ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಭರ್ಜರಿ ನೆಗೆತ

By Prasad
|
Google Oneindia Kannada News

ನವದೆಹಲಿ, ಆಗಸ್ಟ್ 31 : ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ.8.2ರಷ್ಟು ಏರಿಕೆಯಾಗಿದ್ದು, ಭಾರತ ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ 31.18 ಲಕ್ಷ ಕೋಟಿ ರುಪಾಯಿಯಷ್ಟಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಆ ನಿರೀಕ್ಷೆಯನ್ನೂ ಮೀರಿ 33.74 ಲಕ್ಷ ಕೋಟಿ ರುಪಾಯಿಯಷ್ಟು ಆಗಿದೆ. ಇದು ಕಳೆದೆರಡು ವರ್ಷಗಳಲ್ಲಿಯೇ ಅತಿಹೆಚ್ಚು ಜಿಡಿಪಿ ಬೆಳವಣಿಗೆಯಾಗಿದೆ.

2018- 19ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದರ 7- 7.5 2018- 19ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದರ 7- 7.5

ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ.7.7ರಷ್ಟಿತ್ತು. ಆದರೆ, ಕಳೆದ ವರ್ಷದ ಮೊದಲ ತ್ರೈಮಾಸಿಕ ಮುಗಿದ ನಂತರ ಜಿಡಿಪಿ ಬೆಳವಣಿಗೆ ಭಾರೀ ಕುಂಠಿತಗೊಂಡು ಶೇ.5.59ರಷ್ಟು ಕುಸಿದಿತ್ತು. ಪ್ರಸ್ತುತ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಆವೇಗ ಪಡೆದುಕೊಂಡಿದೆ.

GDP growth for Q1 of financial year 2018-19 is 8.2%

ಇದೇ ಸಮಯದಲ್ಲಿ ಗ್ರಾಸ್ ವ್ಯಾಲ್ಯೂ ಆಡೆಡ್ (ಜಿವಿಎ) ಬೆಳವಣಿಗೆ ಶೇ.8ಕ್ಕೆ ಬಂದು ನಿಂತಿದೆ. ಜಿವಿಎ ಉತ್ಪಾದಕರು ಅಥವಾ ಸಾಮಗ್ರಿ ಸರಬರಾಜು ಮಾಡುವವರ ಬದಿಯಿಂದ ದೇಶದ ಆರ್ಥಿಕ ಚಟುವಟಿಕೆಯ ಚಿತ್ರಣ ನೀಡಿದರೆ, ಜಿಡಿಪಿ ಗ್ರಾಹಕರು ಅಥವಾ ಬೇಡಿಕೆಯ ದೃಷ್ಟಿಕೋನದಿಂದ ದೇಶದ ಆರ್ಥಿಕ ಪ್ರಗತಿಯ ಚಿತ್ರಣ ನೀಡುತ್ತದೆ.

ಈ ಆರ್ಥಿಕ ಪ್ರಗತಿಯ ಶ್ರೇಯ ಉತ್ಪಾದನಾ ಕ್ಷೇತ್ರಕ್ಕೆ ಸಲ್ಲುತ್ತದೆ. ಕಳೆದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ 1.8ರಷ್ಟು ಮಾತ್ರ ಇತ್ತು. ಅದು ಪ್ರಸ್ತುತ ತ್ರೈಮಾಸಿಕದಲ್ಲಿ 13.5ಕ್ಕೆ ಏರಿದೆ.

ಮೋದಿ ಸರ್ಕಾರಕ್ಕೆ ಹಿತ ಸುದ್ದಿ: ಜಿಡಿಪಿ ಪ್ರಗತಿಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತ!ಮೋದಿ ಸರ್ಕಾರಕ್ಕೆ ಹಿತ ಸುದ್ದಿ: ಜಿಡಿಪಿ ಪ್ರಗತಿಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತ!

ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸಾರ್ವಜನಿಕರ ವಲಯದಲ್ಲಿ ಆಗಿರುವ ಹೂಡಿಕೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೊಳ್ಳುವಿಕೆ ಹೆಚ್ಚುತ್ತಿರುವುದು ಕಾರಣವಾಗಿದೆ. ಪ್ರಾಯಶಃ ಇದು ನಾವು ಕಂಡು ಅತ್ಯುತ್ತಮ ಆರ್ಥಿಕ ಬೆಳವಣಿಗೆ ಎಂದು ಎಎನ್‌ಝಡ್ ಬ್ಯಾಂಕ್‌ನ ಆರ್ಥಿಕ ತಜ್ಞ ಶಶಾಂಕ್ ಮೆಂಡಿರತ್ತ ಅವರು ರಾಯ್ಟರ್ ಗೆ ತಿಳಿಸಿದ್ದಾರೆ.

ಭಾರತದ ಆರ್ಥಿಕ ಪ್ರಗತಿ ತನ್ನ ಪ್ರತಿಸ್ಪರ್ಧಿ ಚೀನಾಗಿಂತ ಹೆಚ್ಚಾಗಿದೆ. ಜನವರಿಯಿಂದ ಡಿಸೆಂಬರ್ ವರೆಗಿನ ಫಿಸ್ಕಲ್ ಕ್ಯಾಲೆಂಡರನ್ನು ಫಾಲೋ ಮಾಡುವ ಚೀನಾ ತನ್ನ ಎರಡನೇ ತ್ರೈಮಾಸಿಕದಲ್ಲಿ 6.7ರಷ್ಟು ಆರ್ಥಿಕ ಪ್ರಗತಿ ಕಂಡಿದೆ. ವಿಶ್ವ ಬ್ಯಾಂಕ್ ನೀಡಿರುವ ದತ್ತಾಂಶದ ಪ್ರಕಾರ, 2017ರಲ್ಲಿ ಫ್ರಾನ್ಸನ್ನು ಕೂಡ ಹಿಂದಿಕ್ಕಿದ್ದು, ತ್ವರಿತಗತಿಯಲ್ಲಿ ಆರ್ಥಿಕ ಪ್ರಗತಿ ಕಾಣುತ್ತಿರುವ ಜಗತ್ತಿನ ಆರನೇ ಅತೀದೊಡ್ಡ ದೇಶವಾಗಿದೆ.

English summary
The GDP growth for the April-June Quarter of the financial year 2018-19 is 8.2%, according to government data. The Union Government on Friday released the Gross Domestic Product (GDP) data for the first quarter of the financial year 2018-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X