ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ದಿಕ್ ಪಟೇಲ್ ವಿರುದ್ಧ ಕೇಸು ದಾಖಲಿಸಿದ ಪೊಲೀಸರು

By Mahesh
|
Google Oneindia Kannada News

ಗಾಂಧಿನಗರ, ಡಿಸೆಂಬರ್ 01: ಅನುಮತಿ ಪಡೆಯದೆ ಚುನಾವಣಾ ಪ್ರಚಾರ ಸಮಾವೇಶ ನಡೆಸಿದ್ದಕ್ಕಾಗಿ ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ವಿರುದ್ಧ ಗಾಂಧಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋದಿ ರ‍್ಯಾಲಿ ಪಕ್ಕದಲ್ಲೇ ಹಾರ್ದಿಕ್ ಪಟೇಲ್ ಶಕ್ತಿ ಪ್ರದರ್ಶನಮೋದಿ ರ‍್ಯಾಲಿ ಪಕ್ಕದಲ್ಲೇ ಹಾರ್ದಿಕ್ ಪಟೇಲ್ ಶಕ್ತಿ ಪ್ರದರ್ಶನ

ಮನ್ಸಾದಲ್ಲಿ ಆಯೋಜಿಸಿದ್ದ ಚುನಾವಣಾ ಸಮಾವೇಶದಿಂದ ಶಾಂತಿ ಭಂಗವಾಗಿದೆ, ಕಾನೂನು ಉಲ್ಲಂಘನೆಯಾಗಿದೆ ಎಂದು ಹಾರ್ದಿಕ್ ಹಾಗೂ ಆರು ಮಂದಿಯ ವಿರುದ್ಧ ಗಾಂಧಿನಗರ ಪೊಲೀಸರು ದೂರು ದಾಖಲಿಸಲಾಗಿದೆ.

ಹಾರ್ದಿಕ್ ವಿರುದ್ಧ ತೊಡೆ ತಟ್ಟಿದ ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲಹಾರ್ದಿಕ್ ವಿರುದ್ಧ ತೊಡೆ ತಟ್ಟಿದ ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲ

Gandhinagar police files case against Hardik Patel

ಹಾರ್ದಿಕ್ ಹೊರತಾಗಿ ಸಮಾವೇಶವನ್ನು ಸಂಘಟಿಸಿದ್ದ ಉಮಿಯಾ ಡೆಕೊರೇಟರ್ಸ್ ಮಾಲಕ ಧರ್ಮೇಶ್ ಪಟೇಲ್ ವಿರುದ್ಧ ಐಪಿಸಿ ಸೆಕ್ಷನ್ 188 ಅನ್ವಯ ಪ್ರಕರಣ ದಾಖಲಾಗಿದೆ. ಕಾನೂನು ಉಲ್ಲಂಘಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಾಂಧಿನಗರ ಎಸ್‍ಪಿ ವೀರೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.

ಹಾರ್ದಿಕ್ ಪಟೇಲ್ 'ಸೆಕ್ಸ್ ಸಿಡಿ' ಬೆನ್ನಿಗೆ ಬಿದ್ದ ಮಹಿಳಾ ಆಯೋಗಹಾರ್ದಿಕ್ ಪಟೇಲ್ 'ಸೆಕ್ಸ್ ಸಿಡಿ' ಬೆನ್ನಿಗೆ ಬಿದ್ದ ಮಹಿಳಾ ಆಯೋಗ

ಕಳೆದೆರಡು ವರ್ಷಗಳಿಂದ ಹಾರ್ದಿಕ್ ಪಟೇಲ್ ಅವರು ರಾಜ್ಯಾದ್ಯಂತ ಹಲವಾರು ಪ್ರತಿಭಟನಾ ಜಾಥಗಳನ್ನು ಆಯೋಜಿಸುತ್ತಿದ್ದಾರೆ. ಸರಕಾರದ ಅಥವಾ ಸ್ಥಳೀಯಾಡಳಿತಗಳ ಅನುಮತಿ ಪಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹುಟ್ಟೂರು ಮನ್ಸಾದಲ್ಲಿ ಬಿಜೆಪಿಯನ್ನು ನಡುಗಿಸುವಂಥ ಮಾಹಿತಿ ಬಹಿರಂಗ ಪಡಿಸುವುದಾಗಿ ಘೋಷಿಸಿದ್ದ ಹಾರ್ದಿಕ್ ಅವರು ಏನೂ ಹೇಳಿರಲಿಲ್ಲ.

English summary
The Gandhinagar police has filed charges against Patidar leader Hardik Patel and six others for disturbing peace and breaking the law by holding a rally at Mansa despite not being given permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X