ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕಿ ಜ್ವರ; ಕೋಳಿ ಮಾಂಸ ಸೇವನೆ ಬಗ್ಗೆ FSSAI ಎಚ್ಚರಿಕೆ...

|
Google Oneindia Kannada News

ನವದೆಹಲಿ, ಜನವರಿ 22: ಕಳೆದ 20 ದಿನಗಳಿಂದ ದೇಶದಲ್ಲಿ ಹಕ್ಕಿ ಜ್ವರ ಭೀತಿ ಕಾಣಿಸಿಕೊಂಡಿದ್ದು, ಇದುವರೆಗೂ ಆರು ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿವೆ.

ಹಕ್ಕಿ ಜ್ವರ ಭೀತಿಯಿಂದ ಕೋಳಿ ಮಾಂಸ ಮಾರಾಟ, ಸೇವನೆಯೂ ಕೊಂಚ ತಗ್ಗಿದೆ. ಈ ಬಗ್ಗೆ ಕೆಲವು ಗೊಂದಲಗಳು ಜನರಲ್ಲಿವೆ. ಈ ಅವಧಿಯಲ್ಲಿ ಕೋಳಿ ಮಾಂಸ ಸೇವನೆ ಮಾಡಬಹುದೇ ಬೇಡವೇ, ಮಾಂಸವನ್ನು ಹೇಗೆ ಸೇವಿಸಬೇಕು ಎಂಬ ಕುರಿತು ಗೊಂದಲಗಳಿವೆ. ಹೀಗಾಗಿ ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಸ್ ಎಸ್ ಎಐ) ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಆ ಮಾರ್ಗಸೂಚಿಗಳೇನು? ಮುಂದೆ ಓದಿ...

 ಕರಿದ ಕೋಳಿ ಮಾಂಸ ಮಾರದಂತೆ ರೆಸ್ಟೊರೆಂಟ್ ಗಳಿಗೆ ದೆಹಲಿ ಪಾಲಿಕೆ ಸೂಚನೆ ಕರಿದ ಕೋಳಿ ಮಾಂಸ ಮಾರದಂತೆ ರೆಸ್ಟೊರೆಂಟ್ ಗಳಿಗೆ ದೆಹಲಿ ಪಾಲಿಕೆ ಸೂಚನೆ

ಅರ್ಧ ಬೇಯಿಸಿದ ಮೊಟ್ಟೆ ಸೇವನೆ ಬೇಡ

ಅರ್ಧ ಬೇಯಿಸಿದ ಮೊಟ್ಟೆ ಸೇವನೆ ಬೇಡ

ಹಕ್ಕಿ ಜ್ವರ ಪ್ರಕರಣ ಕಂಡುಬಂದ ತಕ್ಷಣ ಕೋಳಿ ಫಾರ್ಮ್ ಮಾಲೀಕರು ಹಾಗೂ ಜನರು ಭಯ ಪಡುವ ಅಗತ್ಯವಿಲ್ಲ ಎಂದಿರುವ ಎಫ್ ಎಸ್ ಎಸ್ಎಐ, ಮಾಂಸ ಸೇವನೆ ಬಗ್ಗೆ ಕೆಲವು ನಿಯಮಗಳನ್ನು ಪಾಲಿಸಿದರೆ ಸಾಕು ಎಂದಿದೆ. ಅರ್ಧ ಬೇಯಿಸಿದ ಮೊಟ್ಟೆ ಹಾಗೂ ಅರೆಬರೆ ಬೆಂದ ಕೋಳಿ ಮಾಂಸವನ್ನು ತಿನ್ನಲೇಬೇಡಿ ಎಂದು ಜನರಿಗೆ ಸೂಚಿಸಿದೆ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿದರಷ್ಟೇ ಸೇವಿಸಲು ಯೋಗ್ಯ ಎಂದು ಸಲಹೆ ನೀಡಿದೆ.

ಮೊಟ್ಟೆಯಲ್ಲಿಯೂ ವೈರಸ್ ಇರಬಹುದು!

ಮೊಟ್ಟೆಯಲ್ಲಿಯೂ ವೈರಸ್ ಇರಬಹುದು!

ಕೋಳಿ ಮಾಂಸ ಸೇವನೆ ಹಾಗೂ ಮಾರಾಟದ ಕುರಿತು ಎಫ್ ಎಸ್ ಎಸ್ ಎಐ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. "ಹಕ್ಕಿ ಜ್ವರದ ಸಂದರ್ಭ ಕೋಳಿ ಮಾಂಸ ಸೇವನೆ/ ಮಾರಾಟಕ್ಕೆ ಸಂಬಂಧಿಸಿದಂತೆ ಸುರಕ್ಷಿತ ನಿರ್ವಹಣೆ, ಪ್ರಕ್ರಿಯೆ ಹಾಗೂ ಕೋಳಿ ಮಾಂಸದ ಸೇವನೆಯ ನಿಯಮಗಳು" ಎಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಹಕ್ಕಿ ಜ್ವರದ ವೈರಸ್ ಹಕ್ಕಿಗಳಲ್ಲಿ ಬಹುಮುಖ್ಯವಾಗಿ ಶ್ವಾಸಕೋಶ ಹಾಗೂ ಜಠರ ಕರುಳಿನ ಭಾಗದಲ್ಲಿ ಇರುತ್ತದೆ. ಸಾಮಾನ್ಯವಾಗಿ ಮಾಂಸದಲ್ಲಿ ಇರುವುದಿಲ್ಲ. ಆದರೆ H5N1 ವೈರಸ್ ಅತಿ ಪರಿಣಾಮಕಾರಿಯಾದರೆ ಹಕ್ಕಿಯ ಇಡೀ ದೇಹವನ್ನೇ ಆವರಿಸುತ್ತದೆ. ವೈರಸ್ ತೀಕ್ಷ್ಣವಾಗಿದ್ದರೆ, ಮೊಟ್ಟೆ ಒಳಗೆ ಹಾಗೂ ಹೊರಭಾಗದಲ್ಲಿಯೂ ಇರಬಹುದು. ಅಸ್ವಸ್ಥಗೊಂಡ ಹಕ್ಕಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತವೆ. ಆದರೆ ರೋಗ ಕಾಣಿಸಿಕೊಂಡ ಆರಂಭದಲ್ಲಿ ಹಕ್ಕಿ ಮೊಟ್ಟೆ ಇಟ್ಟಿದ್ದರೆ, ಮೊಟ್ಟೆಯಲ್ಲಿಯೂ ವೈರಸ್ ಇರುತ್ತದೆ ಎಂದು ತಿಳಿಸಿದೆ.

ಹಕ್ಕಿ ಜ್ವರ; ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಕೇಂದ್ರ ಸಚಿವಹಕ್ಕಿ ಜ್ವರ; ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಕೇಂದ್ರ ಸಚಿವ

ಮಾಂಸವನ್ನು ತೆರೆದಿಡದಂತೆ ಸೂಚನೆ

ಮಾಂಸವನ್ನು ತೆರೆದಿಡದಂತೆ ಸೂಚನೆ

ಹಕ್ಕಿ ಜ್ವರದ ಪ್ರಕರಣ ಕಾಣಿಸಿಕೊಂಡಿದೆ ಎಂದರೆ ಮಾಂಸ ಸೇವನೆಯಲ್ಲಿ ಸುರಕ್ಷಿತವಾಗಿರುವುದು ಹೆಚ್ಚು ಅವಶ್ಯಕ. ಆದ್ದರಿಂದ ಅರ್ಧ ಬೇಯಿಸಿದ ಮೊಟ್ಟೆ ಹಾಗೂ ಕೋಳಿ ಮಾಂಸವನ್ನು ಸೇವಿಸದಂತೆ ಸೂಚನೆ ನೀಡಿದೆ. ಮಾಂಸವನ್ನು ತೆರೆದಿಡಬೇಡಬಾರದು ಎಂದೂ ತಿಳಿಸಿದೆ. ಹಕ್ಕಿ ಜ್ವರ ಕಾಣಿಸಿಕೊಂಡ ಪ್ರದೇಶಗಳಿಂದ ಮೊಟ್ಟೆ ಹಾಗೂ ಕೊಳಿ ಮಾಂಸವನ್ನು ಆಮದು ಮಾಡಿಕೊಳ್ಳದಂತೆ ತಿಳಿಸಲಾಗಿದೆ.

ಕೋಳಿ ಮಾರಾಟ ಮಾಡುವವರು ಕೈಗಳಿಗೆ ಗ್ಲೌವ್ ಗಳನ್ನು, ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯ. ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು, ಕೋಳಿ ಮಾಂಸದ ತ್ಯಾಜ್ಯವನ್ನೂ ಸೂಕ್ತವಾಗಿ ನಿರ್ವಹಿಸಬೇಕು ಎಂದು ತಿಳಿಸಿದೆ.

ಭಾರತದಲ್ಲಿ ವಲಸೆ ಹಕ್ಕಿಗಳಿಂದ ಬಂದಿರುವ ಸೋಂಕು

ಭಾರತದಲ್ಲಿ ವಲಸೆ ಹಕ್ಕಿಗಳಿಂದ ಬಂದಿರುವ ಸೋಂಕು

ದೇಶದ ಆರು ರಾಜ್ಯಗಳಲ್ಲಿ ಈವರೆಗೂ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿದೆ. ಕೇರಳ, ಹರಿಯಾಣ ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಡ, ಪಂಜಾಬ್ ನಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಂಡುಬಂದಿವೆ. ಭಾರತದಲ್ಲಿ ಪ್ರಮುಖವಾಗಿ ಬೇರೆಡೆಯಿಂದ ವಲಸೆ ಬಂದ ಹಕ್ಕಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

English summary
The Food Safety and Standards Authority of India (FSSAI) has suggested guidelines ahead of bird flu outbreak,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X