ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ?

|
Google Oneindia Kannada News

ನವದೆಹಲಿ, ಏಪ್ರಿಲ್ 13: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಫ್ರಾನ್ಸ್‌ನೊಂದಿಗೆ ಹೊಸದಾಗಿ ರಫೇಲ್ ಒಪ್ಪಂದ ಮಾಡಿಕೊಂಡ ಕೆಲವೇ ತಿಂಗಳಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ಫ್ರಾನ್ಸ್ ಮೂಲದ ದೂರಸಂಪರ್ಕ ಕಂಪೆನಿ 'ರಿಲಯನ್ಸ್ ಅಟ್ಲಾಂಟಿಕ್ ಫ್ಲ್ಯಾಗ್ ಫ್ರಾನ್ಸ್'ನ 143.7 ಮಿಲಿಯನ್ ಯುರೋ (162.6 ಮಿಲಿಯನ್ ಡಾಲರ್) ತೆರಿಗೆ ಮೊತ್ತವನ್ನು ಫ್ರಾನ್ಸ್ ಸರ್ಕಾರ ಮನ್ನಾ ಮಾಡಿತ್ತು ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ರಫೇಲ್ ಒಪ್ಪಂದದ ಬಗ್ಗೆ 2015ರ ಅಕ್ಟೋಬರ್‌ನಲ್ಲಿ ಭಾರತ ಮತ್ತು ಫ್ರಾನ್ಸ್ ಕಂಪೆನಿ ಡಸಾಲ್ಟ್ ಏವಿಯೇಷನ್ ಮಾತುಕತೆ ವ್ಯವಹಾರ ನಡೆಸುವ ಸಂದರ್ಭದಲ್ಲಿ ಅಂಬಾನಿಗೆ ಸೇರಿದ ಕಂಪೆನಿಯ ತೆರಿಗೆ ವಿವಾದವನ್ನು ಬಗೆಹರಿಸಲಾಗಿತ್ತು ಎಂದು ಮಾಧ್ಯಮ ಸಂಸ್ಥೆ 'ಡಿ ಮೊಂಡೆ' ವರದಿ ಮಾಡಿದೆ.

ಸಾಲ ತೀರಿಸಲು ನೆರವಾದ ಅಣ್ಣ-ಅತ್ತಿಗೆ ಧನ್ಯವಾದ ಹೇಳಿದ ಅನಿಲ್ ಅಂಬಾನಿ ಸಾಲ ತೀರಿಸಲು ನೆರವಾದ ಅಣ್ಣ-ಅತ್ತಿಗೆ ಧನ್ಯವಾದ ಹೇಳಿದ ಅನಿಲ್ ಅಂಬಾನಿ

ಇದಕ್ಕೂ ಕೆಲವು ತಿಂಗಳ ಮುನ್ನ 2015ರ ಏಪ್ರಿಲ್‌ನಲ್ಲಿ ನರೇಂದ್ರ ಮೋದಿ ಫ್ರಾನ್ಸ್‌ಗೆ ಅಧಿಕೃತ ಭೇಟಿ ನೀಡಿದ ವೇಳೆ ಡಸಾಲ್ಟ್ ಏವಿಯೇಷನ್‌ನಿಂದ 36 ಸಂಪೂರ್ಣ ನಿರ್ಮಿತ ರಫೇಲ್ ಯುದ್ಧ ವಿಮಾನಗಳ ಖರೀದಿಯನ್ನು ಪ್ರಕಟಿಸಿದ್ದರು.

 french authorities waived off anil ambani tax debt after narendra modi Rafale deal

ಅನಿಲ್ ಅಂಬಾನಿ ಒಡೆತನದ 'ರಿಲಯನ್ಸ್ ಅಟ್ಲಾಂಟಿಕ್ ಫ್ಲ್ಯಾಗ್ ಫ್ರಾನ್ಸ್' ಕಂಪೆನಿ 2007-2010ರ ಅವಧಿಯಲ್ಲಿ 60 ಮಿಲಿಯನ್ ಯುರೋ ಬಾಕಿ ಉಳಿಸಿಕೊಂಡಿರುವುದು ಫ್ರಾನ್ಸ್ ತೆರಿಗೆ ಅಧಿಕಾರಿಗಳು ನಡೆಸಿದ ತನಿಖೆಯಿಂದ ಪತ್ತೆಯಾಗಿತ್ತು. ಈ ವೇಳೆ ಕಂಪೆನಿಯು 7.6 ಮಿಲಿಯನ್ ಯುರೋವನ್ನು ತೆರಿಗೆಯಾಗಿ ಪಾವತಿಸುವುದಾಗಿ ಹೇಳಿತ್ತು. ಇದನ್ನು ನಿರಾಕರಿಸಿದ್ದ ಫ್ರಾನ್ಸ್ ಅಧಿಕಾರಿಗಳು ಮತ್ತೊಂದು ತನಿಖೆ ನಡೆಸಿದ್ದರು ಎಂದು ವರದಿ ಹೇಳಿದೆ.

ರಫೇಲ್: ಎರಡು ವಾರ ಮುನ್ನವಷ್ಟೇ ಫ್ರೆಂಚ್ ಅಧಿಕಾರಿಗಳನ್ನು ಭೇಟಿಮಾಡಿದ್ದ ಅಂಬಾನಿ ರಫೇಲ್: ಎರಡು ವಾರ ಮುನ್ನವಷ್ಟೇ ಫ್ರೆಂಚ್ ಅಧಿಕಾರಿಗಳನ್ನು ಭೇಟಿಮಾಡಿದ್ದ ಅಂಬಾನಿ

2010-2012ರ ಅವಧಿಯಲ್ಲಿ ನಡೆಸಿದ ಮತ್ತೊಂದು ತನಿಖೆಯ ಬಳಿಕ ಅಧಿಕಾರಿಗಳು ಹೆಚ್ಚುವರಿ 91 ಮಿಲಿಯನ್ ಯುರೋ ತೆರಿಗೆಯನ್ನು ಪಾವತಿಸುವಂತೆ ಅನಿಲ್ ಅಂಬಾನಿ ಕಂಪೆನಿಗೆ ಸೂಚಿಸಿದ್ದರು.

2015ರ ಏಪ್ರಿಲ್‌ನಲ್ಲಿ ಮೋದಿ ಅವರು ರಫೇಲ್ ಡೀಲ್ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ರಿಲಯನ್ಸ್ ಫ್ರಾನ್ಸ್‌ನಲ್ಲಿ ಬಾಕಿ ಉಳಿಸಿಕೊಂಡಿದ್ದ ತೆರಿಗೆ ಕನಿಷ್ಠ 151 ಮಿಲಿಯನ್ ಯುರೋದಷ್ಟಿತ್ತು ಎಂದು ವರದಿ ಹೇಳಿದೆ.

ಅನಿಲ್ ಅಂಬಾನಿಗಾಗಿ ಎಚ್‌ಎಎಲ್ ಮುಳುಗಿಸುತ್ತಿದ್ದಾರೆ: ರಾಹುಲ್ ಆರೋಪ ಅನಿಲ್ ಅಂಬಾನಿಗಾಗಿ ಎಚ್‌ಎಎಲ್ ಮುಳುಗಿಸುತ್ತಿದ್ದಾರೆ: ರಾಹುಲ್ ಆರೋಪ

ಆದರೆ, ರಫೇಲ್ ಒಪ್ಪಂದದ ಘೋಷಣೆಯಾದ ಆರೇ ತಿಂಗಳಿನಲ್ಲಿ ಫ್ರಾನ್ಸ್ ಅಧಿಕಾರಿಗಳು ಅಂಬಾನಿ ಕಂಪೆನಿಯ 151 ಮಿಲಿಯನ್ ಮೂಲ ತೆರಿಗೆ ಸಾಲದ ವಸೂಲಿ ಮಾಡುವ ಬದಲು 143.7 ಮಿಲಿಯನ್ ಯುರೋ ತೆರಿಗೆ ಸಾಲವನ್ನು ಮನ್ನಾ ಮಾಡಿದ್ದರು ಮತ್ತು 7.3 ಮಿಲಿಯನ್ ಯುರೋಗಳಷ್ಟು ಮೊತ್ತವನ್ನು ಸೆಟ್ಲ್‌ಮೆಂಟ್ ರೂಪದಲ್ಲಿ ರಿಲಯನ್ಸ್‌ನಿಂದ ಪಡೆದುಕೊಂಡಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

English summary
A local French media reported that, French authorities waived off taxes worth 143.7 million euros of Anil Ambani owned telecom company 'Reliance Atlantic Flag France' six months after Prime Minister Narendra Modi visited France and announced Rafale deal of 36 fighter jets from France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X