ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುದ್ಧ ಗಂಗೆ: ಉಪವಾಸ ಸತ್ಯಾಗ್ರಹ ನಡೆಸಿ ಸತ್ತರೂ, ಸ್ವಾಮಿಯ ಕನಸು ಈಡೇರಲಿಲ್ಲ

|
Google Oneindia Kannada News

ನವದೆಹಲಿ, ಅಕ್ಟೋಬರ್ 11: ಗಂಗಾ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಜೂನ್ 22 ರಿಂದ ಸತತ ಉಪವಾಸ ನಡೆಸುತ್ತಿದ್ದ ಸ್ವಾಮಿ ಗ್ಯಾನ್ ಸ್ವರೂಪ್ ಸನಂದ್ (ಜಿ.ಡಿ. ಅಗರ್ವಾಲ್) ಹೃಷಿಕೇಷದಲ್ಲಿರುವ ಎಐಐಎಂಎಸ್ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದರು.

109 ದಿನಗಳಿಂದ ಉಪವಾಸ ಮಾಡುತ್ತಿದ್ದ 87 ವರ್ಷದ ಸ್ವಾಮೀಜಿಯ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಪೊಲೀಸರು ಬುಧವಾರ ಹರಿದ್ವಾರದಿಂದ ಹೃಷಿಕೇಷದ ಎಐಐಎಂಎಸ್‌ಗೆ ಸ್ಥಳಾಂತರಿಸಿದ್ದರು. ಆದರೆ, ಅವರು ಹೃದಯಾಘಾತದಿಂದ ನಿಧನ ಹೊಂದಿದರು.

ಕಾಶಿ ಗಂಗಾ ತಟದಲ್ಲಿ ಶವಸಂಸ್ಕಾರ: ಉತ್ತರಪ್ರದೇಶ ಸರಕಾರದ ಹೊಸ ಆದೇಶಕಾಶಿ ಗಂಗಾ ತಟದಲ್ಲಿ ಶವಸಂಸ್ಕಾರ: ಉತ್ತರಪ್ರದೇಶ ಸರಕಾರದ ಹೊಸ ಆದೇಶ

ಗಂಗಾ ನದಿಯ ಸ್ವಚ್ಛತೆಗೆ ಮತ್ತು ರಕ್ಷಣೆಗೆ ಕಾನೂನುನ ರೂಪಿಸಬೇಕು ಹಾಗೂ ಉತ್ತರಾಖಂಡದ ಗಂಗೋತ್ರಿ-ಉತ್ತರಕಾಶಿಯ ನಡುವೆ ತಡೆರಹಿತ ಹರಿವನ್ನು ಕಾಯ್ದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು.

Ganga clean activist Swami Gyan swaroop sanand was in fast dies at rishikesh

ತಮ್ಮ ಉಪವಾಸದ ವೇಳೆ ಕೇವಲ ಜೇನು ತುಪ್ಪ ಬೆರೆಸಿದ ನೀರು ಕುಡಿಯುತ್ತಿದ್ದ ಅವರು, ತಮ್ಮ ಬೇಡಿಕೆಗಳು ಈಡೇರದ ಕಾರಣ ಎರಡು ದಿನಗಳ ಹಿಂದೆ ನೀರು ಕುಡಿಯುವುದನ್ನು ಸಹ ನಿಲ್ಲಿಸಿದ್ದರು.

ಹುಷಾರ್ ಗಂಗಾ ನದಿಯಲ್ಲಿ ತೊಟ್ಟು ಕಸ ಹಾಕಿದ್ರೆ ಬೀಳುತ್ತೆ ಭಾರೀ ದಂಡ!ಹುಷಾರ್ ಗಂಗಾ ನದಿಯಲ್ಲಿ ತೊಟ್ಟು ಕಸ ಹಾಕಿದ್ರೆ ಬೀಳುತ್ತೆ ಭಾರೀ ದಂಡ!

ಕಾನ್ಪುರ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದ ಅಗರವಾಲ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ-ಕಾರ್ಯದರ್ಶಿಯೂ ಆಗಿದ್ದರು.

2020 ರ ಹೊತ್ತಿಗೂ ಗಂಗೆಗಿಲ್ಲವೇ ಸ್ವಚ್ಛತೆಯ ಭಾಗ್ಯ?!2020 ರ ಹೊತ್ತಿಗೂ ಗಂಗೆಗಿಲ್ಲವೇ ಸ್ವಚ್ಛತೆಯ ಭಾಗ್ಯ?!

ನದಿಗಳ ರಕ್ಷಣೆಗಾಗಿ ಅವರು ಈ ಹಿಂದೆಯೂ ಉಪವಾಸಗಳನ್ನು ನಡೆಸಿದ್ದರು. 2009ರಲ್ಲಿ ಅವರ ಉಪವಾಸ ಸತ್ಯಾಗ್ರಹವು ಭಾಗೀರಥಿ ನದಿಗೆ ಕಟ್ಟಲಾಗುತ್ತಿದ್ದ ಅಣೆಕಟ್ಟಿನ ಕಾಮಗಾರಿಯನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು.

English summary
Ganga clean activist Swami Gyan swaroop sanand (GD Agarwal) who was in indefinite fast since June 22 died at the AIIMS hospital in Rishikesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X