ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆ: ಕಾರಣ ಬಿಚ್ಚಿಟ್ಟ ಧರ್ಮೇಂದ್ರ ಪ್ರಧಾನ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08: ನಿರಂತರವಾಗಿ ಏರುತ್ತಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ದರದ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿದ್ದಾರೆ.

"ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುವುದಕ್ಕೆ ಕಾರಣ ಅಂತಾರಾಷ್ಟ್ರಿಯ ಮಾರುಕಟ್ಟೆ, ರೂಪಾಯಿ ಸ್ಥಿರವಾಗಿಯೇ ಇದೆ. ಆದರೆ ಸಮಸ್ಯೆ ತಂದೊಡ್ಡುತ್ತಿರುವುದು ಡಾಲರ್" ಎಂದು ಪ್ರಧಾನ್ ಹೇಳಿದ್ದಾರೆ.

ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ? ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?

ಆಗಸ್ಟ್ 15 ರಿಂದ ಸತತವಾಗಿ ಏರುತ್ತಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಜನಸಾಮಾನ್ಯನಲ್ಲಿ ಆತಂಕ ಸೃಷ್ಟಿಸಿದೆ. "ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅಂಶಗಳು ಕಾರಣ. ಈ ಅಂಶಗಳು ಭಾರತದ ಕೈಯಲ್ಲಿಲ್ಲ" ಎಂದು ಪ್ರಧಾನ್ ಹೇಳಿದ್ದಾರೆ.

Fuel Price hike: Dharmendra Pradan reveals the reason

"ಭಾರತದ ಕರೆನ್ಸಿ ರೂಪಾಯಿ ಡಾಲರ್ ಎದುರು ವೈಫಲ್ಯ ಕಂಡಿದ್ದೇ ತೈಲ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ಭಾರತದ ರೂಪಾಯಿ ದುರ್ಬಲವಾಗಿಲ್ಲ. ಸಮಸ್ಯೆಯಿರುವುದು ಅಮೆರಿಕನ್ ಡಾಲರ್ ನಲ್ಲಿ. ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಅಮೆರಿಕನ್ ಡಾಲರ್ ಮೇಲೆಯೇ ಅವಲಂಬಿತವಾಗಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಅಮೆರಿಕನ್ ಡಾಲರ್ ಅತೀ ದೊಡ್ಡ ಎಕ್ಸ್ ಚೇಂಜ್ ಕರೆನ್ಸಿ ಆಗಿರುವುದು ಇದಕ್ಕೆ ಕಾರಣ" ಎಂದು ಅವರು ಹೇಳಿದ್ದಾರೆ.

ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌

ಬಹುಪಾಲು ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 80 ರೂಪಾಯಿಯ ಗಡಿ ದಾಟಿದ್ದು, ಡೀಸೆಲ್ ಬೆಲೆ ಲೀಟರ್ ಗೆ ರೂ.75 ರ ಆಸುಪಾಸಿನಲ್ಲಿದೆ. ಇಂಧನ ದರ ದಿನೇ ದಿನೇ ಏರಿಕೆಯಾಗುತ್ತಿದ್ದು ಜನಸಾಮಾನ್ಯನಿಗೆ ಕೈಗೆಟುಕದ ಸ್ಥಿತಿ ತಲುಪಿದೆ.

English summary
Union Minister Dharmendra Pradhan on fuel price hike: "Today Indian currency is stronger as ever, in comparison to all other currencies. But how do we purchase oil? Through Dollars. Today Dollar is, in a way, world's biggest exchange currency. That is creating problem for us:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X