• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರದ ಗಂಗಾ ಶುದ್ಧೀಕರಣ ನೀಲನಕ್ಷೆಯಲ್ಲೇನಿದೆ?

|

ನವದೆಹಲಿ, ಸೆ. 23 : ಗಂಗಾ ನದಿ ಶುದ್ಧೀಕರಣ ಯೋಜನೆಯ ಕುರಿತ ನೀಲನಕ್ಷೆಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮುಂದಿಟ್ಟಿದೆ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ 18 ವರ್ಷಗಳ ನೀಲನಕ್ಷೆ ಸಲ್ಲಿಸಲಾಗಿದೆ.

ಗಂಗಾ ನದಿ ಶುದ್ಧಿಕರಣ ಸಂಬಂಧ ಇತ್ತೀಚೆಗೆ ಸುಪ್ರಿಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವರದಿ ಸಿದ್ಧಮಾಡಿ ನೀಡಿದೆ.(ಮೋದಿ ಸರಕಾರಕ್ಕೆ ಸರೀ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್)

ಮೊದಲ ಹಂತದಲ್ಲಿ ಪವಿತ್ರ ನದಿಯ ತೀರದಲ್ಲಿರುವ 118 ನಗರ, ಪಟ್ಟಣಗಳನ್ನು ಗುರುತಿಸಲಾಗಿದ್ದು ಒಳಚರಂಡಿ ನಿರ್ಮಾಣನ ಸ್ವಚ್ಛತೆಗೆ ಆದ್ಯತೆ ಮುಂತಾದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಮೂರು ಹಂತಗಳಲ್ಲಿ ಯೋಜನ ಜಾರಿ

ಮೂರು ಹಂತಗಳಲ್ಲಿ ಯೋಜನ ಜಾರಿ

ಅಲ್ಪಾವಧಿ ಯೋಜನೆ (3 ವರ್ಷ), ಮಧ್ಯಮಾವಧಿ ಯೋಜನೆ (5 ವರ್ಷ) ಮತ್ತು ದೀರ್ಘ ಕಾಲಿನ ಯೋಜನೆ (10 ವರ್ಷ) ಎಂದು ಕಾರ್ಯಕ್ರಮವನ್ನು ಒಟ್ಟು 3 ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ.

2,500 ಸಾವಿರ ಕಿಮೀ, ಐದು ರಾಜ್ಯಗಳು

2,500 ಸಾವಿರ ಕಿಮೀ, ಐದು ರಾಜ್ಯಗಳು

ಗಂಗಾ ನದಿ ಒಟ್ಟು 5 ರಾಜ್ಯಗಳ ವ್ಯಾಪ್ತಿಗೆ ಬರಲಿದೆ. ನದಿ ಹೆಚ್ಚು ಮಾಲಿನ್ಯಗೊಳ್ಳುವ ಕೇದಾರನಾಥ, ಹರಿದ್ವಾರ, ವಾರಾಣಾಸಿ, ಕಾನ್ಪುರ, ಅಲಹಾಬಾದ್, ಪಾಟ್ನಾ ಮತ್ತು ದೆಹಲಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಲಾಗಿದೆ.

ಬಯಲು ಶೌಚ ನಿಷೇಧವೇ ಪರಿಹಾರ

ಬಯಲು ಶೌಚ ನಿಷೇಧವೇ ಪರಿಹಾರ

ಗಂಗಾ ನದಿ ತಟದಲ್ಲಿ 1,649 ಗ್ರಾಮ ಪಂಚಾಯಿತಿಗಳಿದ್ದು ಜನರು ಶೌಚಕ್ಕಾಗಿ ಬಯಲು ಪ್ರದೇಶ ಬಳಸದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನೈರ್ಮಲ್ಯೀಕರಣಕ್ಕೆ ಮತ್ತಷ್ಟು ಒತ್ತು ನೀಡಲಾಗುವುದು ಎಂದು ವರದಿ ಹೇಳಿದೆ.

ಏಳು ಐಐಟಿ ತಜ್ಞರ ಸಲಹೆ ಪಡೆದು ಸಿದ್ಧವಾದ ವರದಿ

ಏಳು ಐಐಟಿ ತಜ್ಞರ ಸಲಹೆ ಪಡೆದು ಸಿದ್ಧವಾದ ವರದಿ

ಗಂಗಾ ಶುದ್ಧಿಕರಣದ ದೀರ್ಘಾವಧಿ ಯೋಜನೆಯನ್ನು ಏಳು ಜನನ ಪ್ರಮುಖ ಐಐಟಿಗಳ ತಜ್ಞರ ಸಲಹೆ ಪಡೆದು ರೂಪಿಸಲಾಗಿದ್ದು ಯೋಜನೆ ಅನುಷ್ಠಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸುಪ್ರೀಖ ಕೋರ್ಟ್‌ಗೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The NDA government Monday placed before the Supreme Court a blueprint of measures spanning over 18 years to restore the pristine glory of river Ganga and identified 118 towns on its banks as the first target to achieve total sanitation, including water treatment and solid waste management.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more