ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ವೆಬ್ ಸೈಟಿನ ಹುಳುಕು ತೋರಿಸಿದ ಹ್ಯಾಕರ್

|
Google Oneindia Kannada News

ನವದೆಹಲಿ, ಜನವರಿ 14: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ವೆಬ್​ಸೈಟಿನಲ್ಲಿ ಹುಳುಕುಗಳಿವೆ. ಹ್ಯಾಕರ್​ಗಳು ಕೆಲ ಭಾಗದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿರುವ ಸಾಧ್ಯತೆಯೆ ಎಂದು ಫ್ರೆಂಚ್ ಸೈಬರ್​ ಭದ್ರತಾ ಸಂಶೋಧಕ ಎಲಿಯಟ್​ಆಲ್ಡರ್ಸನ್​ ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ಕ್ಲರ್ಕ್‌ ಹೇಳಿಕೆ : ಯಾರು, ಏನು ಹೇಳಿದರು?ನರೇಂದ್ರ ಮೋದಿ ಕ್ಲರ್ಕ್‌ ಹೇಳಿಕೆ : ಯಾರು, ಏನು ಹೇಳಿದರು?

ಇದು ಪರಿಣತ ಹ್ಯಾಕರ್​ವೊಬ್ಬನ ಕೃತ್ಯದಂತೆ ತೋರುತ್ತಿದೆ. ನಿಮ್ಮ ವೆಬ್ ಸೈಟ್ ಮೇಲೆ ಪೂರ್ಣ ನಿಯಂತ್ರಣ ಹೊಂದಬಲ್ಲೆ ಎಂಬುದರ ಸುಳಿವು ನೀಡಲು ಆತ ಈ ರೀತಿ ಮಾಡಿದ್ದಾನೆ. ಈ ಬಗ್ಗೆ ವಿವರ ತಿಳಿಯಲು ನನ್ನನ್ನು ಸಂಪರ್ಕಿಸಿ ಎಂದು ಟ್ವೀಟ್ ಮಾಡಿದ್ದರು.

ಕಾರ್ಡ್​ ಮಾಹಿತಿಗಳನ್ನು ಹ್ಯಾಕ್​ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ ಫ್ರಾನ್ಸಿನ ಎಲಿಯಟ್ ಆಲ್ಡರ್ಸನ್ ನಿಜವಾದ ಹೆಸರು ರಾಬರ್ಸ್ ಬ್ಯಾಪ್ಟಿಸ್ಟ್.

ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್‌ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್‌ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿ

French hacker claims data on Narendra Modi website compromised

ಈ ವೆಬ್​ಸೈಟ್​ಅನ್ನು ತಾವು ಹ್ಯಾಕ್​ ಮಾಡಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಆನಂತರ ತಮ್ಮ ಟ್ವೀಟ್ ಗೆ ಪ್ರತಿಕ್ರಿಯಿಸಿ, ಟೀಂ ಮೋದಿ ಅವರು ನನ್ನ ಟ್ವೀಟ್ ನೋಡಿದ್ದಾರೆ. ನನ್ನನ್ನು ಸಂಪರ್ಕಿಸಿದ್ದಾರೆ. ವೆಬ್ ಸೈಟ್ ನಲ್ಲಿ ಕೆಲ ಬದಲಾವಣೆಗಳನ್ನು ಸೂಚಿಸಿದ್ದೇನೆ ಎಂದಿದ್ದಾರೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಖ್ಯಸ್ಥ ಆರ್.ಎಸ್. ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಆಧಾರ್ ಸಂಖ್ಯೆ ಬಹಿರಂಗಗೊಳಿಸಿ, ಇದರಿಂದ ತನಗೆ ಯಾವ ತೊಂದರೆ ನೀಡಲು ಸಾಧ್ಯವಿದೆ ಎಂದು ಟ್ವಿಟ್ ಲೋಕದಲ್ಲಿ ಸವಾಲು ಹಾಕಿದ್ದರು. ಒಂದು ವೇಳೆ ತನ್ನ ಆಧಾರ್ ಮಾಹಿತಿ ಹ್ಯಾಕ್ ಮಾಡಿ ಟ್ವೀಟ್​ನಲ್ಲಿ ಹಾಕಿದರೂ ಅಂಥವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದ್ದರು.

ಟ್ವಿಟ್ಟರ್ ​ನಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗಿಲ್ಲ : ಟ್ರಾಯ್ ಟ್ವಿಟ್ಟರ್ ​ನಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗಿಲ್ಲ : ಟ್ರಾಯ್

ಫ್ರೆಂಚ್ ಹ್ಯಾಕರ್ ರಾಬರ್ಟ್ ಬಾಪ್ಟಿಸ್ಟ್ ಅವರು ಎಲ್ಲಿಯೊಟ್ ಆಲ್ಡೆರ್ಸನ್ ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದು, ಭದ್ರತಾ ಸಂಶೋಧಕರಾಗಿ ಈ ಹ್ಯಾಕಿಂಗ್ ಸವಾಲನ್ನು ಸ್ವೀಕರಿಸಿದರು.

ಆಧಾರ್ ಸಂಖ್ಯೆ ಸಿಕ್ಕರೆ ವ್ಯಕ್ತಿಯ ಪ್ಯಾನ್, ಬ್ಯಾಂಕ್ ಖಾತೆ ಸಂಖ್ಯೆ, ಖಾಸಗಿ ಫೋನ್ ನಂಬರ್, ಜನ್ಮದಿನಾಂಕದಂಥ ಹಲವು ವೈಯಕ್ತಿಕ ಮಾಹಿತಿಗಳನ್ನು ಹ್ಯಾಕ್ ಮಾಡಬಹುದು ಎಂದು ಹೇಳಿದ್ದರು. ಆದರೆ, ಸರ್ಕಾರಿ ಅಧಿಕಾರಿಯಾಗಿರುವ ಶರ್ಮಾ ಅವರ ಬಗ್ಗೆ ಈಗಾಗಲೇ ಕೆಲವು ವೆಬ್​ಸೈಟ್​ಗಳಲ್ಲಿರುವ ಅಲ್ಪಸ್ವಲ್ಪ ವೈಯಕ್ತಿಕ ಮಾಹಿತಿ ಸುಲಭವಾಗಿ ಸಿಗುತ್ತದೆ, ಇದನ್ನು ಹ್ಯಾಕ್ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಪ್ರಕಟಣೆ ಹೊರಡಿಸಿತ್ತು.

English summary
Robert Baptiste aka Elliot Alderson says that official website of Narendra Modi has security problems and that he can do a full security if the Indian Prime Minister contacts him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X