• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಜಿಯಾಬಾದ್ ನ ಮೇಘನಾ ಸಿಬಿಎಸ್ಇ 12ನೇ ಕ್ಲಾಸ್ ಟಾಪರ್

By Nayana
|

ನವದೆಹಲಿ, ಮೇ 26: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 12 ನೇ ತರಗತಿ ಪರೀಕ್ಷಾ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಟ್ರಿವೆಂಡ್ರಮ್ 97.32 ಪ್ರತಿಶತ ಫಲಿತಾಂಶದ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಶೇ.93.87 ರಷ್ಟು ಉತ್ತೀರ್ಣ ಪ್ರಮಾಣವನ್ನು ಸಾಧಿಸಿ ಚೆನ್ನೈ ಎರಡನೇ ಸ್ಥಾನದಲ್ಲಿದೆ.

ಶೇ.89ರಷ್ಟು ದೆಹಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಗಾಜಿಯಾಬಾದ್‌ನ ಮೇಘನಾ ಶ್ರೀವಾಸ್ತವ್ 500 ಅಂಕಗಳಿಗೆ 499 ಅಂಕಗಳಿಸಿ ದೇಶಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.

ಬಾಲಕರು ಶೇ.78.99 ರಷ್ಟು ಫಲಿತಾಂಶ ಪಡೆದರೆ ವಿದ್ಯಾರ್ಥಿನಿಯರು ಶೇ.88.31 ಉತ್ತೀರ್ಣರಾಗುವ ಮೂಲಕ ಬಾಲಕರನ್ನು ಹಿಂದಿಕ್ಕಿದ್ದಾರೆ. ಈ ಬಾರಿ ಶೇ.83.ರಷ್ಟು ಫಲಿತಾಂಶ ಲಭ್ಯವಾಗಿದೆ.

ಕಳೆದ ಬಾರಿ ಶೇ.82.02 ಫಲಿತಾಂಶ ಬಂದಿತ್ತು. ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಇನ್ನೆರೆಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಮೇ 28 ಅಥವಾ 29 ರಂದು ಸಿಬಿಎಸ್‌ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ತಿಳಿಸಿದ್ದಾರೆ.

ಈ ಬಾರಿ ಸಿಬಿಎಸ್‌ಇ ಹತ್ತನೇ ತರಗತಿ ಹಾಗೂ 12ನೇ ತರಗತಿ ಸೇರಿ ಒಟ್ಟು 28 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 16, 38,420 ವಿದ್ಯಾರ್ಥಿಗಳು 1೦ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದು 4453 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಇನ್ನು 12ನೇ ತರಗತಿಗೆ 11, 86,306 ವಿದ್ಯಾರ್ಥಿಗಳು ಹಾಜರಾಗಿದ್ದರು.4138 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಮಾರ್ಚ್ 3ರಿಂದ ಪ್ರಾರಂಭವಾಗಿದ್ದ ಪರೀಕ್ಷೆ ಏಪ್ರಿಲ್ 25ರವರೆಗೂ ನಡೆದಿತ್ತು.

cbseresults.nic.in ಅಥವಾ cbse.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CBSE has announced 12 class exam results on Saturday. Over all 83.01 percent students have been passed. Meghana Srivatsava from Gaziabad has scored 499 out of 500 marks and stands first for the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more