ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಲಾಸಕ್ಕೆ ವೀಸಾ ಆಹ್ವಾನ ನೀಡಿದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ

|
Google Oneindia Kannada News

ನವದೆಹಲಿ, ಡಿಸೆಂಬರ್ 17: ದೇಶದಿಂದ ತಲೆಮರೆಸಿಕೊಂಡು ಓಡಿಹೋಗಿ ಈಕ್ವೆಡಾರ್‌ನಲ್ಲಿ ನೆಲಸಿದ್ದಾನೆ ಎಂದು ನಂಬಲಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ಭಕ್ತರಲ್ಲಿ ಮನವಿ ಮಾಡಿದ್ದಾನೆ.

ಕೈಲಾಸಕ್ಕೆ ಬರಲು ಇಚ್ಚಿಸುವ ಭಕ್ತಾದಿಗಳು ವೀಸಾ ಅರ್ಜಿ ಸಲ್ಲಿಸುವಂತೆ ತಿಳಿಸಿರುವ ನಿತ್ಯಾನಂದ, ಯಾವ ರೀತಿ ಕೈಲಾಸಕ್ಕೆ ಬರಬಹುದು ಎಂಬುದನ್ನು ವಿವರಿಸಿರುವ ವೀಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದಾನೆ. ಈ ವೀಡಿಯೋದಲ್ಲಿ ಮಾರ್ಗದ ಜೊತೆಗೆ ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾನೆ.

ತನ್ನ ಕೈಲಾಸಕ್ಕೆ ಬರಲು ಇಚ್ಚಿಸುವ ಭಕ್ತಾದಿಗಳು ಆಸ್ಟ್ರೇಲಿಯಾದ ಸಿಡ್ನಿಗೆ ಮೊದಲು ಬರಬೇಕು. ಅಲ್ಲಿಂದ ಚಾರ್ಟಡ್‌ ವಿಮಾನದಲ್ಲಿ ಕೈಲಾಸಕ್ಕೆ ಬರುವ ಬಗೆಯನ್ನು ವೀಡಿಯೋದಲ್ಲಿ ತಿಳಿಸಿದ್ದಾನೆ, ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ, ಅದಕ್ಕೆ ಕೈಲಾಸ ಎಂಬ ಹೆಸರಿಟ್ಟು ಹೊಸ ದೇಶವನ್ನೇ ನಿರ್ಮಾಣ ಮಾಡಿದ್ದಾನೆ ಎನ್ನಲಾಗಿದೆ.

Fugitive Self-Styled Godman Nithyananda Urges Devotees to Apply visa for Kailasa

ಆದರೆ, ಈ ಕುರಿತು ಈಕ್ವೆಡಾರ್ ಸರ್ಕಾರವು ಈಗಾಗಲೇ ಸ್ಪಷ್ಟಪಡಿಸಿದ್ದು, ನಿತ್ಯಾನಂದ ಆ ರೀತಿಯ ಯಾವುದೇ ದ್ವೀಪವನ್ನು ಈಕ್ವೆಡಾರ್‌ನಲ್ಲಿ ಖರೀದಿ ಮಾಡಿಲ್ಲ ಎಂದಿದೆ.

English summary
Fugitive self-styled godman Nithyananda urged his devotees to apply a visa for 'Kailasa'. He released a video asking his devotees to come over to 'Kailasa'. Nithyananda is accused of rape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X