ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಕ್ಕೇರಿದ ಇಂಧನ ದರ, ಪರ್ಯಾಯದತ್ತ ಕೇಂದ್ರದ ಚಿಂತನೆ

|
Google Oneindia Kannada News

ನವದೆಹಲಿ, ಮೇ 22: ಪ್ರತೀ ಲೀಟರ್ ಗೆ 78 ರೂಪಾಯಿನಾ..?! OMG, ಇನ್ಮೇಲೆ ಸೈಕಲ್ಲೋ, ಇಲೆಕ್ಟ್ರಿಕ್ ವೆಹಿಕಲ್ಲೋ, ಅಥವಾ ಯಾವುದೂ ಇಲ್ಲ ಅಂದ್ರೆ ದೇವರು ಕೊಟ್ಟ ಕಾಲನ್ನೋ ನಂಬಿಕೊಳ್ಳೋದು ಬೆಸ್ಟು ಎಂದು ಶ್ರೀಸಾಮಾನ್ಯ ಪೆಟ್ರೋಲ್ ಬಂಕ್ ಮುಂದೆ ನಿಂತುಕೊಂಡು ಬಾಯಿಬಿಟ್ಟರೆ ಅಚ್ಚರಿಯಿಲ್ಲ. ಹಾಗಿದೆ ಸದ್ಯದ ಪರಿಸ್ಥಿತಿ.

ಜೂನ್ 15, 2017 ರಿಂದ ಪ್ರತಿದಿನವೂ ಇಂಧನ ದರ ಪರಿಷ್ಕರಿಸಲಾಗುತ್ತಿರುವುದರಿಂದ ಗಣನೀಯ ಬದಲಾವಣೆ ಕಂಡುಬರುತ್ತಿದೆ.

ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರಿನಲ್ಲಿ ಮೇ 22 ರಂದು ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 78.12ರೂ! ಡಿಸೆಲ್ ದರ ಪ್ರತಿ ಲೀ.ಗೆ 69.25! ಇದು ಸಿಲಿಕಾನ್ ಸಿಟಿ ಬೆಂಗಳೂರಿಗರ ತಾಪತ್ರಯವಾದರೆ, ವಾಣಿಜ್ಯನಗರಿ ಮುಂಬೈಯ ಕತೆ ಮತ್ತಷ್ಟು ಕಷ್ಟದ್ದು. ಅಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 83.16 ರೂ.!

Fuel prices are sky rocketing in India

ಗಗನಕ್ಕೇರಿದ ಇಂಧನ ದರ ಶ್ರೀಸಾಮಾನ್ಯನಲ್ಲಿ ಆತಂಕ ಹುಟ್ಟಿಸಿದೆ. ಕಳೆದ 16 ವರ್ಷಗಳಲ್ಲಿ ನಂತರ ಇಂಧನ ದರ 2013 ರ ಸೆಪ್ಟೆಂಬರ್ ನಲ್ಲಿ ದಾಖಲೆಯ ಏರಿಕೆ ಕಂಡಿತ್ತು. ಅದಾದ ನಂತರ 2018 ರ ಮೇ ತಿಂಗಳಿನಲ್ಲಿ ದಾಖಲೆಯ ಏರಿಕೆ ಕಂಡಿದೆ.

ದಿನೇ ದಿನೇ ಹೆಚ್ಚುತ್ತಿರುವ ಇಂಧನ ಬೆಲೆ ಸರ್ಕಾರಕ್ಕೂ ದೊಡ್ಡ ತಲೆನೋವಾಗಿದೆ. "ನಾವು ಪರ್ಯಾಯ ಇಂಧನಗಳತ್ತ ಗಂಭೀರವಾಗಿ ಚಿಂತಿಸುತ್ತದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಪರಿಹಾರ ಕಂಡುಕೊಳ್ಳುತ್ತೇವೆ" ಎನ್ನುತ್ತಾರೆ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್. ಆದರೆ ಸದ್ಯದ ಪರಿಸ್ಥಿತಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಅಗತ್ಯ ಎಂಬಂತಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ ಈ ಪರಿ ಏರಿಕೆ ಕಂಡರೆ ಶ್ರೀಸಾಮಾನ್ಯನಿಗೆ ಬವಣೆ ತಪ್ಪಿದ್ದಲ್ಲ.

English summary
Checking Diesel price before filling your fuel tank has become an important thing now because, from June 15, 2017, as the diesel price are to be revised on a Daily basis. As per May 22nd, Petrol prices are 78.12 per letre and Diesel prices are 69.25 per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X