ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಿ ನೌಕರರ ವರ್ಕ್ ಫ್ರಂ ಹೋಂ ರದ್ದು, ಕಚೇರಿಗೆ ವಾಪಸ್

|
Google Oneindia Kannada News

ನವದೆಹಲಿ, ಫೆಬ್ರವರಿ 7: ಎಲ್ಲಾ ಹಂತದ ಕೇಂದ್ರ ಸರ್ಕಾರಿ ನೌಕರರ ವರ್ಕ್​ ಫ್ರಂ ಹೋಮ್​ ರದ್ದುಗೊಳಿಸಲಾಗಿತ್ತು, ಇಂದಿನಿಂದಲೇ(ಫೆ.7)ಕಚೇರಿಗೆ ತೆರಳುವಂತೆ ಸೂಚನೆ ನಿಡಲಾಗಿದೆ.

ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಿಬ್ಬಂದಿ ಖಾತೆ ರಾಜ್ಯ ಸಚಿವರು, 'ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ ಮತ್ತು ಕೋವಿಡ್ ಪ್ರಕರಣಗಳ ಜೊತೆಗೆ ಸೋಂಕಿನ ಪ್ರಮಾಣದಲ್ಲಿನ ಇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಸೋಮವಾರದಿಂದ ಕಚೇರಿಯಲ್ಲಿ ಪೂರ್ಣ ಹಾಜರಾತಿಯನ್ನು ಪುನಃಸ್ಥಾಪಿಸಲು ನಿರ್ಧರಿಸಲಾಗಿದೆ ಮತ್ತು ಎಲ್ಲಾ ಮಟ್ಟದಲ್ಲಿ ಯಾವುದೇ ರೀತಿಯ ವಿನಾಯಿತಿ ನೀಡದೆ 7ನೇ ಫೆಬ್ರವರಿ 2022 ರಿಂದ ನಿಯಮಿತವಾಗಿ ಕಚೇರಿಯಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ' ಎಂದಿದ್ದಾರೆ.

Work From Home: ಕೇಂದ್ರ ಸರ್ಕಾರದ ಶೇ.50ರಷ್ಟು ನೌಕರರ ಹಾಜರಾತಿಗಷ್ಟೇ ಅನುಮತಿWork From Home: ಕೇಂದ್ರ ಸರ್ಕಾರದ ಶೇ.50ರಷ್ಟು ನೌಕರರ ಹಾಜರಾತಿಗಷ್ಟೇ ಅನುಮತಿ

'ಆದರೆ, ಇಲಾಖೆಗಳ ಮುಖ್ಯಸ್ಥರು, ನೌಕರರು ಎಲ್ಲಾ ಸಮಯದಲ್ಲೂ ಮುಖವಾಡಗಳನ್ನು ಧರಿಸುತ್ತಾರೆ ಮತ್ತು COVID ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು' ಎಂದು ಅವರು ಹೇಳಿದ್ದಾರೆ.

Full Office Attendance For All Central Govt Employees From February 7: Union Minister Jitendra Singh

ಜನವರಿ 31 ರಿಂದ ಫೆಬ್ರವರಿ 15 ರವರೆಗೆ, ಕೇಂದ್ರವು ಅಂಡರ್ ಸೆಕ್ರೆಟರಿ ಮಟ್ಟಕ್ಕಿಂತ ಕಡಿಮೆ ಇರುವ ಶೇ.50ರಷ್ಟು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ವಿಸ್ತರಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ಸಂಬಂಧಪಟ್ಟ ವಿಭಾಗಗಳಿಂದ ಅಭಿಪ್ರಾಯ ಪಡೆದು ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಹೊಸ ಕಛೇರಿಯ ಜ್ಞಾಪಕ ಪತ್ರವನ್ನು ಹೊರಡಿಸಿದ್ದು, ಸೋಮವಾರದಿಂದ ಎಲ್ಲಾ ಹಂತದ ಎಲ್ಲಾ ಉದ್ಯೋಗಿಗಳು ಯಾವುದೇ ರೀತಿಯ ವಿನಾಯ್ತಿ ಇರುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಫೆಬ್ರವರಿ 7 ರಿಂದ ಕಚೇರಿಯಲ್ಲಿ ಉಪಸ್ಥಿತಿ ಇರಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದ ಹಿನ್ನೆಲೆ ಜನವರಿ 31ರಂದು ಸಿಬ್ಬಂದಿ ಸಚಿವಾಲಯವು ಅಂಡರ್ ಸೆಕ್ರೆಟರಿ ಮಟ್ಟಕ್ಕಿಂತ ಕಡಿಮೆ ಇರುವ ಶೇ.50ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಿತ್ತು.

ಸಾಂಕ್ರಾಮಿಕ ಪರಿಸ್ಥಿತಿಯ ಅವಲೋಕನವನ್ನು ಭಾನುವಾರ ನಡೆಸಲಾಯಿತು. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಪಾಸಿಟಿವಿಟಿ ದರ ಸಹ ಕಡಿಮೆಯಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸೋಮವಾರದಿಂದ ಎಲ್ಲರೂ ಕಚೇರಿಗೆ ಬರಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ಈ ನಿಯಮ ಫೆಬ್ರವರಿ 7, 2022ರಿಂದ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದ್ದಾರೆ. ಕಚೇರಿಗೆ ಬರುವ ಇಲಾಖೆಗಳ ಮುಖ್ಯಸ್ಥರು, ನೌಕರರು ಎಲ್ಲಾ ಸಮಯದಲ್ಲೂ ಮಾಸ್ಕ್​ನ ಧರಿಸಬೇಕು ಮತ್ತು ಕೋವಿಡ್ ನಿಯಮಗಳನ್ನು ಅನುಸರಿಸಬೇಕು ಎಂದು ಅವರು ಹೇಳಿದರು.

ಕೋವಿಡ್ 3ನೇ ಅಲೆಯಲ್ಲಿ ಕೊರೊನಾ ಸೋಂಕು ಮಾರ್ಚ್ ತಿಂಗಳಿನಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ದೇಶವನ್ನು 2ನೇ ಹಾಗೂ 3ನೇ ಅಲೆ ತೀವ್ರವಾಗಿ ಬಾಧಿಸುತ್ತಿರುವ ಬೆನ್ನಲ್ಲೆ ಸೋಂಕು ಮುಂದಿನ ತಿಂಗಳ ವೇಳೆಗೆ ಇಳಿಮುಖವಾಗುವ ಸೂಚನೆ ದೊರೆತಿದೆ. ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ಕೋವಿಡ್ 3ನೇ ಅಲೆ ಇಳಿಮುಖವಾಗಲಿದ್ದು, ಅದಾಗ್ಯೂ ಮುಂಜಾಗ್ರತಾ ಕ್ರಮಗಳು ಮುಂದವರೆಯಬೇಕು ಎಂದು ಐಸಿಎಂಆರ್ ಸುಳಿವು ನೀಡಿದೆ.

ಈಗಾಗಲೇ ದೇಶದಲ್ಲಿ 3ನೇ ಅಲೆ ಉಲ್ಬಣಗೊಂಡು ಇದೀಗ ಇಳಿಕೆಯತ್ತ ಸಾಗಿದೆ. ಇದು ಮುಂದಿನ ತಿಂಗಳ ವೇಳೆಗೆ 3ನೇ ಅಲೆ ಇನ್ನಷ್ಟು ಇಳಿಕೆಯಾಗಲಿದೆ. ದೇಶದ ಕೆಲವು ಭಾಗಗಳಲ್ಲಿ ೩ನೇ ಅಲೆ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಐಸಿಎಂಆರ್‌ನ ಹೆಚ್ಚುವರಿ ಮಹಾ ನಿರ್ದೇಶಕ ಡಾ. ಸಮೀರನ್ ಪಾಂಡ ಅವರು ಹೇಳಿದ್ದಾರೆ.

Recommended Video

ವಿರಾಟ್ ಮಾತಿಗೆ ರೋಹಿತ್ ಏನಂದ್ರು: ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆದ ಮಾತು ಫುಲ್ ವೈರಲ್ | Oneindia Kannada

ಸೋಂಕು ಈ ತಿಂಗಳಾಂತ್ಯದ ವೇಳೆಗೆ ಮೂಲ ಮಟ್ಟಕ್ಕೆ ಇಳಿಯಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದ್ದು, ಮಾರ್ಚ್ ತಿಂಗಳಲ್ಲಿ 3ನೇ ಅಲೆಯಿಂದ ಹೊರ ಬರಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ಕೋಪೆ ವಿಶ್ಲೇಷಿಸಿದ್ದಾರೆ. ಮುಂದಿನ ಮೂರು-ನಾಲ್ಕು ವಾರಗಳಲ್ಲಿ ದೇಶಾದ್ಯಂತ ಮೂರನೇ ಅಲೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಚಂದ್ರಕಾಂತ್ ಲಹರಿ ತಿಳಿಸಿದ್ದಾರೆ.

ಒಮಿಕ್ರಾನ್ ರೂಪಾಂತರಿ ಸೋಂಕಿನ ಶೇ.90 ರಷ್ಟು ಪ್ರಕರಣಗಳಲ್ಲಿ ಪ್ರಾಬಲ್ಯ ಹೊಂದಿದ್ದು ಮತ್ತು ಡೆಲ್ಟಾ ಕೇವಲ ಕೇವಲ ಶೇ.೧೦ ರಷ್ಟು ಇದೆ. ವಿಶ್ವದಾದ್ಯಂತ ಸೋಂಕಿನ ಏರಿಕೆ ಮತ್ತು ಕುಸಿತ ಕಾಣುತ್ತಿದೆ. ಐಸಿಎಂಆರ್‌ನ ಗಣಿತದ ಮಾದರಿ ಆಧಾರಿತ ಪ್ರೊಜೆಕ್ಷನ್ ಪ್ರಕಾರ, ಮೂರು ರಾಜ್ಯಗಳಲ್ಲಿನ ಪ್ರಕರಣಗಳ ಸಂಪೂರ್ಣ ಗರಿಷ್ಠ ಮತ್ತು ಕುಸಿತವನ್ನು ಈ ತಿಂಗಳೊಳಗೆ ನಿರೀಕ್ಷೆಮಾಡಲಾಗಿದೆ.

English summary
Union minister Jitendra Singh has said full office attendance will be resumed for all central government employees from February 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X