ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲ್ಮನವಿ ತಿರಸ್ಕೃತ: ಸಲಿಂಗಕಾಮಿಗಳಿಗೆ ಬಂಧನ ಭೀತಿ

By Srinath
|
Google Oneindia Kannada News

Gay sex criminal - Supreme Court rejects review petition
ನವದೆಹಲಿ, ಜ.28: ಸಲಿಂಗಕಾಮಿಗಳಿಗೆ ಮತ್ತೆ ನಿರಾಶೆಯಾಗಿದೆ. ಜತೆಗೆ ಸಲಿಂಗ ಕ್ರಿಯೆಯಲ್ಲಿ ತೊಡಗಿದರೆ ಬಂಧನವಾಗುವ ಭೀತಿಯೂ ಕಾಡತೊಡಗಿದೆ. ಹೌದು 'ಸಲಿಂಗ ಕಾಮ ಅಪರಾಧ' ಎಂದು ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಇಂದು ಮರುಪರಿಶೀಲನೆಗೆ ಬಂದಿತ್ತು. ಈ ಸಂಬಂಧ ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸುವ ಕೋರ್ಟ್ ಸಲಿಂಗ ಕಾಮ ಅಪರಾಧವೇ ಸರಿ' ಎಂದು ಪುನರುಚ್ಚರಿಸಿದೆ.

'ಸಲಿಂಗರತಿ ಅಪರಾಧವಲ್ಲ' ಎಂದು ದೆಹಲಿ ಹೈಕೋರ್ಟ್ ಡಿಸೆಂಬರ್ 11, 2013ರಂದು ನೀಡಿದ್ದ ತೀರ್ಪನ್ನು ತಳ್ಳಿಹಾಕುತ್ತಾ ಸುಪ್ರೀಂ ಕೋರ್ಟ್, ಇಂಡಿಯನ್ ಪೀನಲ್ ಕೋಡ್ ನ 377 ಸೆಕ್ಷನ್ ಪ್ರಕಾರ ಸಲಿಂಗರತಿಯನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು. [ಸಲಿಂಗಕಾಮದ ಬಗ್ಗೆ ರವಿಶಂಕರ ಗುರೂಜಿ ಹೀಗಂತಾರೆ]

ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಅನ್ನು ತೆಗೆದುಹಾಕುವ ಅಧಿಕಾರ ಸಂಸತ್ತಿಗಿದೆ. ಆದರೆ, ಆ ನಿಯಮವನ್ನು ಸಂಸತ್ತು ರದ್ದು ಮಾಡುವವರೆಗೆ ಈ ಬಗೆಯ ಲೈಂಗಿಕ ಸಂಬಂಧಕ್ಕೆ ಕಾನೂನಿನ ಮಾನ್ಯತೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಖಡಾಖಂಡಿತವಾಗಿ ಹೇಳಿತ್ತು. ಆದರೆ ಈ ತೀರ್ಪಿನ ಬಗ್ಗೆ ಭಾರಿ ವಿರೋಧ/ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ( ಐಪಿಸಿ 377 : ಸುಪ್ರೀಂ ತೀರ್ಪೂ, ಲೈಂಗಿಕ ಆಸಕ್ತಿಯೂ )

ಕೇಂದ್ರ ಸರಕಾರ ಮತ್ತು ಸಲಿಂಗ ಕಾಮಿಗಳ ಹಕ್ಕು ಪರ ಹೋರಾಟಗಾರರು ಜಂಟಿಯಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಇಂದು ಮಂಗಳವಾರ ತಿರಸ್ಕರಿಸಿದೆ. ಸುಪ್ರೀಂಕೋರ್ಟಿನ ಇಂದಿನ ತೀರ್ಪಿನ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿರುವ ಅರ್ಜಿದಾರರು ಮತ್ತೊಂದು ಮೇಲ್ಮನವಿಯನ್ನು ಪುನಃ ಸಲ್ಲಿಸುವುದಾಗಿ ಹೇಳಿದ್ದಾರೆ. ( ಸಲಿಂಗಕಾಮ ಅನೈತಿಕ, ಅಪರಾಧ : ಸುಪ್ರೀಂಕೋರ್ಟ್ )

ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಯುಪಿಎ ಸರಕಾರವು ಅಪರೂಪದ ಪ್ರಕರಣವಾಗಿ ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸುಪ್ರೀಂಕೋರ್ಟ್ ತನ್ನ ತೀರ್ಪಿಗೆ ಬದ್ಧವಾಗಿರುವುದರಿಂದ ಚುನಾವಣೆಗೆ ಮುನ್ನ 'ಸಲಿಂಗರತಿ ಅಪರಾಧವಲ್ಲ' ಎಂಬ ಕಾಯಿದೆಯನ್ನು ಸಂಸತ್ತಿನಲ್ಲಿ ಮಂಡಿಸಿ, ಅದಕ್ಕೆ ಕಾನೂನಿನ ಚೌಕಟ್ಟು ತೊಡಿಸುತ್ತದಾ? ಕಾದುನೋಡಬೇಕಿದೆ.

English summary
Supreme Court today (Jan 28) rejected review petition on Gay sex criminal order. With this homosexuals are fearing arrests. The petition was filed by the Centre and gay rights activists. The petitioners said they would file another petition soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X