ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆ: ಟ್ವಿಟ್ಟರ್‌ನಲ್ಲಿ ಕೇಂದ್ರದ ವಿರುದ್ಧ ಆಕ್ರೋಶ

|
Google Oneindia Kannada News

ನವದೆಹಲಿ, ಮೇ 25: ಕರ್ನಾಟಕ ವಿಧಾನಸಭೆ ಮುಗಿಯುತ್ತಿದ್ದಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

12 ದಿನದಲ್ಲಿ 12 ಬಾರಿ ತೈಲ ದರ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 11 ರೂ.ನಷ್ಟು ಏರಿಕೆ ಕಂಡಿದ್ದರೆ, ಡೀಸೆಲ್ ದರ ಲೀಟರ್‌ಗೆ 7.27ನಷ್ಟು ತುಟ್ಟಿಯಾಗಿದೆ.

ಪೆಟ್ರೋಲ್ ದರ ಲೀಟರ್‌ಗೆ 25 ರೂ ಇಳಿಸಲು ಸಾಧ್ಯ: ಚಿದಂಬರಂಪೆಟ್ರೋಲ್ ದರ ಲೀಟರ್‌ಗೆ 25 ರೂ ಇಳಿಸಲು ಸಾಧ್ಯ: ಚಿದಂಬರಂ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದುಬಾರಿಯಾಗುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯೇತರ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿವೆ. ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಆದರೂ ತೈಲ ಬೆಲೆ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಜಿಎಸ್‌ಟಿಯಲ್ಲಿ ತನ್ನಿ

ಪೆಟ್ರೋಲ್ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ಅಡಿಯಲ್ಲಿ ತರುವುದರಿಂದ ಬೆಲೆ ಇಳಿಕೆಯಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ಅದನ್ನು ಮಾಡಲು ಕೇಂದ್ರದಲ್ಲಿರುವ ಅವರದೇ ಪಕ್ಷದಲ್ಲಿರುವ ಸರ್ಕಾರಕ್ಕೆ ಅವರು ಹೇಳಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.

ಗಗನಕ್ಕೇರಿದ ಇಂಧನ ದರ, ಪರ್ಯಾಯದತ್ತ ಕೇಂದ್ರದ ಚಿಂತನೆಗಗನಕ್ಕೇರಿದ ಇಂಧನ ದರ, ಪರ್ಯಾಯದತ್ತ ಕೇಂದ್ರದ ಚಿಂತನೆ

ಜನಸಾಮಾನ್ಯರಲ್ಲಿ ಆಕ್ರೋಶ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಎಲ್ಲ ವಸ್ತುಗಳ ದರ ಹೆಚ್ಚುತ್ತಲೇ ಇದೆ. ಅದೇ ರೀತಿ ಜನಸಾಮಾನ್ಯರ ಹತಾಶೆ ಮತ್ತು ಆಕ್ರೋಶ ಕೂಡ ಹೆಚ್ಚುತ್ತಿದೆ.

ಸುತ್ತಮುತ್ತಲಿನ ಎಲ್ಲವುಗಳ ಮೌಲ್ಯ ಏರಿಕೆಯಾಗುತ್ತಿದೆ. ನೀವು ಹೇಳಿಕೊಳ್ಳುವ 56 ಇಂಚನ್ನು ಕೂಡ ಏರಿಸಿಕೊಳ್ಳುವಿರಾ? ಎಂದು ಪ್ರಕಾಶ್ ರೈ #justasking ಹ್ಯಾಷ್ ಟ್ಯಾಗ್ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಜನಸಾಮಾನ್ಯರಿಗೊಂದು, ಭಕ್ತರಿಗೊಂದು

ನಾವು ವಿಭಿನ್ನವಾದ ಪೆಟ್ರೋಲ್ ದರ ಹೊಂದಬಹುದೇ? ಜನಸಾಮಾನ್ಯರಿಗೆ ಲೀಟರ್‌ಗೆ 50 ರೂ. ಮತ್ತು ಮೋದಿ ಭಕ್ತರಿಗೆ ಲೀಟರ್‌ಗೆ 100 ರೂ. ಎಂದು #justasking ಹ್ಯಾಷ್ ಟ್ಯಾಗ್ ಬಳಸಿ ಗುಜರಾತ್‌ನ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಲೇವಡಿ ಮಾಡಿದ್ದಾರೆ.

ಸಂಬಳ ಪೆಟ್ರೋಲ್ ದರವಾಗಲಿ

ನನ್ನ ಸಂಬಳವೂ ಪೆಟ್ರೋಲ್‌ನಂತೆ ಆಗಲಿ ಎಂದು ಬಯಸುತ್ತೇನೆ. ಪ್ರತಿದಿನ ನಾನು ಬೆಳಿಗ್ಗೆ ಎದ್ದಾಗ ಅದು ಏರಿಕೆಯಾಗಿರುವುದು ಗೊತ್ತಾಗಬೇಕು ಎಂದು ಸೌರಭ್‌ ಸಿಂಘಿ ಎಂಬುವವರು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

English summary
Fuel prices hiked 12th day also after the Karnataka Assembly elections. People from political parties, common people were unhappy with the continues hike. Here is some twitter reactions on price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X