ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ vs ಗಾಂಧಿ: ಪ್ರಿಯಾಂಕಾ ಮಾತೇ ಜೋರು

By Mahesh
|
Google Oneindia Kannada News

ರಾಯ್ ಬರೇಲಿ, ಏ.16: ನಾನು ಅಮ್ಮ ಸೋನಿಯಾ ಗಾಂಧಿ ಹಾಗೂ ಸೋದರ ರಾಹುಲ್ ಗಾಂಧಿ ಪರ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಬುಧವಾರ ಸೋನಿಯಾ ಪರ ಭರ್ಜರಿ ಭಾಷಣ ಮಾಡಿರುವ ಪ್ರಿಯಾಂಕಾ, ಇದು ಐಡಿಯಾಲಜಿಗಳ ಯುದ್ಧ, ವೈಯಕ್ತಿಕ ಯುದ್ಧವಲ್ಲ ಎಂದಿದ್ದಾರೆ.

ಪ್ರಿಯಾಂಕಾ ಅವರ ಎಂಟ್ರಿ ನಂತರ ಬಿಜೆಪಿಯಲ್ಲಿರುವ ಸೋದರ ವರುಣ್ ವಿರುದ್ಧ ತಿರುಗಿ ಬೀಳುವ ಮೂಲಕ ಗಾಂಧಿ vs ಗಾಂಧಿ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ನೆಹರೂ-ಗಾಂಧಿ ಕುಟುಂಬದ ಕುಡಿಗಳಾದ ಪ್ರಿಯಾಂಕಾ ಮತ್ತು ವರುಣ್ ಗಾಂಧಿ ನಡುವಿನ ಮಾತಿನ ಸಮರ ಜೋರಾಗಿಯೇ ಮುಂದುವರಿದಿದೆ.

ಪ್ರಿಯಾಂಕಾ ಗಾಂಧಿ ತಮ್ಮ ಲಕ್ಷ್ಮಣ ರೇಖೆ ದಾಟಿ ಮಾತನಾಡುತ್ತಿದ್ದಾರೆ ಎಂದು ಮೌನವನ್ನು ಬಲಹೀನತೆ ಎಂದು ತಿಳಿದುಕೊಳ್ಳಬಾರದು ಎಂದು 34 ವರ್ಷ ವಯಸ್ಸಿನ ಸುಲ್ತಾನ್ ಪುರ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಹೇಳಿಕೆ ನೀಡಿ ಕಿಚ್ಚು ಹಬ್ಬಿಸಿದ್ದರು. ನಾನು ಕಳೆದ ದಶಕದಿಂದ ಎಂದೂ ಲಕ್ಷ್ಮಣ ರೇಖೆ ದಾಟಿಲ್ಲ. ಕುಟುಂಬ ಹಾಗೂ ಹಿರಿಯ ರಾಜಕೀಯ ಮುಖಂಡರಿಗೆ ಗೌರವಿಸಿದ್ದೇನೆ. ನನ್ನ ಭಾಷಣದಲ್ಲೂ ಸುಧಾರಣೆ ಮಾಡಿಕೊಂಡಿದ್ದೇನೆ ಎಂದು ವರುಣ್ ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟಿಕೊಂಡಿದ್ದರು. ಇದಕ್ಕೆ ಪ್ರಿಯಾಂಕ ಕೊಟ್ಟ ಉತ್ತರವೇನು? ಪ್ರಿಯಾಂಕಾ ವಿರುದ್ಧ ಹೇಳಿಕೆ ನೀಡಿ ಸ್ವಾಮಿಗೆ ಆದ ಅನುಭವವೇನು? ಮುಂದೆ ಓದಿ

ವರುಣ್ ಅಡ್ಡದಾರಿ ಹಿಡಿದಿದ್ದಾನೆ : ಪ್ರಿಯಾಂಕಾ

ವರುಣ್ ಅಡ್ಡದಾರಿ ಹಿಡಿದಿದ್ದಾನೆ : ಪ್ರಿಯಾಂಕಾ

* ನನ್ನ ಸೋದರ ವರುಣ್ ಅಡ್ಡ ದಾರಿ ಹಿಡಿದಿದ್ದಾರೆ. ವರುಣ್ ಗೆ ಸರಿ ದಾರಿ ತೋರಿಸಬೇಕಿದೆ. ಕುಟುಂಬದಲ್ಲಿ ಸಣ್ಣವರು ತಪ್ಪು ದಾರಿ ತುಳಿದಾಗ ಹಿರಿಯರು ಅವರನ್ನು ಸರಿ ದಾರಿಗೆ ತರಬೇಕು.
* ಲೋಕಸಭೆ ಚುನಾವಣೆ ಚುನಾವಣೆ ಎನ್ನುವುದು ಕುಟುಂಬದ ಚಹಾಕೂಟವಲ್ಲ. ಅದೊಂದು ಸೈದ್ಧಾಂತಿಕ ಸಮರ.
* ನಾವು ನಂಬಿದ ಸಿದ್ಧಾಂತವನ್ನು ತೊರೆದು ಅನ್ಯ ಸಿದ್ಧಾಂತವನ್ನು ಬೆಂಬಲಿಸುವವರು ನನ್ನ ಮಕ್ಕಳೇ ಆಗಿದ್ದರೂ ನಾನವರನ್ನು ಕ್ಷಮಿಸುವುದಿಲ್ಲ.

* ವರುಣ್ ನಡೆ ನಮ್ಮ ಕುಟುಂಬಕ್ಕೆ ಎಸಗಿದ ದ್ರೋಹ ಎಂದೇ ಪರಿಗಣಿಸುತ್ತೇನೆ, ಆತ ದಾರಿ ತಪ್ಪಿದ ಹುಡುಗ ಎಂಬ ಹೇಳಿಕೆಗೆ ಈಗಲೂ ಬದ್ಧ.

* ವರುಣ್ ಕುರಿತ ನಾನು ಆಡಿದ ಮಾತಿನ ವಿಡಿಯೋ ಬಹಿರಂಗಗೊಂಡ ಬಳಿಕ ಆತನ ಜತೆ ನಾನು ಮಾತನಾಡಿಲ್ಲ.

ನಾನು ಬದಲಾಗಿದ್ದೇನೆ ಎಂದ ವರುಣ್ ಗಾಂಧಿ

ನಾನು ಬದಲಾಗಿದ್ದೇನೆ ಎಂದ ವರುಣ್ ಗಾಂಧಿ

* ಈ ಹಿಂದೆ ಮುಸ್ಲಿಮರ ಕೈ ಕತ್ತರಿಸಿ ಎಂದು ಭಾಷಣ ಮಾಡಿ ಜೈಲು ಪಾಲಾಗಿದ್ದ ವರುಣ್ ಗಾಂಧಿ ನಾನು ಈಗ ಬದಲಾಗಿದ್ದೇನೆ ಎಂದು ಮಂಗಳವಾರ ನಾಮಪತ್ರ ಸಲ್ಲಿಸಿದ ಬಳಿಕ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
* ನನಗೆ ನನ್ನ ದಾರಿಗಿಂತ ದೇಶ ಸರಿಯಾದ ಪಥದಲ್ಲಿ ಸಾಗುವುದು ಬಹಳ ಮುಖ್ಯ. ದೇಶ ನಿರ್ಮಾಣಕ್ಕೆ ನನ್ನಿಂದ ಕೊಡುಗೆ ನೀಡಲು ಸಾಧ್ಯವಾದರೆ, ನನ್ನ ಜೀವನ ಸಾರ್ಥಕ.
* ರಾಜಕೀಯದಲ್ಲಿ ವ್ಯಕ್ತಿಗತ ಟೀಕೆಗೆ ಮುಂದಾದರೆ, ಮಹತ್ವದ ವಿಷಯಗಳ ಚರ್ಚೆಗೆ ಸಮಯ ದೊರೆಯದು. ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ , ಚರ್ಚೆಯ ಮಟ್ಟವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯೋಣ.
* ಗಾಂಧಿ ಕುಟುಂಬದವನಾಗಿದ್ದರಿಂದ ಇಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ದೇಶಕ್ಕೆ ಮಾದರಿ ಸರ್ಕಾರವನ್ನು ಬಿಜೆಪಿ ನೀಡಲಿದೆ.

ಸುಬ್ರಮಣ್ಯಂ ಸ್ವಾಮಿ ಮನೆ ಮುಂದೆ ಧರಣಿ

ಸುಬ್ರಮಣ್ಯಂ ಸ್ವಾಮಿ ಮನೆ ಮುಂದೆ ಧರಣಿ

ಪ್ರಿಯಾಂಕಾ ಗಾಂಧಿ ಮದ್ಯವ್ಯಸನಿ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಮಿ ಅವರ ನಿವಾಸದ ಎದುರು ಧರಣಿ, ಪ್ರತಿಭಟನೆ ನಡೆಸಿದರು.

* ಪ್ರಿಯಾಂಕಾ ಹಾಗೂ ವರುಣ್ ನಡುವಿನ ವಾಕ್ಸಮರಕ್ಕೆ ದನಿಗೂಡಿಸಿದ ಸ್ವಾಮಿ, ನೆಹರೂ ಅಪ್ಪಟ ಹಿಂದೂವಾದಿಯಾಗಿದ್ದರು ಗಾಂಧಿ ಕುಟುಂಬದ ನೀನು(ವರುಣ್) ಜಯಶಾಲಿಯಾಗು ಎಂದಿದ್ದರು.
* ಪ್ರತಿಭಟನಾಕಾರರು ನನ್ನ ಮೇಲೆ ಬೇಕಾದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಿ, ಕೋರ್ಟಿಗೆ ಅರ್ಜಿ ಹಾಕಲಿ, ಗೂಂಡಾಗಳ ರೀತಿ ಮನೆ ಮುಂದೆ ಚೀರಾಟ ನಡೆಸಿ ನೆಮ್ಮದಿ ಕೆಡಿಸುವುದು ಬೇಡ ಎಂದು ಸ್ವಾಮಿ ಹೇಳಿದರು.

ಎಂಎಂ ಸಿಂಗ್ ಸೂಪರ್ ಪಿಎಂ ಎಂದ ಪ್ರಿಯಾಂಕಾ

ಎಂಎಂ ಸಿಂಗ್ ಸೂಪರ್ ಪಿಎಂ ಎಂದ ಪ್ರಿಯಾಂಕಾ

*ಮನಮೋಹನ್ ಸಿಂಗ್ ಅವರು ರಿಮೋಟ್ ಕಂಟ್ರೋಲ್ ಪಿಎಂ ಎಂಬ ಸುದ್ದಿ ಹೊರಬಿದ್ದಿರುವುದಕ್ಕೆ ಪ್ರತಿಕ್ರಿಯಿ ಸಿರುವ ಪ್ರಿಯಾಂಕಾ, ಯುಪಿಎ ಅಧಿಕಾರ ಅವಧಿಯಲ್ಲಿ ಸೂಪರ್ ಪಿಎಂ ಆಗಿದ್ದರು ಎಂದಿದ್ದಾರೆ.
* 42 ವರ್ಷದ ಪ್ರಿಯಾಂಕಾ ಅವರು ಸಂಜಯ್ ಬರು ಅವರ ಪುಸ್ತಕದಲ್ಲಿರುವ ಆರೋಪಗಳನ್ನು ಅಲ್ಲಗೆಳೆದರು.
* ಇತ್ತೀಚೆಗೆ ಟಿವಿಗಳಲ್ಲಿ ಬರುತ್ತಿರುವ ಸೋನಿಯಾ ಗಾಂಧಿ ಅವರ ಮನವಿಯನ್ನು ಪ್ರಿಯಾಂಕಾ ಸಮರ್ಥಿಸಿಕೊಂಡಿದ್ದಾರೆ.

English summary
The war of words between Gandhis intensified on Tuesday, with Priyanka accusing estranged cousin Varun of “betraying the family” who hit back, saying he hadn’t crossed the “Lakshman rekha of decency” and his silence should not be read as a sign of weakness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X