ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ ಸಹಭಾಗಿತ್ವದಲ್ಲಿ ಉಚಿತ ವೈ-ಫೈ: 700 ರೈಲ್ವೆ ನಿಲ್ದಾಣಗಳಿಗೆ ವಿಸ್ತರಣೆ

By Nayana
|
Google Oneindia Kannada News

ಬೆಂಗಳೂರು, ಜೂನ್‌ 27: ಭಾರತೀಯ ರೈಲ್ವೆ ಇಲಾಖೆ ಈಗ ಸಾರ್ವಜನಿಕರಿಗೆ 700ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಯನ್ನು ಕಲ್ಪಿಸುತ್ತಿದೆ.

ಹಾಗೂ ಪ್ರತಿ ತಿಂಗಳು 80 ಲಕ್ಷ ಮಂದಿ ಬಳಸುತ್ತಿದ್ದಾರೆ. ತಂತ್ರಜ್ಞಾನ ದಿಗ್ಗಜ ಗೂಗಲ್‌ ಸಹಭಾಗಿತ್ವದಲ್ಲಿ ಈ ಸೇವೆಯನ್ನು ಒದಗಿಲಾಗುತ್ತಿದೆ. ರೈಲ್ವೆಯ ಅಧೀನ ಸಂಸ್ಥೆಯಾಗಿರುವ, ರೈಲ್‌ಟೆಲ್‌ ಈ ಸಂಬಂಧ ಟ್ವೀಟ್‌ ಮಾಡಿದ್ದು, ವಿಷಯ ತಿಳಿಸಿದೆ.

ಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ

ಈ ಉಚಿತ ವೈ-ಫೈ ವ್ಯವಸ್ಥೆಯಲ್ಲಿ ಗ್ರಾಹಕರಿಗೆ 30 ನಿಮಿಷ್ಯಗಳ ಕಾಲ ಉಚಿತವಾಗಿ ಇಂಟರ್‌ನೆಟ್‌ ಸೌಲಭ್ಯವನ್ನು ಪಡೆಯಬಹುದಾಗಿದೆ. ಮಾಸಿಕ 7 ಸಾವಿರ ಟಿಬಿ ಡೇಟಾ ಬಳೆಕಯಾಗುತ್ತದೆ ಎಂದು ತಿಳಿಸಿದೆ.

Free WiFi extends to 700 railway stations

ಈ ಉಚಿತ ವೈ-ಫೈ ಸೇವೆಯು 407 ನಗರ ರೈಲ್ವೆ ನಿಲ್ದಾಣಗಳು ಹಾಗೂ 298 ಗ್ರಾಮೀನ ರೈಲ್ವೆ ನಿಲ್ದಾಣಗಳಲ್ಲಿ ಲಭ್ಯವಾಗುತ್ತದೆ. ಕರ್ನಾಟಕ ಸೇರಿದಂತೆ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ದೊರೆಯುತ್ತದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣ ಸೇರಿದಂತೆ 115 ರೈಲ್ವೇ ನಿಲ್ದಾಣಗಳು ಹೈ ಸ್ಪೀಡ್ ವೈಫೈ ಸೌಲಭ್ಯ ಪಡೆಯಲಿವೆ.

ನೈರುತ್ಯ ರೈಲ್ವೇಯ 115 ರೈಲು ನಿಲ್ದಾಣಗಳು 18 ತಿಂಗಳಿನಲ್ಲಿ ಹೈಸ್ಪೀಡ್ ವೈಫೈ ಪಡೆಯಲಿದ್ದು, ಈಗಾಗಲೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ಮತ್ತು ಮೈಸೂರು, ಹುಬ್ಬಳ್ಳಿ ರೈಲು ನಿಲ್ದಾಣಗಳು ಫ್ರೀ ವೈಫೈ ಸೌಲಭ್ಯ ಪಡೆದಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 18 ತಿಂಗಳಿನಲ್ಲಿ ದೇಶದ ಪ್ರಮುಖ ರೈಲ್ವೇ ನಿಲ್ದಾಣಗಳು ಹೈಸ್ಪೀಡ್ ವೈಫೈ ಸೌಲಭ್ಯ ಪಡೆಯಲಿವೆ.

English summary
Indian railway has extended free WiFi service in 115 railway stations to 700. Monthly around 80 lakhs passengers have using this facility since it was introduced early this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X