲಿಗೆ ಮರಳಿದ್ದಾರೆ.

* ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ಬಳಿ 13 ಮೃತದೇಹಗಳನ್ನು ಸಾಗಿಸುತ್ತಿದ್ದ ವಾಹನಗಳಲ್ಲಿ ಸಣ್ಣ ಅಪಘಾತ ಸಂಭವಿಸಿದೆ. ವಾಹನಗಳಲ್ಲಿ ಮೃತದೇಹಗಳನ್ನು ಕೊಯಮತ್ತೂರಿನ ಸುಳೂರ್ ವಾಯುನೆಲೆಗೆ ಸಾಗಿಸಿದ್ದು, ಅಲ್ಲಿಂದ ಗುರುವಾರ ಸಂಜೆ ವೇಳೆಗೆ ದೆಹಲಿಗೆ ವಿಮಾನಕ್ಕೆ ತಲುಪಲಿವೆ.

* ಬೆಂಗಾವಲು ಪಡೆ ಸೂಳೂರು ಬೇಸ್‌ಗೆ ಆಗಮಿಸುತ್ತಿದ್ದಂತೆ ಸ್ವಾಗತಿಸಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವಾಹನಗಳು ವಾಯು ನೆಲೆಯ ಕಾಂಪೌಂಡ್ ಕಡೆಗೆ ತಿರುಗುತ್ತಿದ್ದಂತೆ ಜನರು 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುತ್ತಾ ರಸ್ತೆಯ ಮೇಲೆ ಹೂವು ಸುರಿದರು.

* ಇನ್ನೊಂದು ಕಡೆ ಹೆಲಿಕಾಪ್ಟರ್ ಪತನದಲ್ಲಿ ಬದುಕುಳಿದ ಗ್ರೂಪ್ ಕ್ಯಾಪ್ಟನ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಯುಪಡೆಯ ಕಮಾಂಡ್ ಆಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಗಿದೆ. ಗ್ರೂಪ್ ಕ್ಯಾಪ್ಟನ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* ಗುರುವಾರ ಬೆಳಗ್ಗೆ ಸಂಸತ್ತಿನಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ತ್ರಿ-ಸೇವಾ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

* ಭಾರತದ ಮೊದಲ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆ ಶುಕ್ರವಾರ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ನಡೆಯಲಿದೆ. ಜನರಲ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಮೃತದೇಹಗಳನ್ನು ಇಂದು ಸಂಜೆ ದೆಹಲಿಯ ಧೌಲಾ ಕುವಾನ್‌ನಲ್ಲಿರುವ ಸೇನಾ ಆಸ್ಪತ್ರೆಗೆ ಕೊಂಡೊಯ್ಯಲಾಗುವುದು.

* ಯುಎಸ್, ಚೀನಾ, ನೇಪಾಳ, ಯುಕೆ, ರಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್, ಇಸ್ರೇಲ್ ಮತ್ತು ಜಪಾನ್‌ನಿಂದ ಸಂತಾಪ ಸಂದೇಶಗಳು ಬಂದಿವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ "ರಾಷ್ಟ್ರವು ತನ್ನ ವೀರ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ," ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರಲ್ ರಾವತ್ ಅವರನ್ನು "ಅತ್ಯುತ್ತಮ ಸೈನಿಕ" ಎಂದು ಕರೆದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಾವು ತುಂಬಲಾರದ ನಷ್ಟ ಎಂದು ಬಣ್ಣಿಸಿದ್ದಾರೆ.

* Mi-17V5 ಏರ್ ಫೋರ್ಸ್ ಹೆಲಿಕಾಪ್ಟರ್ - "ವಾಯುಪಡೆಯ ವರ್ಕ್‌ಹಾರ್ಸ್" ಎಂದು ವಿವರಿಸಲಾಗಿದೆ. ಜನರಲ್ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸ್ಟಾಫ್ ಸರ್ವಿಸಸ್ ಕಾಲೇಜುಗಳಿಗೆ ಹೋಗುತ್ತಿದ್ದರು. ಜನರಲ್ ರಾವತ್ ಅವರನ್ನು ಬರಮಾಡಿಕೊಳ್ಳಲು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವೆಲ್ಲಿಂಗ್ಟನ್ ನಿಂದ ಸೂಲೂರಿಗೆ ತೆರಳಿದ್ದರು.

* ಬೆಳಗ್ಗೆ 11.48ಕ್ಕೆ ಟೇಕಾಫ್ ಆದ Mi-17V5 ಏರ್ ಫೋರ್ಸ್ ಹೆಲಿಕಾಪ್ಟರ್ 10 ನಿಮಿಷಗಳಲ್ಲಿ ವೆಲ್ಲಿಂಗ್‌ಟನ್‌ನಲ್ಲಿ ಇಳಿಯಬೇಕಿತ್ತು. ಮಧ್ಯಾಹ್ನ 12.08ಕ್ಕೆ ನಾಪತ್ತೆಯಾಗಿತ್ತು.

English summary
General Bipin Rawat and his wife Dead body will reach Delhi Soon: 10 Updates on Developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X