ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 12ರಿಂದ ಸಂಚರಿಸಲಿರುವ ರೈಲುಗಳ ಸಮಗ್ರ ಪಟ್ಟಿ

|
Google Oneindia Kannada News

ಬೆಂಗಳೂರು, ಮೇ 11: ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಗೊಂಡಿದ್ದರಿಂದ ಮಾರ್ಚ್ 22ರಿಂದ ರೈಲು ಸಂಚಾರ ದೇಶದೆಲ್ಲೆಡೆ ಸ್ಥಗಿತಗೊಳಿಸಲಾಗಿತ್ತು. ಈಗ ಮೂರನೇ ಲಾಕ್ಡೌನ್ ಜಾರಿಯಲ್ಲಿರುವಾಗಲೇ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ಮೇ 12 ರಿಂದ 15 ಜೋಡಿಗಳಲ್ಲಿ ರೈಲುಗಳು ಸಂಚಾರ ಆರಂಭಿಸಲಿವೆ.

Recommended Video

ಸತ್ತ ಕೋತಿಯ ಮುಂದೆ ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಗೂಳಿ | Oneindia Kannada

ಶ್ರಮಿಕ ರೈಲುಗಳ ಪ್ರತಿ ಕೋಚ್ ಗಳಲ್ಲಿ ಕೇವಲ 54 ಪ್ರಯಾಣಿಕರಿಗೆ ಅನುಮತಿ ನೀಡಲಾಗಿತ್ತು. ಈ ಪ್ಯಾಸೆಂಜರ್ ರೈಲಿನಲ್ಲಿ 72 ಮಂದಿ ಪ್ರಯಾಣಿಸಬಹುದಾಗಿದೆ.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಟಿಕೆಟ್ ಬುಕ್ಕಿಂಗ್ ಮಾಡಲು IRCTC ವೆಬ್ ತಾಣಕ್ಕೆ ಭೇಟಿ ನೀಡಿ, ಎಂದಿನ ಕ್ರಮದಂತೆ ಟಿಕೆಟ್ ಬುಕ್ ಮಾಡಿ.. ಮೇ 11 ರ ಸಂಜೆ 4 ಗಂಟೆಯಿಂದ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. IRCTC ವೆಬ್ ಸೈಟ್ ನಲ್ಲಿ ಮಾತ್ರ ಮುಂಗಡ ಟಿಕೆಟ್ ಬುಕ್ಕಿಂಗ್ ಲಭ್ಯವಿದೆ. ರೈಲು ನಿಲ್ದಾಣಗಳಲ್ಲಿರುವ ಟಿಕೆಟ್ ಕೌಂಟರ್ ಬಂದ್ ಆಗಿರಲಿದೆ. ಪ್ಲಾಟ್ ಫಾರ್ಮ್ ಟಿಕೆಟ್ ಕೂಡಾ ನೀಡಲಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

Full list of passenger trains that will run from May 12

ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು

ಸುಮಾರು 15 ರಾಜಧಾನಿ ಮಾರ್ಗಗಳಲ್ಲಿ ಎಲ್ಲಾ ಹವಾನಿಯಂತ್ರಿತ ಪ್ಯಾಸೆಂಜರ್ ರೈಲುಗಳು ಮೇ 12ರಿಂದ ಸಂಚಾರ ಆರಂಭಿಸಲಿವೆ. ಪ್ರಯಾಣ ದರವನ್ನು ಸೂಪರ್ ಫಾಸ್ಟ್ ರೈಲಿನ ದರದಂತೆ ನಿಗದಿ ಮಾಡಲಾಗಿದೆ.

ವಿಶೇಷ ಪ್ಯಾಸೆಂಜರ್ ರೈಲುಗಳು
ಎಲ್ಲಿಂದ ಎಲ್ಲಿಗೆ ಎಂದಿನಿಂದ
ಹೌರಾ ನವದೆಹಲಿ ಮೇ 12, 2020
ದೆಹಲಿ ಹೌರಾ ಮೇ 13, 2020
ರಾಜೇಂದ್ರನಗರ್ ನವದೆಹಲಿ ಮೇ 12, 2020
ನವದೆಹಲಿ ರಾಜೇಂದ್ರನಗರ್ ಮೇ 13, 2020
ದಿಬ್ರುಗರ್ ನವದೆಹಲಿ ಮೇ 14, 2020
ನವದೆಹಲಿ ದಿಬ್ರುಗರ್ ಮೇ 12, 2020
ನವದೆಹಲಿ ಜಮ್ಮು ತಾವಿ ಮೇ 13, 2020
ಜಮ್ಮು ತಾವಿ ನವದೆಹಲಿ ಮೇ 14, 2020
ಬೆಂಗಳೂರು ನವದೆಹಲಿ ಮೇ 12, 2020
ನವದೆಹಲಿ ಬೆಂಗಳೂರು ಮೇ 12, 2020
ತಿರುವನಂತಪುರಂ ನವದೆಹಲಿ ಮೇ 15, 2020
ನವದೆಹಲಿ ತಿರುವನಂತಪುರಂ ಮೇ 13, 2020
ಚೆನ್ನೈ ಸೆಂಟ್ರಲ್ ನವದೆಹಲಿ ಮೇ 15, 2020
ನವದೆಹಲಿ ಚೆನ್ನೈ ಸೆಂಟ್ರಲ್ ಮೇ 13, 2020
ಬಿಲಾಸ್ ಪುರ್ ನವದೆಹಲಿ ಮೇ 14, 2020
ನವದೆಹಲಿ ಬಿಲಾಸ್ ಪುರ್ ಮೇ 12, 2020
ರಾಂಚಿ ನವದೆಹಲಿ ಮೇ 14, 2020
ನವದೆಹಲಿ ರಾಂಚಿ ಮೇ 13, 2020
ಮುಂಬೈ ಸೆಂಟ್ರಲ್ ನವದೆಹಲಿ ಮೇ 12, 2020
ನವದೆಹಲಿ ಮುಂಬೈ ಸೆಂಟ್ರಲ್ ಮೇ 13, 2020
ಅಹಮದಾಬಾದ್ ನವದೆಹಲಿ ಮೇ 12, 2020
ನವದೆಹಲಿ ಅಹಮದಾಬಾದ್ ಮೇ 13, 2020
ಅಗರ್ತಲಾ ನವದೆಹಲಿ ಮೇ 18, 2020
ನವದೆಹಲಿ ಅಗರ್ತಲಾ ಮೇ 20, 2020
ಭುವನೇಶ್ವರ ನವದೆಹಲಿ ಮೇ 13, 2020
ನವದೆಹಲಿ ಭುವನೇಶ್ವರ ಮೇ 14, 2020
ನವದೆಹಲಿ ಮಡಗಾಂವ್ ಮೇ 15, 2020
ಮಡಗಾಂವ್ ನವದೆಹಲಿ ಮೇ 17, 2020
ಸಿಕಂದರಾಬಾದ್ ನವದೆಹಲಿ ಮೇ 20, 2020
ನವದೆಹಲಿ ಸಿಕಂದರಾಬಾದ್ ಮೇ 17, 2020

English summary
The Indian Railways on Sunday announced it will gradually restart passenger train operations from May 12, initially with 15 pairs of trains. Here’s the complete list of trains which will start from May 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X