ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶೂ' ಹೊಡೆತದಿಂದ ನಿತಿನ್‌ ಗಡ್ಕರಿ ಜಸ್ಟ್ ಮಿಸ್

|
Google Oneindia Kannada News

ಪುಣೆ, ಅ. 7 : ಚುನಾವಣಾ ಪ್ರಚಾರದ ವೇಳೆ ಕೇಂದ್ರ ರಸ್ತೆ ಸಾರಿಗೆ ಮತ್ತು ಬಂದರು ಸಚಿವ ನಿತಿನ್‌ ಗಡ್ಕರಿ ಮೇಲೆ ಶೂ ಎಸೆದ ವ್ಯಕ್ತಿಯೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ತಡರಾತ್ರಿ ಸಮೀಪದ ಕೊತ್ರುಡ್ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಮೇಧಾ ಕುಲಕರ್ಣಿ ಪರ ಮತಯಾಚನೆಯಲ್ಲಿ ತೊಡಗಿದ್ದ ಗಡ್ಕರಿ ಮೇಲೆ ಅಪರಿಚಿತ ಯುವಕನೊಬ್ಬ ಶೂ ಎಸೆದಿದ್ದಾನೆ.[ಇದು ಚುನಾವಣೆ, ಕೊಟ್ಟಿದ್ದು ಇಸ್ಕಳ್ಳಿ, ಸಿಕ್ಕಿದ್ದು ತಿನ್ಕಳ್ಳಿ]

nitin gadkari

ಪ್ರಚಾರ ಭಾಷಣ ಮಾಡಲು ಗಡ್ಕರಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಶೂ ಎಸೆದ. ಅಕ್ಕಪಕ್ಕದಲ್ಲಿದ್ದ ಬಿಜೆಪಿ ಕಾರ್ಯಕರ್ತರು ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ಆದರೆ ವ್ಯಕ್ತಿ ಎಸೆದ ಶೂ ಸಚಿವರಿಂದ ಕೊಂಚ ದೂರದಲ್ಲಿ ಬಿತ್ತು. ಮಾತನಾಡಲು ತೆರಳುತ್ತಿದ್ದ ಸಚಿವರಿಗೆ ಇದು ಇರಿಸು ಮುರಿಸು ಉಂಟುಮಾಡಿದ್ದು ಸುಳ್ಳಲ್ಲ.

ಆದರೆ ಈ ಘಟನೆಯಿಂದ ವಿಚಲಿತರಾಗದ ನಿತಿನ್ ಗಡ್ಕರಿ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೃತ್ಯ ಎಸಗಿದ ವ್ಯಕ್ತಿ ಮದ್ಯ ಸೇವಿಸಿದ್ದ ಎನ್ನಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.[ಆರ್.ಟಿ.ಒ ನಿರ್ಮೂಲನೆಯಾಗಲಿದೆ: ನಿತಿನ್ ಗಡ್ಕರಿ]

ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರದ ಕಾವು ಜೋರಾಗಿದ್ದು ವಿವಿಧ ಪಕ್ಷಗಳ ಪ್ರಮುಖ ರಾಜಕೀಯ ಮುಖಂಡರು ಪ್ರಚಾಋದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಕ್ಟೋಬರ್‌ 15 ಕ್ಕೆ ಚುನಾವಣೆ ನಡೆಯಲಿದ್ದು ಪ್ರಚಾರದ ಭರಾಟೆ ಮುಂದುವರಿದಿದೆ.

English summary
A youth was detained by city police tonight after he tried to hurl a shoe at Union Minister Nitin Gadkari at an election rally. BJP workers at the venue immediately handed over the person to police and Gadkari went ahead with his speech at the meeting in Kothrud area near Pune. The incident occurred when Gadkari arrived for the rally held in support of BJP candidate Medha Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X